ತಮಿಳುನಾಡಿನ ಚೆನ್ನೈನಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ(77) ವಿಧಿವಶರಾಗಿದ್ದಾರೆ. ಇವರ ಕಲಾ ಸೇವೆಗೆ ಇತ್ತೀಚೆಗಷ್ಟೇ ಪದ್ಮಭೂಷಣ ಪ್ರಶಸ್ತಿ ಘೋಷಿಸಿ ಗೌರವಿಸಲಾಗಿತ್ತು. ದುರಂತ ಎನ್ನುವಂತೆ ಪ್ರಶಸ್ತಿ ಪಡೆಯುವ ಮೊದಲೇ ಮನೆಯಲ್ಲಿ ಕುಸಿದು ಸಾವನ್ನಪ್ಪಿದ್ದಾರೆ.
ವಾಣಿ ಜಯರಾಂ ತಮಿಳು ನಾಡಿನಲ್ಲಿ ಹುಟ್ಟಿ ಬೆಳೆದ ಗಾಯಕಿಯಾದರೂ ಕನ್ನಡ ಸೇರಿದಂತೆ ಎಲ್ಲ ಭಾಷೆಗಳ ಸಿನಿಮಾ ಸಂಗೀತ ಪ್ರಿಯರಿಗೆ ಆಪ್ತರಾದವರು. 1970ರಿಂದ 90ರ ದಶಕದವರೆಗೆ ಇವರ ಹಾಡುಗಳು ಎಲ್ಲ ಭಾಷೆಗಳಲ್ಲಿಯೂ ಜನಪ್ರಿಯತೆಯ ಉತ್ತುಂಗದಲ್ಲಿತ್ತು. ಕರ್ನಾಟಕದಲ್ಲಿ ಕನ್ನಡ ಸೇರಿದಂತೆ ತುಳು ಗೀತೆಗಳಿಗೂ ಆಲಾಪನೆ ಮಾಡಿದ್ದಾರೆ. ಭಾರತದ 19 ಭಾಷೆಗಳಲ್ಲಿ ಒಟ್ಟು 10ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ದಾಖಲೆ ಇವರದು.
ಚೆನ್ನೈನ ಮನೆಯಲ್ಲಿ ಇವರ ಮೃತದೇಹ ಪತ್ತೆಯಾಗಿದ್ದು ಅಭಿಮಾನಿಗಳಿಗೆ, ಸಂಗೀತ ಪ್ರಿಯರಿಗೆ ಆಘಾತ ಉಂಟಾಗಿದೆ. ವಾಣಿ ಜಯರಾಂ ಕನ್ನಡದಲ್ಲಿ ಸಾಕಷ್ಟು ಪ್ರಮುಖ ನಟರ ಸಿನಿಮಾಗಳಲ್ಲಿ ಹಿಟ್ ಹಾಡುಗಳನ್ನು ನೀಡಿದ್ದಾರೆ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ರವಿಚಂದ್ರನ್ ಸಿನಿಮಾಗಳ ತನಕ ವಾಣಿಜಯರಾಂ ಹಾಡಿದ ಹಿಟ್ ಹಾಡುಗಳ ಪಟ್ಟಿ ಇಲ್ಲಿವೆ.
ಇದು ಅವರು ಕನ್ನಡದಲ್ಲಿ ವಿವಿಧ ಸ್ಟಾರ್ ಸಿನಿಮಾಗಳಲ್ಲಿ ವಿವಿಧ ಕಾಲಘಟ್ಟದ ನಾಯಕಿಯರಿಗೆ ಹಾಡಿ ಹಿಟ್ ಆಗಿರುವ ಗೀತೆಗಳ ಪಟ್ಟಿ
ಈ ಸೊಗಸಾದ ಸಂಜೆ
ದೇವತಾ ಮನುಷ್ಯ-ಡಾ.ರಾಜ್ ಕುಮಾರ್
ಗೀತಾ
ಡಾ.ರಾಜ್ ಕುಮಾರ್
ಉಪೇಂದ್ರ ಕುಮಾರ್
ಇವ ಯಾವ ಸೀಮೆ ಗಂಡು ಕಾಣಮ್ಮೊ
ರಣರಂಗ-ಶಿವರಾಜ್ಕುಮಾರ್
ಸುಧಾರಾಣಿ
SP ಬಾಲಸುಬ್ರಹ್ಮಣ್ಯಂ
ಹಂಸಲೇಖ
ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಯುಗಪುರುಷ-ರವಿಚಂದ್ರನ್
SP ಬಾಲಸುಬ್ರಹ್ಮಣ್ಯಂ
ಹಂಸಲೇಖ
ನೀನು ಹತ್ತಿರ ಇದ್ದಿದ್ದರೇ
ಅವಳೇ ನನ್ನ ಹೆಂಡ್ತಿ-ಕಾಶಿನಾಥ್
ಭವ್ಯಾ
SP ಬಾಲಸುಬ್ರಹ್ಮಣ್ಯಂ
ಹಂಸಲೇಖ
ಬಾ ಅರಗಿಣಿಯೇ ಬಾ
ದಿಗ್ವಿಜಯ-ಅಂಬರೀಷ್
ಅಂಬಿಕಾ
SP ಬಾಲಸುಬ್ರಹ್ಮಣ್ಯಂ
ಸಂಗೀತ-ಹಂಸಲೇಖ
ಈ ಸೃಷ್ಟಿ ಎಂಥಾ ಚೆಲುವಿನಾಲಯ
ಏಳು ಸುತ್ತಿನ ಕೋಟೆ- ಅಂಬರೀಷ್
ಸುಮನ್ ರಂಗನಾಥ್
SP ಬಾಲಸುಬ್ರಹ್ಮಣ್ಯಂ
ಸಂಗೀತ- ಎಲ್ ವೈದ್ಯನಾಥನ್
ಚೆಲುವಿನ ಚಿಲುಮೆ ಚಿಮ್ಮಿದಾಗ
ಕೃಷ್ಣ ರುಕ್ಮಿಣಿ-ವಿಷ್ಣುವರ್ಧನ್
ರಮ್ಯಾಕೃಷ್ಣ
SP ಬಾಲಸುಬ್ರಹ್ಮಣ್ಯಂ
ಸಂಗೀತ- ಕೆ ವಿ ಮಹಾದೇವನ್
ನೂರಾರೂರುಗಳಲ್ಲಿ
ಯುದ್ಧಾಕಾಂಡ-ರವಿಚಂದ್ರನ್
ಪೂನಂ ದಿಲ್ಲನ್
SP ಬಾಲಸುಬ್ರಹ್ಮಣ್ಯಂ
ಸಂಗೀತ-ಹಂಸಲೇಖ
ಬಿಗುಮಾನ ಏತಕೆ ಕಾಣೆ
ಜಯಸಿಂಂಹ- ವಿಷ್ಣುವರ್ಧನ್
ಮಹಾಲಕ್ಷ್ಮಿ
SP ಬಾಲಸುಬ್ರಹ್ಮಣ್ಯಂ
ಸಂಗೀತ-ವಿಜಯಾನಂದ್