ಹೆಣ್ಣುಮಕ್ಕಳ ‘ಕ್ರಾಂತಿ’ ಗೀತೆ

ಸಿನಿಮಾ ಹಾಡುಗಳ ಸಾಹಿತ್ಯ ಲೋಕದಲ್ಲಿ ಆಗಾಗ ಅಪರೂಪಕ್ಕೆ ಹೆಣ್ಮಕ್ಕಳು ಹಾಡು ಬರೆಯೋದು ಹೌದಾದರೂ ಅದೊಂಥರ ಗಂಡಸರ ಸಾಮ್ರಾಜ್ಯವೇ ಎಂಬಂತಾಗಿ ಹೋಗಿದೆ. ಇದರ ನಡುವೆ ದರ್ಶನ್ ಅವರಂಥ ಮಾಸ್ ನಟನ ಚಿತ್ರದ ಹಾಡೊಂದಕ್ಕೆ ಕನ್ನಡದ ಹುಡುಗಿಯೊಬ್ಬಳು ಸಾಹಿತ್ಯ ಬರೆದಿದ್ದಾರೆ. ಈ ಎಲ್ಕ ವಿಚಾರವನ್ನು ನಟ, ಬರಹಗಾರ ನವೀನ್ ಸಾಗರ್ ಇಲ್ಲಿ ಅವಲೋಕನ ಮಾಡಿದ್ದಾರೆ.

ಶ್ರೀದೇವಿ ಮಂಜುನಾಥ್ ನಂದಿನಿ ನಂಜಪ್ಪ ಇವರೆಲ್ಲ ಮಾಸಿಗೆ ಮಾಸು ಕ್ಲಾಸಿಗೆ ಕ್ಲಾಸು ಬರೆಯೋ ತಾಕತ್ತಿರುವ ಸಿನಿ ಬರಹಗಾರರು. ಹಾಡಿಗೂ ಡೈಲಾಗಿಗೂ ಸೈ ಎನಿಸಿಕೊಳ್ಳಬಲ್ಲವರು. ಇವರಿಬ್ಬರ ಹಾಗೆ ಇನ್ನೂ ಹಲವು ಮಹಿಳಾ ಪ್ರತಿಭೆಗಳು ಈ ವಿಭಾಗದ ಬಾಗಿಲು ತಟ್ಟುತ್ತಲೂ ಇರಬಹುದು. ಅವಕಾಶ ಸಿಗಬೇಕಷ್ಟೆ. ಒಂದೇ ಅವಕಾಶದಲ್ಲಿ ಪೂವ್ ಮಾಡಲು ಸಾಧ್ಯ ಆಗದೇ ಇರಬಹುದು. ಆದರೆ ಬರೀತಾ ಬರೀತಾ ಗಂಡುಬರಹಗಾರರನ್ನೂ ಮೀರಿಸೋ ಸಾಮರ್ಥ್ಯ ಕ್ರಿಯೇಟಿವಿಟಿ ಪದಸರಕಂತೂ ಇವರಲ್ಲಿ ಹೇರಳವಾಗಿ ಇದೆ. ವಾಸಂತಿ ನಲಿದಾಗ ಇರಬಹುದು ಸೀರಿಯಲ್ ಇರಬಹುದು ಫೇಸ್ ಬುಕ್ ಪೋಸ್ಟ್ ಇರಬಹುದು ಶ್ರೀದೇವಿ ಮಂಜುನಾಥ್ ಬರಹದಲ್ಲಿ ಕಿಕ್ ಸಿಗುತ್ತದೆ. ಅಂತೆಯೇ ನಂದಿನಿ ಸದ್ಯದ ಸೀರಿಯಲ್ ಬರಹಗಾರರಲ್ಲಿ ಇರುವ ಏಕೈಕ ಲೇಡಿ ಸ್ಟಾರ್ ರೈಟರ್. ಹಲವರು ಬರೀತಾರೆ ಆದರೆ ನಂದಿನಿ ತಾಕತ್ತೇ ಬೇರೆ. ಅವರ ಕವನಗಳೂ ಅಷ್ಟೆ.. ಅಣಕು ಗೀತೆಗಳೂ ಅಷ್ಟೆ ಒನ್ ಲೈನರ್ ಗಳೂ ಅಷ್ಟೆ.. ಸಿಕ್ಕಾಪಟ್ಟೆ ಗಾಢ.

ಅವರ ಕವನಗಳಲ್ಲಿ ಮೀಟರ್ ಇರತ್ತೆ. ಸ್ಟೇಟ್ ಫಾರ್ವಡ್್ರ ಬರಹಗಳಲ್ಲೂ ಮೀಟ್ರಿಗೆ ಕೊರತೆ ಇರಲ್ಲ. ಅವರಿಗೆ ಅವಕಾಶ ಸಿಗಬೇಕು. ಸೂಕ್ತ ಸಂಭಾವನೆ ಸಮೇತ.

ನಿನ್ನೆ ಮಾನಸಗಂಗೆ ಕಾವ್ಯನಾಮಾಂಕಿತೆ ಬರೆದ ಆಲ್ಬಮ್‌ಸಾಂಗ್ ಒಂದು ರಿಲೀಸಾಗಿದೆ. ಫೇಸ್ಟುಕಲ್ಲಿ ಒನ್‌ಲೈನ್ ನಾಲ್ಕಲೈನ್ ಕವನಗಳಿಂದ ಭಾವುಕತೆ ರಸಿಕತೆ ಎಲ್ಲವನ್ನೂ ಹುಟ್ಟಿಸುವ ತಾಕತ್ತಿರುವ ಮಾನಸಗಂಗೆಗೆ ಟ್ಯೂನಿಗೆ ಬರೆಯುವ ವಿದ್ಯೆ ಹೊಸತು. ಆದರೆ ಅದಕ್ಕೆ ಸುಲಭಕ್ಕೆ ಒಗ್ಗಿಕೊಂಡಂತೆ ಅನಿಸುತ್ತದೆ ಹಾಡು ಕೇಳಿದಾಗ. ಸಶಕ್ತ ಸಾಲು ಬರೆದು ಮೊದಲ ಗೀತೆಯಲ್ಲೇ ಸೈಅನಿಸಿಕೊಂಡಿದ್ದಾರೆ ಮಾನಸಗಂಗೆ. ಗಾಯಕಿಗೂ ಅದು ಮೊದಲನೇ ಪ್ರಯತ್ನವಂತೆ. ಪಳಗಿದ ಗಾಯಕಿ ಹಾಡಿದ್ದರೆ ಈ ಗೀತೆಗೆ ಇನ್ನಷ್ಟು ಬಲ ಬರುತ್ತಿತ್ತು ಎಂದು ನನಗನಿಸಿತು. ಆದರೂ ಪ್ರೋತ್ಸಾಹದ ಮಾತು ಹೇಳಲು ಅಡ್ಡಿಲ್ಲ.

ಈ ಮೂವರ ಜೊತೆ ಇವತ್ತು ಇನ್ನೊಬ್ಬಾಕೆಯನ್ನು ಮೆಚ್ಚಿಮಾತಾಡುವ ಸಂದರ್ಭ, ಹೆಸರು ಸಾಯಿಸುಕನ್ಯಾ, ನಿಖಿಲ್ ಕುಮಾರ್ ಸ್ವಾಮಿಯ ಸೀತಾರಾಮ ಕಲ್ಯಾಣ ಚಿತ್ರದ .. ನಿನ್ನ ರಾಜಾ ನಾನು ನನ್ನ ರಾಣಿ ನೀನು..ಪ್ರೇಮ ಕಲ್ಯಾಣವೇ ಇನ್ನು.. ಎಂಬ ಸೂಪರ್ ಹಿಟ್ ಗೀತೆ ಬರೆದವರು ಸುಕನ್ಯಾ.

