ಮಾಸದ ಮಾತುಗಳ ಜೊತೆಗೆ ರಮೇಶ್ ಅರವಿಂದ್

ರಮೇಶ್ ಅರವಿಂದ್ ಮಾತುಗಳೆಂದರೆ ಮರುಳಾಗದವರು ಕಡಿಮೆ. ಅಂಥ ಮಾತಿನ ಮೋಡಿಗಾರ ಈಗ ಕತೆ ಹೇಳಲು ಶುರು ಮಾಡಿದ್ದಾರೆ. ಅದು Storytell ಕನ್ನಡ ಕೆಟಲಾಗ್ ನ ಭಾಗವಾಗಿ ಶ್ರೀಯುತ ರಮೇಶ್ ಅರವಿಂದ್ ರವರ Storytell original ಸರಣಿ ಶೀಘ್ರದಲ್ಲೇ ಹೊರಬರಲಿದೆ. ‘ಮಾಸದ ಮಾತುಗಳು with Ramesh’ ಹೆಸರಿನ ಸರಣಿಯಲ್ಲಿ ಕೇಳುಗರಿಗೆ ಬದುಕಿನುದ್ದಕ್ಕೂ ನೆರವಾಗಬಲ್ಲ ಅನೇಕ ಸಂಗತಿಗಳು ಇರಲಿವೆ. ಅದನ್ನು 2022ರಲ್ಲಿ 12 ತಿಂಗಳುಗಳ ಅವಧಿಯಲ್ಲಿ ಸಣ್ಣ ಕಂತುಗಳ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಈ ಸರಣಿಯ ಎಲ್ಲಾ 12 ಸಂಚಿಕೆಗಳು ಹೊಸ ವರ್ಷದ ಎರಡನೇ ದಿನ ಬಿಡುಗಡೆಯಾಗಲಿದೆ. ಜೀವನದಿಂದ ಸ್ಪೂರ್ತಿ ಪಡೆದಂಥ ಕತೆಗಳನ್ನು ರಮೇಶ್ ಅರವಿಂದ್ ಅವರೇ ಬರೆದಿದ್ದು ಈ ಸರಣಿ ವಿಶೇಷವಾಗಿ Storytel ನಲ್ಲಿ ಮಾತ್ರ ಲಭ್ಯವಿರುತ್ತದೆ.

ರಮೇಶ್ ಮಾತು

”ಪ್ರತೀ ವರ್ಷದಂತೆ ಈ ವರ್ಷವೂ ನಾನು ಹೊಸ ರೀತಿಯಲ್ಲಿ ನಿಮಗೆ 2022ರ ಶುಭಾಶಯ ಕೋರುತ್ತಿದ್ದೇನೆ. ಈ ಬಾರಿ, Storytel ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ನಾನು ಶುಭ ಹಾರೈಸುತ್ತಿದ್ದು, ನಿಮಗೊಂದಷ್ಟು ಭರವಸೆ ಒದಗಿಸುವ, ನಿಮ್ಮನ್ನು ಬುದ್ಧಿವಂತ, ಶ್ರೀಮಂತ ಮತ್ತು ಸಂತುಷ್ಟರನ್ನಾಗಿಸುವ ಕೆಲವು ಸಲಹೆಗಳನ್ನು ನೀಡಲೆಂದೇ ಅದನ್ನು ವಿನ್ಯಾಸಗೊಳಿಸಿದ್ದೇನೆ. ಈ ಹೊಸ ಬಗೆಯ ಗುಟುಕಿನ ಮೂಲಕ, ನಾನೇ ಪ್ರೀತಿಯಿಂದ ತಯಾರಿಸಿದ 90 ನಿಮಿಷಗಳ ಈ ‘ ಥಾಟ್ ಕಾಕ್ ಟೇಲ್’ ಸವಿಯಬಹುದಾಗಿದೆ. ಇದು ಮುಂಬರುವ ಅಮೋಘವಾದ ವರ್ಷವೊಂದಕ್ಕೆ ಸೊಗಸಾದ ಭೂಮಿಕೆ ಒದಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲ ‘ ಎನ್ನುತ್ತಾರೆ ರಮೇಶ್ ಅರವಿಂದ್.

ಅವರು ತಮ್ಮ ಅನುಭವಗಳು, ಬದುಕಿನಿಂದ ಕಲಿತ ಪಾಠಗಳು, ಮತ್ತು ಜೀವನ ಮೌಲ್ಯಗಳನ್ನು ಬರಹಗಳ ರೂಪದಲ್ಲಿ ಹೆಣೆದಿದ್ದು, ನಮ್ಮ ನಿತ್ಯದ ಬದುಕಿನ ಸೊಬಗಿನ ಕುರಿತು ಮಾತನಾಡಿದ್ದಾರೆ. ಈ ಸರಣಿ ಎಲ್ಲಾ ವಯಸ್ಸಿನ ಓದುಗರಿಗೂ ಇಷ್ಟವಾಗಲಿದ್ದು, ಜೀವನವನ್ನು ಗೆಲುವಿನ ದೃಷ್ಟಿಕೋನದಿಂದ ನೋಡಲು ಪ್ರೇರಣೆ ಒದಗಿಸುವುದರಲ್ಲಿ ಯಾವ ಅ ಅನುಮಾನವೂ ಇಲ್ಲ.

‘ ಮಾಸದ ಮಾತುಗಳು with Ramesh ಎಂಬ ಶೀರ್ಷಿಕೆಯಲ್ಲಿರುವ ‘ ಮಾಸದ’ ಎಂಬ ಪದಕ್ಕೆ ತಿಂಗಳಿನ ಎಂಬ ಅರ್ಥದ ಜೊತೆಗೆ ಅಳಿ‌ಸಲಾರದ ಎಂಬ ಅರ್ಥವೂ ಇರುವುದರಿಂದ ಶೀರ್ಷಿಕೆಯೂ ಕಾರ್ಯಕ್ರಮದಷ್ಟೇ ವಿಶಿಷ್ಟವಾಗಿದೆ. ಈ ತತ್ವವನ್ನು ಆಧರಿಸಿಯೇ ಸರಣಿಯ ಪ್ರತಿಯೊಂದು ಕಂತನ್ನು ವಿನ್ಯಾಸಗೊಳಿಸಲಾಗಿದ್ದು, ಇಲ್ಲಿನ ಕಲಿಕೆಗಳನ್ನು ಯಾರು ಬೇಕಾದರೂ ಮತ್ತು ಯಾವಾಗ ಬೇಕಾದರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಅಲ್ಲದೇ ರಮೇಶ್ ರವರ ವಿಶೇಷ ಶೈಲಿಯ ವಾಚನದಲ್ಲಿ ಅವರ ಸ್ನೇಹದ ವ್ಯಕ್ತಿತ್ವ ಎದ್ದುಕಾಣುತ್ತಿದ್ದು, ಅವರು ನೇರವಾಗಿ ನಮ್ಮ ಜೊತೆಗೆ ಮಾತನಾಡುತ್ತಿದ್ದಾರೇನೋ ಎಂದೆನಿಸುವುದು ಖಂಡಿತ.

ಇತ್ತೀಚಿನ ವರ್ಷಗಳಲ್ಲಿ ಒಬ್ಬ ಪ್ರೇರಣಾದಾಯಕ ವಾಗ್ಮಿಯಾಗಿ ಅಪಾರ ಮನ್ನಣೆ ಗಳಿಸಿರುವ ರಮೇಶ್ ಅರವಿಂದ್, ಜೀವನವನ್ನೂ ಸಮಗ್ರ ದೃಷ್ಟಿಕೋನದಿಂದ ನೋಡುವಂತೆ ತಮ್ಮ ಕೇಳುಗರನ್ನು ವಿಶೇಷವಾಗಿ ಯುವ ಕೇಳುಗರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಶಿಕ್ಷಣ, ವೃತ್ತಿಗೆ ಸಂಬಂಧಿಸಿದಂತೆ ಅಥವಾ ಯುವ ಉದ್ದಿಮೆದಾರರಾಗಿ, ವಿಶೇಷವಾಗಿ ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸಿ, ಯಶಸ್ಸು ಗಳಿಸಿರುವ ಕುರಿತು ವಿಸ್ತ್ರತವಾಗಿ ಮಾತನಾಡಲಿದ್ದಾರೆ.

Recommended For You

Leave a Reply

error: Content is protected !!
%d bloggers like this: