ಶಶಾಂಕ್ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಕೌಟುಂಬಿಕ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಮಕ್ಕಳ ಮೇಲೆ ಎಷ್ಟು ಸೊಗಸಾದ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಖ್ಯಾತ ಅಂಕಣಕಾರ್ತಿ ಯಶೋಮತಿ ಬೆಳಗೆರೆಯವರು ಹಂಚಿಕೊಂಡಿದ್ದಾರೆ.
ಇಷ್ಟು ದಿನ ಪುಸ್ತಕದ ಕೆಲಸದಲ್ಲಿ ನಿರತಳಾಗಿದ್ದವಳಿಗೆ ಮಗನೊಂದಿಗೆ ಸಮಯ ಕಳೆಯೋಕೇ ಸಾಧ್ಯ ಆಗಿರಲಿಲ್ಲ. ಅವನೂ ಕೂಡ ಶಾಲೆ – ಟೆಸ್ಟು – ಗೆಳೆಯರು ಅಂತ ತನ್ನ ಜಗತ್ತಿನಲ್ಲಿ occupied ಆಗಿಬಿಟ್ಟಿದ್ದ. Sunday ಮೈಸೂರಿಗೆ ಹೋಗಿ ಜಗದೀಶ್ ಕೊಪ್ಪ ಅವರನ್ನು ಭೇಟಿ ಮಾಡಿ ಬರುವ plan ಇತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಒಟ್ಟಿಗೆ ಹೋಟೆಲ್ ಗೆ ಹೋದಾಗ, ಸಿನಿಮಾಗೆ ಹೋದಾಗ we share good time. ಅಮ್ಮ, ತುಂಬ ದಿನಗಳಾದವು we never spent time together. Come lets go to the movie today ಅಂದ. ಸರಿ, ಹಾಗಾದ್ರೆ ಕೌಸಲ್ಯ ಸುಪ್ರಜಾ ರಾಮ movie ಗೆ ಹೋಗೋಣ ಅಂದಕೂಡಲೇ tickets book ಮಾಡಿ. Be ready. ಅಷ್ಟರಲ್ಲಿ ನಾನು friends meet ಮಾಡಿ ಬರ್ತೀನಿ ಅಂತ typical boy tone ನಲ್ಲಿ ಹೇಳಿ ಹೊರಟ.
Movie ಶುರುವಾಗುತ್ತಿದ್ದಂತೆ popcorn, Pepsi ಮಡಿಲೇರಿತ್ತು. ಅರ್ಧ movie ಮುಗಿಯುತ್ತಿದ್ದಂತೆ ತನ್ನ ಮಡಿಲಲ್ಲಿದ್ದ popcorn ಡಬ್ಬಿಯನ್ನು ನನ್ನ ಕಡೆಗೆ ದಾಟಿಸಿ ಅಮ್ಮ ನೀನೂ ತಗೋ ಅಂತ ಹೇಳಿ ನನ್ನ ಕೈಗೆ ಕೊಟ್ಟ. ಯಾಕೋ ಏನಾಯ್ತು? ತಿನ್ನು ಪುಟ್ಟ ನೀನೇ ಅಂದೆ. ಇಲ್ಲಮ್ಮ ಅದು ನಿನ್ನ ಹತ್ರಾನೇ ಇರಲಿ ನಾನೊಂಚುರು ತಗೋತೀನಿ ಅಂದು ಚಿತ್ರ ವೀಕ್ಷಣೆ ಮುಂದುವರೆಸಿದ.
ಇದೊಂದು ಸಣ್ಣ ಉದಾಹಣೆಯಷ್ಟೇ. ಅಷ್ಟು ಸಣ್ಣ ಮಕ್ಕಳ ಮನಸಿಗೂ ತಲುಪುವಷ್ಟು ಸೊಗಸಾಗಿದೆ ಚಿತ್ರ. ನಾವು ಮಕ್ಕಳನ್ನು ಬೆಳೆಸುವ ರೀತಿ, ಪುರುಷಾಹಂಕಾರ, ಎಲ್ಲವನ್ನೂ ಸಹಿಸಿಕೊಳ್ಳುತ್ತಾ taken for granted ಆಗಿಬಿಡುವ ಅಮ್ಮಂದಿರು… ಇರುವ ಕಟ್ಟಳೆಗಳನ್ನೆಲ್ಲ ಹೆಣ್ಣುಮಕ್ಕಳ ಮೇಲೇ ಹೇರುವ ಸಮಾಜ… ಹೀಗೆ ಸಾಕಷ್ಟು ವಿಷಯಗಳು ನಮ್ಮನ್ನು ತಾಕುತ್ತವೆ. ಅವರು ಕೂಡ ನಮ್ಮಂತೆ ಮನುಷ್ಯರೇ ಅಲ್ವಾ? ಅಂದುಕೊಂಡು ಪುರುಷ ವರ್ಗ ತಮ್ಮ ಜವಾಬ್ದಾರಿ ನಿರ್ವಹಿಸುವ ಒಂದು ಸಾಮಾಜಿಕ ಬದಲಾವಣೆಯ ಅಗತ್ಯ ಈಗಿನ ಸಮಾಜಕ್ಕಿದೆ ಅದನ್ನು ಬಹಳ ಚೆನ್ನಾಗಿ ತಿಳಿಸಿಕೊಡುತ್ತದೆ ಈ ಸಿನೆಮಾ.
ಬಂದ ಕೂಡಲೇ ನಾನೂ ಕೂಡ ನನ್ನ ಅಮ್ಮನ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಲು ಆರಂಭಿಸಿ ಮನಸಿಗೆ ಮೆಟ್ಟಿದ್ದ ಜಾಡ್ಯ ಕಳಚಿ ಬಿತ್ತು. ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಯಶಸ್ವೀ ಚಿತ್ರ ಕೊಟ್ಟ ತಂಡಕ್ಕೆ ಅಭಿನಂದನೆಗಳು.