ಕೋಲಾರದ ಹಟ್ಟಿಗಣಿ ಅಂತೇನೋ ಮೀಟ್ರಿಗೆ ಬರೀತಾ ಕೊಂಚ ಗಲಿಬಿಲಿ ಮಾಡ್ಕೊಂಡಿದ್ದು ಬಿಟ್ರೆ ಆ ಹಾಡು ಹಾಡೋಕೂ ಕುಣಿಯೋಕೂ ಗುನುಗೋಕೂ ಚೆಂದವಿತ್ತು. ಆ ವರ್ಷದ ಸೂಪರ್ ಹಿಟ್ ಗೀತೆಗಳಲ್ಲೊಂದು ಅದು. ಹಾಡು ಬರೆಯೋದಂದ್ರೆ ದೊಡ್ಡ ಕನಸು ಎಂಬಂತೆ ಅವಕಾಶಕ್ಕೆ ಹಪಹಪಿಸಿದ ಜೀವ ಸುಕನ್ಯಾ ಅವ್ರದ್ದು. ಹರಿಕೃಷ್ಣ ಶ್ರೀಧರ್ ಸಂಭ್ರಮ್ ಎಲ್ಲೆನ್ ಶಾಸ್ತ್ರಿ ಎಲ್ಲರ ಬಳಿ ಬೇಸಿಕ್ಸ್ ಕಲಿತು ತಮ್ಮ ಬರಹವನ್ನು ಸಂಗೀತಕ್ಕೆ ಸಿಂಕ್
ಮಾಡೋ ಪರಿ ಅರಿತವರು. ಇದೀಗ ಸುಕನ್ಯಾ ಅವರಿಗೊಂದು ಭಾರಿ ಎಂಬಂಥ ಅವಕಾಶವೇ ಸಿಕ್ಕಿದೆ. ದರ್ಶನ್ ಅಭಿನಯದ ಕ್ರಾಂತಿ ಸಿನಿಮಾಗೆ ಸುಕನ್ಯಾ ಹಾಡು ಬರೆದಿದ್ದಾರೆ. ವಿಶೇಷ ಏನಂದ್ರೆ ಕ್ರಾಂತಿ ಕನ್ನಡ ವರ್ಶನ್ ಗೆ ಅಲ್ಲ ಇವರು ಹಾಡು ಬರೆದಿರೋದು, ತೆಲುಗು ವರ್ಶನ್ ಗೆ ಕನ್ನಡದಲ್ಲಿ ಭಟ್ರು ಬರೆದಿರೋ ಬೊಂಬೆ ಬೊಂಬೆ ಹಾಡಿನ ತೆಲುಗು ವರ್ಶನ್ ಸುಕನ್ಯಾ ಲೇಖನಿಯಲ್ಲಿ ಮೂಡಿಬಂದಿದೆ. ಖಂಡಿತ ಅವರ ಪಾಲಿಗೆ ಇದೊಂದು ದೊಡ್ಡ ಹಾಗೂ ಸ್ಮರಣೀಯ ಅವಕಾಶ. ನಿಜ ಹೇಳೋದಾದ್ರೆ ಕನ್ನಡಕ್ಕಿಂತ ತೆಲುಗಿನ ಲಿರಿಕ್ಸ್ ಹೆಚ್ಚು ಆಕರ್ಷಕವಾಗಿದೆ.

ಈ ಮಹಿಳೆಯರಿಗೆಲ್ಲ ಇನ್ನಷ್ಟು ಅವಕಾಶ ಸಿಕ್ಕಲ್ಲಿ ಸಿನಿಮಾ ಸಾಹಿತ್ಯಲೋಕ ಇನ್ನೂ ವೈವಿಧ್ಯಮಯ ಅನಿಸಬಹುದು. ಹೆಣ್ಣಿನ ಹೃದಯದಲ್ಲಿ ಮೆದುಳಿನಲ್ಲಿ ಗಂಡಿನ ಹೆಣ್ಣಿನ ಬಗ್ಗೆ ಪ್ರೀತಿಯ ಬಗ್ಗೆ ವಿರಹದ ಬಗ್ಗೆ ಸಮಾಜದ ಬಗ್ಗೆ ಹುಟ್ಟುವ ಸಂಭಾಷಣೆ/ ಹಾಡುಗಳು ತನ್ನದೇ ರೀತಿಯ ಹೊಸ ಹೊಳಹು ನೀಡುತ್ತದೆ ಎಂಬ ನಿರೀಕ್ಷೆ ನನ್ನದು. ನಾವು ಎಷ್ಟೇ ಅವರ ಮನಸ್ಸು ಅರಿತು ಬರೆದರೂ ಅದು ಕೊನೆಗೂ ನಮ್ಮ ಬರಹವೇ. ಅವರೂ ನಮ್ಮ ಮನಸಿಗಿಳಿದು ಬರೆಯೋದ ನೋಡೋಣ. ಅವರೂ ಅವರ ಮನಸ್ಸನ್ನು ತೆರೆದಿಡೋದು ನೋಡೋಣ. ಅವರ ಕ್ರಿಯೇಟಿವಿಟಿ ಹಾಸ್ಯಪ್ರಜ್ಞೆಗಳೂ ಸಿನಿಮಾ ಬರವಣಿಗೆಯಲ್ಲಿ ಪರಿಚಯವಾಗಲಿ, ಶ್ರೀದೇವಿ ಮಂಜುನಾಥ್ ಥರದವರು ಸಾಯಿಕುಮಾರ್ ಡ್ರಿಲ್ಲರ್ ಮಂಜು ಥರದ ಸಿನಿಮಾಗೂ ಬರೆಯುವುದನ್ನು ನೋಡುವ ಹಾಗಾಗಲಿ.

Recommended For You

Leave a Reply

error: Content is protected !!
%d bloggers like this: