ಬಿಗ್ ಬಾಸ್ ವಿಜೇತ ಸಿದ್ದಾರ್ಥ್ ಶುಕ್ಲ ನಿಧನ

ಸಿದ್ದಾರ್ಥ್ ಶುಕ್ಲ ಕಳೆದೊಂದು ದಶಕದಿಂದ ಹಿಂದಿ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ. ಕಳೆದ ಸೀಸನ್ ಬಿಗ್ ಬಾಸ್ ವಿಜೇತರಾಗಿಯೂ ಸುದ್ದಿ ಮಾಡಿದ್ದ ಸಿದ್ದಾರ್ಥ್ ಇಂದು ಮುಂಜಾನೆ ಎರಡು ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಾಲಿವುಡ್ ನ ಯುವನಟ ಸಿದ್ದಾರ್ಥ್ ಶುಕ್ಲ ಇನ್ನಿಲ್ಲ ಎನ್ನುವುದು... Read more »

ಶುಗರ್ ಫ್ಯಾಕ್ಟರಿಯಲ್ಲಿ ಬಾಬಾ ಸೆಹಗಲ್!

ಶುಗರ್ ಫ್ಯಾಕ್ಟ್ರಿ ಎನ್ನುವುದು ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು. ಈಗಾಗಲೇ ಸುದ್ದಿಯಲ್ಲಿರುವ ಈ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದು ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಶುಭದಿನದಂದು ‘ಶುಗರ್ ಫ್ಯಾಕ್ಟರಿ’ಯ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್... Read more »

ಈ ವಾರ ತೆರೆಕಾಣಲಿದೆ ‘ಸಹಿಷ್ಣು’

ಒಂದೇ ಟೇಕ್ ನಲ್ಲಿ ಸಿನಿಮಾವೊಂದನ್ನು ಚಿತ್ರೀಕರಿಸಿ ದಾಖಲೆ ಮಾಡಿರುವ ನಿರ್ದೇಶಕ ಡಾ.ಸಂಪತ್ ಕುಮಾರ್ ಸಿನಿಮಾವನ್ನು ಈ ವಾರ ತೆರೆಗೆ ತರುತ್ತಿದ್ದಾರೆ. ರಾಜೇಂದ್ರ ಸಿಂಗ್ ಬಾಬು, ಪಿ ಎಚ್ ವಿಶ್ವನಾಥ್ ಅವರ ಬಳಿ ಅಸೋಸಿಯೇಟಾಗಿ ಕೆಲಸ ಮಾಡಿರುವ ಡಾ.‌ಸಂಪತ್ ಕುಮಾರ್ ಅವರು ಪ್ರಥಮ ಬಾರಿ ನಿರ್ದೇಶಿಸಿರುವ... Read more »

ಹೊಸಬರ ವಿಭಿನ್ನ ಚಿತ್ರ ‘ಓಶೋ’

ಸಿನಿಮಾ ನಿರ್ದೇಶಕನಾಗಲು ಬಯಸುವ ಸಹಾಯಕ ನಿರ್ದೇಶಕನ ಕತೆ ಹೇಳುವ ಸಿನಿಮಾ ‘ಓಶೋ’. ಚಿತ್ರದ ಹೆಸರು ಮತ್ತು ಕತೆಗಿರುವ ಸಂಬಂಧ ಮತ್ತಿತರ ವಿಷಯಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಚಿತ್ರ ತಂಡ ನೀಡಿದ ಮಾಹಿತಿಗಳು ಇಲ್ಲಿವೆ. “ಓಶೋ ಚಿತ್ರದ ಮೂಲಕ ನಾನು ಒಂದಷ್ಟು ಫಿಲಾಸಫಿ ಹೇಳಲು ಹೊರಟಿದ್ದೇನೆ. ಹಾಗಾಗಿ... Read more »

ಈ ವಿಲನ್ ಸುದೀಪ್ ಫ್ಯಾನ್!

ಸಿನಿಮಾ ನೋಡಿದವರೆಲ್ಲ ತಾವು ಕೂಡ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂದುಕೊಳ್ಳುವುದು ಸಹಜ. ಆದರೆ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸುವವರು ವಿರಳ. ಆದರೆ ಹಾಗೆ ಚಿತ್ರ‌ರಂಗ ಪ್ರವೇಶಿಸಿ ಗುರುತಿಸಿಕೊಂಡವರ ಪಟ್ಟಿಯಲ್ಲಿ ಈ ಯುವ ನಟ ಕೂಡ ಸೇರುತ್ತಾರೆ. ಹೆಸರು ಶೋಯೆಬ್ ಇಮ್ರಾನ್ ಅಹಮ್ಮದ್. ಆದರೆ... Read more »

ಮರಳಿ ಬರಲಿದೆ ‘ಕಲಿವೀರ..!’

ಏಕಲವ್ಯ ಎನ್ನುವ ಯುವ ಸಾಹಸ ಪ್ರತಿಭೆಯ ಮೂಲಕ ಸುದ್ದಿಯಾದ ಚಿತ್ರ ಕಲಿವೀರ. ಥಿಯೇಟರ್ ಸಮಸ್ಯೆಯ ನಡುವೆಯೇ ತೆರೆಕಂಡ ಈ ಸಿನಿಮಾವನ್ನು ಸಮಸ್ಯೆಗಳೆಲ್ಕ‌ಮುಗಿದ ಮೇಲೆ ಮತ್ತೊಮ್ಮೆ ತೆರೆಗೆ ತರುವ ಯೋಜನೆ ಇದೆ ಎಂದು ಚಿತ್ರತಂಡ ತಿಳಿಸಿದೆ. ರಾಣೆಬೆನ್ನೂರಿನ ಹುಡುಗ ಏಕಲವ್ಯ ಹೆಸರಿಗೆ ತಕ್ಕಂತೆ ಸಾಹಸ ಕಲೆಗಳನ್ನು... Read more »

ಆಡಿಕೊಂಡವರು ಕೊಂಡಾಡುತ್ತಿದ್ದಾರೆ- ಭೂಮಿಕಾ

ಜೀವನ ಎನ್ನುವುದು ಯಾರಿಗೂ ಸುಲಭವಾಗಿರುವುದಿಲ್ಲ. ಪ್ರತಿ ಸಾಧಕರು ಕೂಡ ಕಷ್ಟಪಟ್ಟೇ ಮೇಲೆ ಬಂದಿರುತ್ತಾರೆ. ಹಿಂದೆಲ್ಲಾ ಪತ್ರಕರ್ತರಿಗೆ ಮೈಕಟ್ಟು ಆಕರ್ಷಕವಾಗಿ ಇರಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೆ ಇಂದು ದೃಶ್ಯ ಮಾಧ್ಯಮಗಳ ದೆಸೆಯಿಂದಾಗಿ ಮಾಧ್ಯಮ ಪ್ರತಿನಿಧಿಗಳು ಕೂಡ ದೈಹಿಕವಾಗಿ ಆಕರ್ಷಕ ಮೈಕಟ್ಟು ಹೊಂದಿರಬೇಕೆಂದು ಸುದ್ದಿ ಸಂಸ್ಥೆಗಳು ನಿರೀಕ್ಷಿಸುತ್ತವೆ.... Read more »

ಭರದ ಚಿತ್ರೀಕರಣದಲ್ಲಿ ‘ಆಪರೇಶನ್ D”

ಆಪರೇಷನ್ ಡಿ ಎನ್ನುವ ವಿಭಿನ್ನ ಹೆಸರಿನ ಚಿತ್ರವನ್ನು ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿದ್ದು ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದ್ದು, ನಾಲ್ಕು ಹಾಡು ಹಾಗೂ ಮೂರು ಸಾಹಸ... Read more »

