
ವಿಚಾರಣೆಯ ಹೆಸರಲ್ಲಿ ಪೊಲೀಸರು ನಡೆಸುವ ದೌರ್ಜನ್ಯ ಎಲ್ಲರಿಗೂ ತಿಳಿದಿರುತ್ತದೆ. ಅಂಥದೊಂದು ಘಟನೆ ಅಮಾಯಕನೊಬ್ಬನ ಬದುಕಲ್ಲಿ ನಡೆದಾಗ ಆಗುವಂಥ ಪ್ರಮುಖ ಬದಲಾವಣೆಗಳ ಕತೆಯೇ ವಿಚಾರಣೆ.
‘ವಿಚಾರಣೆ’ ಚಿತ್ರದ ಮುಹೂರ್ತವು ಬನ್ನೇರುಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 2ರ ಶುಕ್ರವಾರ ನೆರವೇರಿತು.
ಯಶ ಫಿಲ್ಮ್ಸ್ ಬ್ಯಾನರ್ ನಲ್ಲಿ ಆರ್ ಭಾಗ್ಯ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಮಡೆನೂರು ಮನು ನಾಯಕರಾಗಿ ನಟಿಸುತ್ತಿದ್ದಾರೆ. ಜೋಡಿಯಾಗಿ ನಟಿಸಿರುವ ಜಾನುವಿಗೆ ಇದು ಮೊದಲ ಚಿತ್ರ. ನೃತ್ಯ ನಿರ್ದೇಶಕ ಅಕುಲ್ ವಿಚಾರಣೆಗೆ ‘ಆಕ್ಷನ್ ಕಟ್’ ಹೇಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ನಿರ್ಮಾಪಕಿ ಆರ್ ಭಾಗ್ಯ ಈ ಹಿಂದೆ ‘ಪಟ್ಟಾಭಿಷೇಕ’, ‘ಬೆಲ್’ ಮತ್ತು ‘ಎಫ್ ಐಆರ್’ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ‘ವಿಚಾರಣೆ’ಯಲ್ಲಿ ದೌರ್ಜನ್ಯ ಮಾತ್ರವಲ್ಲ ಪ್ರೀತಿ, ಪ್ರೇಮ ಮೊದಲಾದ ಭಾವನಾತ್ಮಕ ಅಂಶಗಳೂ ಇವೆ ಎಂದು ನಿರ್ದೇಶಕ ಅಕುಲ್ ಭರವಸೆ ನೀಡುತ್ತಾರೆ.
ನಾಲ್ಕು ಫೈಟ್ ಮತ್ತು ಮೂರು ಚಿತ್ರದ ಹೈಲೈಟ್. ಹಾಗಂತ ಇದು ಸಿದ್ಧ ಸೂತ್ರದ ಚಿತ್ರಕ್ಕಿಂತ ವಿಭಿನ್ನವಾಗಿ ಮೂಡಿ ಬರಲಿದೆ ಎಂದು ತಂಡದ ಅನಿಸಿಕೆ. ಜಿ ವಿ ರಮೇಶ್ ಛಾಯಾಗ್ರಾಹಕರಾಗಿದ್ದು, ಸತೀಶ್ ಬಾಬು ಸಂಗೀತ ನೀಡಲಿದ್ದಾರೆ.
