
ಕಳೆದ ಎರಡು ಸೀಸನ್ ಮೂಲಕ ಕ್ರಿಕೆಟ್ ಲೋಕದಲ್ಲಿಯೂ ಗುರುತಿಸಿಕೊಂಡ ಕೀರ್ತಿ ಟಿ ಸಿ ಎಲ್ ಮೂಲಕ ಕಿರುತೆರೆ ಕಲಾವಿದರಿಗೆ ಲಭ್ಯವಾಗಿದೆ. ಇದೀಗ ಮೂರನೇ ಸೀಸನ್ ಈ ಹಿಂದಿಗಿಂತ ಅದ್ಧೂರಿಯಾಗಿ ನಡೆಯುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ.
ವಾಸವಿ ವೆಂಚರ್ಸ್ ಸಂಸ್ಥೆಯ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದ್ದು, ಇದರಲ್ಲಿ ಆರು ತಂಡಗಳು ಭಾಗಿಯಾಗಲಿವೆ. ‘ಕ್ರೇಜಿ ಕಿಲ್ಲರ್ಸ್’, ‘ಗ್ಯಾಂಗ್ ಗರುಡಾಸ್’, ‘ಗ್ರೌಂಡ್ ಹಂಟರ್ಸ್’, ‘ಜಟಾಯು ಜೈಂಟ್ಸ್’, ‘ಕಿಂಗ್ ಕೇಸರಿಸ್’ ಮತ್ತು ‘ಸರ್ಪ ಸ್ಟ್ರೈಕರ್ಸ್’ ಎನ್ನುವ ಆಕರ್ಷಕವಾದ ಆರು ಹೆಸರುಗಳು ಮತ್ರು ಅವರು ಈ ಬಾರಿ ಧರಿಸಲಿರುವ ವಸ್ತ್ರ ಶೈಲಿಯ ಅನಾವರಣ ಬುಧವಾರ ರಾಜರಾಜೇಶ್ವರಿ ನಗರದ ‘ಬಿಗ್ ಬ್ಯಾರಲ್’ ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಆವರಣದಲ್ಲಿ ನೆರವೇರಿತು.

ವಾಸವಿ ವೆಂಚರ್ಸ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದ್ದು, ಇದರಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ. ಟಿಸಿಎಲ್ ನಲ್ಲಿ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ತೊಡಗಿವೆ. ಈ ಪಂದ್ಯಾವಳಿಯಲ್ಲಿ ಕ್ರೇಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೈಕರ್ ಎಂಬ 6 ತಂಡಗಳಿರಲಿದ್ದು, ಕಿರುತರೆ ನಟ-ನಟಿಯರು ಭಾಗವಹಿಸಲಿದ್ದಾರೆ.

ದೀಪಕ್ ಹಾಗೂ ಮಂಜೇಶ್ ಸಾರಥ್ಯದಲ್ಲಿ ನಡೆಯುತ್ತಿರುವ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬರೋಬ್ಬರಿ 102 ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಈಗಾಗಲೇ ಎರಡು ಸೀಸನ್ಸ್ ಯಶಸ್ವಿಯಾಗಿ ಪೂರೈಸಿರುವ ಟಿಸಿಎಲ್, ಮೂರನೇ ಸೀಸನ್ ಪಂದ್ಯಾವಳಿಗೆ ಸಜ್ಜಾಗಿದೆ. ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಸ್ಟರ್ ಆನಂದ್, ಬಿಗ್ ಬಾಸ್ ಮಂಜು ಪಾವಗಡ, ಸಂಸ್ಥಾಪಕ ದೀಪಕ್, ಸಹ ಸಂಸ್ಥಾಪಕರಾದ ಮಂಜೇಶ್ ಮತ್ತು ವೈ ವಿ ಕಾರ್ತಿಕ್, ದಿವ್ಯ ಪ್ರಸಾದ್ ಸೇರಿದಂತೆ ಹಲವು ಕಿರುತೆರೆ ಕಲಾವಿದರು ಭಾಗಿಯಾಗಿದ್ದರು. ಆರು ತಂಡಗಳ ನಾಯಕರಾಗಿ ಕಲಾವಿದರಾದ ಹರ್ಷ, ಯೋಗಿ, ಶರತ್, ಕರಿ ಬಸವ, ಹರೀಶ್ ಮತ್ತು ರಂಜಿತ್ ಇದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ದೀಪಕ್, ಟಿ ಸಿ ಎಲ್ ಆಯೋಜಕರು:9513110088
www.tclkannada.com