‘ಮನಸಾಗಿದೆ’ ಚಿತ್ರೀಕರಣ ಪೂರ್ಣ

ನವನಟ ಅಭಯ್ ನಾಯಕರಾಗಿ ಕನ್ನಡ ಚಿತ್ರರಂಕ್ಕೆ ಪದಾರ್ಪಣೆ ಮಾಡುತ್ತಿರುವ ಸಿನಿಮಾ ‘ಮನಸಾಗಿದೆ’ ಚಿತ್ರತಂಡದ ಮಾಧ್ಯಮಗೋಷ್ಠಿ ಇತ್ತೀಚೆಗೆ ನೆರವೇರಿತು. ನಾಯಕ ಅಭಯ್ ಮಾತನಾಡಿ, “ಚಿತ್ರೀಕರಣ ಚೆನ್ನಾಗಿ ಮೂಡಿ ಬಂದಿದೆ. ಇದರಲ್ಲಿ ಕಾಮಿಡಿ ಕಿಲಾಡಿ ತಂಡದ ಎಂಟರ್ಟೇನ್ಮೆಂಟ್ ಇರುತ್ತದೆ. ಥ್ರಿಲ್ಲರ್ ಮಂಜು‌ ಮಾಸ್ಟರ್ ಎರಡು ಫೈಟ್ ಎರಡು... Read more »

ಸಂದೇಶ ನೀಡಲಿರುವ ‘ಯೆಲ್ಲೋ ಬೋರ್ಡ್’

ಯೆಲ್ಲೋ ಬೋರ್ಡ್ ಎಂದೊಡನೆ ಕ್ಯಾಬ್ ಗಳ ನೆನಪಾಗುವುದು ಸಹಜ. ಕ್ಯಾಬ್ ಡ್ರೈವರ್ ವಿಚಾರವನ್ನೇ ಪ್ರಮುಖವಾಗಿಸಿಕೊಂಡು ಮಾಡಿರುವ ‘YELLOW ಬೋರ್ಡ್’ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ರೇಣುಕಾಂಬ ಪ್ರಿವ್ಯು ಥಿಯೇಟರಲ್ಲಿ ನೆರವೇರಿತು. ಒಬ್ಬ ಟ್ಯಾಕ್ಸಿ ಡ್ರೈವರ್ ಕನಸು ಮತ್ತು ಅದರ ನಡುವೆ ಅನಿರೀಕ್ಷಿತವಾಗಿ ಪ್ರೀತಿ, ಪ್ರೇಮ ಹಾಗೂ... Read more »

ಸದ್ಯದಲ್ಲೇ ಜಗ್ಗೇಶ್ ಪುತ್ರನ ‘ಕಾಗೆಮೊಟ್ಟೆ’

ಜನಪ್ರಿಯ ನಟ ಜಗ್ಗೇಶ್ ಅವರ ಹಿರಿಯಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿರುವ ಚಿತ್ರ ಕಾಗೆಮೊಟ್ಟೆ. ಈಗಾಗಲೇ ರಿಲೀಸ್‌ಗೆ ಸಿದ್ಧವಾಗಿರುವ ಕಾಗೆಮೊಟ್ಟೆ ಚಿತ್ರವನ್ನು ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ‌ ಚಂದ್ರಹಾಸ ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಕಾಗೆ ಶನೀಶ್ವರನ... Read more »

ರಂಗನಾಯಕನಿಗೆ ರಚಿತಾ ಜೋಡಿ

ನಿರ್ದೇಶಕ ಗುರುಪ್ರಸಾದ್ ತಮಗೆ ಹೆಸರು ತಂದುಕೊಟ್ಟ ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಚಿತ್ರದ ನಾಯಕನ ಜೊತೆಗೆ ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ಒಂದಾಗಿರುವ ಚಿತ್ರ ‘ರಂಗನಾಯಕ’. ಅದರ ಚಿತ್ರೀಕರಣದ ಜಾಗದಲ್ಲಿ ನಡೆಸಲಾದ ಮಾಧ್ಯಮಗೋಷ್ಠಿಯ ವಿವರಗಳು ಹೀಗಿವೆ. ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಯಶಸ್ವಿಯಾಗಿರುವ... Read more »

‘ಅಂಜನ್’ ಸಿನಿಮಾ ವಿಶೇಷ

ನಾಯಕ ನಟ ಅಂಜನ್ ನಟಿಸಿರುವ ಎರಡನೇ ಸಿನಿಮಾಕ್ಕೆ ‘ಅಂಜನ್’ ಎಂದೇ ನಾಮಕರಣ ಮಾಡಲಾಗಿದೆ. ಚಿತ್ರದ ಮೊದಲ ಮಾಧ್ಯಮಗೋಷ್ಠಿ ಸ್ವಾತಂತ್ರ್ಯ ದಿನದಂದು ನೆರವೇರಿತು. “ಈ ಹಿಂದೆ ‘ವಜ್ರಾಸ್ತ್ರ’ ಚಿತ್ರದಲ್ಲಿ ನಟಿಸಿದ ಬಳಿಕ ನಾನು ನಟಿಸುತ್ತಿರುವ ಎರಡನೇ ಚಿತ್ರ ಇದು. ತಂದೆ, ತಾಯಿ ಇರದೆ ಬೆಳೆದ ತಂಗಿಯನ್ನು... Read more »

ಧ್ರುವ ಇನ್ನು ‘ಮಾರ್ಟಿನ್’

ಎ.ಪಿ. ಅರ್ಜುನ್‌ ನಿರ್ದೇಶಿಸಿದ ‘ಅದ್ಧೂರಿ’ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ನಟ ಧ್ರುವ ಸರ್ಜ. ಆ ಕಾಲಕ್ಕೆ ‘ಅದ್ದೂರಿ’ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತ್ತು. ಇದೀಗ ಅದೇ ಜೋಡಿ ಮತ್ತೆ ಒಂದಾಗಿದೆ. ಹೊಸ ಸಿನಿಮಾದ ಹೆಸರು ‘ಮಾರ್ಟಿನ್’. ನಿರ್ದೇಶಕ ಅರ್ಜುನ್ ಮತ್ತು ಧ್ರುವ... Read more »

‘ಮೃಗ’ ಚಿತ್ರಕ್ಕೆ ಸಾಹಸ ಚಿತ್ರೀಕರಣ

ಸಪ್ತಗಿರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಆರ್.ಶಶಿಕುಮಾರ್ ನಿರ್ಮಿಸುತ್ತಿರುವ ‘ಮೃಗ’ ಚಿತ್ರಕ್ಕೆ ಯಲಚೇನಹಳ್ಳಿಯ ಗ್ರೀನ್ ವ್ಯಾಲಿ ಶಾಲೆ ಆವರಣದಲ್ಲಿ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸಲಾಯಿತು. ನಾಯಕ ವಿಜಯ್ ಮಹೇಶ್ ಹಾಗೂ ಹದಿನೈದಕ್ಕೂ ಹೆಚ್ಚು ಸಾಹಸ ಕಲಾವಿದರು ಈ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ದೃಶ್ಯವು ನರಸಿಂಹ... Read more »

‘ಶುಗರ್ ಲೆಸ್‌‌’ನಲ್ಲಿ ಶರಣ್ ಸ್ವರ ಮಾಧುರ್ಯ

ಚಿತ್ರದ ಹೆಸರು ‘ಶುಗರ್ ಲೆಸ್’. ಆದರೆ ಅದಕ್ಕೆ ಸಿಹಿ ನೀಡುವಂತೆ ತಮ್ಮ ಧ್ವನಿ ಮಾಧುರ್ಯ ನೀಡಿದ್ದಾರೆ ನಟ ಶರಣ್. ಯುವನಟ ಪೃಥ್ವಿ ಅಂಬಾರ್ ಅವರು ನಾಯಕರಾಗಿರುವ ಚಿತ್ರದಲ್ಲಿ ಆರಂಭಿಕ ನಿರೂಪಣೆಯನ್ನು ಹಾಸ್ಯಾತ್ಮಕವಾಗಿ ನಿರೂಪಿಸಿದ್ದಾರೆ ಶರಣ್. ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ.... Read more »

ಸದ್ಯದಲ್ಲೇ ಬರಲಿದೆ ‘ಕನ್ಫ್ಯೂಸ್’

ಸದ್ಯದಲ್ಲೇ ಬಿಡುಗಡೆ ಕಾಣಲಿರುವ ಕಿರುಚಿತ್ರದ ಹೆಸರು ‘CONFUSE’.‌ ಶೀರ್ಷಿಕೆಯಲ್ಲಿ ಕೂಡ ಆಂಗ್ಲದ ಒಂದಷ್ಟು ಅಕ್ಷರಗಳನ್ನು ತಿರುವು ಮುರುವಾಗಿ ಬರೆಯುವ ಮೂಲಕ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರನ್ನು ಗೊಂದಲಕ್ಕೆ ದೂಡುವ ಪ್ರಯತ್ನವನ್ನು ನಿರ್ದೇಶಕರು ಕೈಗೊಂಡಿದ್ದಾರೆ. ಸಿನಿಮಾರಂಗದಲ್ಲಿ ಸೆಟ್ ಬಾಯ್ ಆಗಿ ಕೆಲಸ ಮಾಡಿ ಅನುಭವ ಇರುವ ಚೇತನ್... Read more »

