
ಜಿಮ್ ರವಿ ಕಲಾವಿದರಾಗಿ ಕನ್ನಡಿಗರಿಗೆ ಪರಿಚಿತರು. ಆದರೆ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿದ್ದು, ಸದ್ಯದಲ್ಲೇ ‘ಪುರುಷೋತ್ತಮ’ನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ರವಿಯವರು ಕತೆಯನ್ನು ಎಷ್ಟು ಇಷ್ಟಪಟ್ಟಿದ್ದರೆಂದರೆ ಸ್ವತಃ ನಿರ್ಮಾಣವನ್ನೂ ಮಾಡಿದ್ದಾರೆ. ನಾಯಕಿಯಾಗಿ ನಟಿಸುತ್ತಿರುವ ಅಪೂರ್ವ ಅವರು ಕೂಡ ಅಷ್ಟೇ. “ಕತೆ ಕೇಳಿದ ಕೂಡಲೇ ಈ ಚಿತ್ರ ಮಾಡಬೇಕು ಎಂದುಕೊಂಡೆ. ಪಾತ್ರದ ಮೂಲಕ, ಚಿತ್ರದ ಮೂಲಕ ಉತ್ತಮ ಸಂದೇಶ ನೀಡಲಾಗಿದೆ. ಚಿತ್ರಕ್ಕೆ ಯಾವುದೇ ಕೊರತೆಯಾಗದಂತೆ ಚಿತ್ರೀಕರಿಸಿದ್ದಾರೆ” ಎಂದಿದ್ದಾರೆ.

ಮೈಸೂರಿನ ಯುವ ನಟಿ ನಿವೇದಿತಾ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ಮಾಡಿದ್ದಾರೆ. ಈಕೆ ರಂಗಭೂಮಿಯಿಂದ ಬಂದಿರುವ ಪ್ರತಿಭಾವಂತೆ. ಚಿತ್ರಕ್ಕೆ ನೃತ್ಯ ನಿರ್ದೇಶಕ ಕಲೈ ಮಾಸ್ಟರ್. ನಿರ್ದೇಶಕ ಅಮರನಾಥ್ ಎಸ್ ವಿಯವರಿಗೆ ಇದು ಮೂರನೇ ಚಿತ್ರ. ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಚಿತ್ರ ಮೇ 6ರಂದು ತೆರೆಗೆ ಬರಲಿದೆ.
