
ನಟಿ ದಿವ್ಯಾ ಸುರೇಶ್ ಗಾಯಗೊಂಡಿದ್ದಾರೆ. ಅವರಿಗೆ ಅಪಘಾತವಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ ತಮ್ಮ ದ್ವಿಚಕ್ರವಾಹನ ಅಪಘಾತಕ್ಕೊಳಗಾಗಿ ಅವರು ಗಾಯಗೊಂಡಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಸ್ಪರ್ಧಿ ದಿವ್ಯಾ ಸುರೇಶ್ ಮುಖ ಮತ್ತು ಕಾಲಿಗೆ ಗಾಯಗಳಾಗಿವೆ. ಸೋಮವಾರ ವ್ಯಾಕ್ಸಿನೇಷನ್ ಮಾಡಿಸಿಕೊಂಡು ಬರುವಾಗ ರಸ್ತೆ ಮಧ್ಯೆ ತಮ್ಮ ದ್ವಿಚಕ್ರವಾಹನದಿಂದ ಬಿದ್ದು ಗಂಭೀರ ಸ್ವರೂಪದ ಏಟು ಮಾಡಿಕೊಂಡಿದ್ದಾರೆ. ರಸ್ತೆ ಮಧ್ಯೆ ನಾಯಿಗಳು ಜಗಳವಾಡುತ್ತಿದ್ದು ಅನಿರೀಕ್ಷಿತವಾಗಿ ಎಗರಾಡಿದ್ದೇ ದಿವ್ಯಾ ಬೀಳಲು ಕಾರಣವಾಯಿತು ಎಂದು ಸ್ವತಃ ದಿವ್ಯಾ ಸುರೇಶ್ ಸಿನಿಕನ್ನಡ.ಕಾಮ್ ಗೆ ಮಾಹಿತಿ ನೀಡಿದ್ದಾರೆ.
ಮುಖದಲ್ಲಿ ಗಾಯವಾಗಿರುವ ಕಾರಣ ಬಾಯಿತೆರೆಯುವುದು ಕೂಡ ಕಷ್ಟವಾಗಿದೆ. ಹಾಗಾಗಿ ಎರಡು ದಿನಗಳಿಂದ ಊಟ ಮಾಡಲಾಗುತ್ತಿಲ್ಲ. ಲಿಕ್ವಿಡ್ ಸೇವಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.