ಈ ವಾರ ‘ಕಲಿವೀರ’

ಕಳೆದ ಒಂದಷ್ಟು ಸಮಯದಿಂದ ಕಳೆ‌ಮೂಡಿಸಿದ್ದ ದೃಶ್ಯ ವೈವಿಧ್ಯತೆಗಳೊಂದಿಗೆ ‘ಕಲಿವೀರ’ ಗುರುತಿಸಿಕೊಂಡಿತ್ತು. ಇದೀಗ ಕೋವಿಡ್ ಗೆ ಚಾಲೆಂಜ್ ಹಾಕಿ ತೆರೆಗೆ ಸಿದ್ಧವಾಗಿದೆ. “ಸಾಲು ಸಾಲು ಚಿತ್ರಗಳ ನಡುವೆ ತಡವಾಗಿ ಬಂದರೆ ಕುರಿಯಂತೆ ಕಳೆದು ಹೋಗುವ ಸಾಧ್ಯತೆ ಇದೆ. ಹಾಗಾಗಿ ಅನಿಶ್ಚಿತತೆಯ ನಡುವೆ ಮೊದಲು ರಂಗಕ್ಕೆ ಇಳಿಯುವವನೇ... Read more »

ಅಗಲಿದ ಅಭಿನಯ ಶಾರದೆ

ಅಭಿನಯ ಶಾರದೆ ಎಂದೇ ಖ್ಯಾತರಾಗಿದ್ದ ನಟಿ, ಪಂಚಭಾಷೆ ತಾರೆ ಜಯಂತಿ ಅವರು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇವತ್ತು ಅನಾರೋಗ್ಯದ ಕಾರಣದಿಂದಾಗಿ ವಿಧಿವಶರಾಗಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ,ಮಸಣದ ಹೂ, ಮಯೂರ, ಕಸ್ತೂರಿ ನಿವಾಸ, ಬಹದ್ದೂರ್ ಗಂಡು ಸೇರಿದಂತೆ ಸುಮಾರಿ 500 ಚಿತ್ರಗಳಲ್ಲಿ ನಟಿಸಿದ್ದಾರೆ.ಒಟ್ಟು... Read more »

ಸುದೀಪ್ ಚಿತ್ರಕ್ಕೆ ವಿದೇಶೀ ನಟಿಯೇಕೆ?

ಸುದೀಪ್ ನಾಯಕರಾಗಿರುವ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಲಂಕಾ ಮೂಲದ ಜಾಕ್ವಲಿನ್ ಫೆರ್ನಾಂಡೀಸ್ ನಟಿಸಿರುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಕನ್ನಡದ ನಟಿ, ಐಟಂ ಡಾನ್ಸರ್ ಆಗಿರುವ ಸೋನಿಯಾ ಸೇನ್ ಈ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.... Read more »

‘ಟೆಡ್ಡಿ ಬೇರ್’ ಧ್ವನಿಸಾಂದ್ರಿಕೆ ಬಿಡುಗಡೆ

ಹಾರರ್, ರೊಮ್ಯಾಂಟಿಕ್ ಕತೆ ಹೊಂದಿರುವ ‘ಟೆಡ್ಡಿ ಬೇರ್’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣವಾಗಿದೆ. ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ಭರತ್‌ಕುಮಾರ್ ಮತ್ತು ನವೀನ್‌ ರೇಗಟ್ಟಿ ಜಂಟಿಯಾಗಿ ಆದ್ಯಲಕ್ಷೀ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಇದು. ಸಿಡಿ ಬಿಡುಗಡೆ ಮಾಡಿದ ಚಿತ್ರ ಸಾಹಿತಿ... Read more »
error: Content is protected !!