ಸದ್ಯದಲ್ಲೇ ಬರಲಿದೆ ‘ಕನ್ಫ್ಯೂಸ್’

ಸದ್ಯದಲ್ಲೇ ಬಿಡುಗಡೆ ಕಾಣಲಿರುವ ಕಿರುಚಿತ್ರದ ಹೆಸರು ‘CONFUSE’.‌ ಶೀರ್ಷಿಕೆಯಲ್ಲಿ ಕೂಡ ಆಂಗ್ಲದ ಒಂದಷ್ಟು ಅಕ್ಷರಗಳನ್ನು ತಿರುವು ಮುರುವಾಗಿ ಬರೆಯುವ ಮೂಲಕ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರನ್ನು ಗೊಂದಲಕ್ಕೆ ದೂಡುವ ಪ್ರಯತ್ನವನ್ನು ನಿರ್ದೇಶಕರು ಕೈಗೊಂಡಿದ್ದಾರೆ.

ಸಿನಿಮಾರಂಗದಲ್ಲಿ ಸೆಟ್ ಬಾಯ್ ಆಗಿ ಕೆಲಸ ಮಾಡಿ ಅನುಭವ ಇರುವ ಚೇತನ್ ಕುಮಾರ್ ಕುಂಸಿ ಅದೇ ಅನುಭವ ಇರಿಸಿಕೊಂಡು ಅರ್ಧ ಗಂಟೆಯ ಒಂದು ಕಿರುಚಿತ್ರ ಮಾಡಿರುವುದು ನಿಜಕ್ಕೂ ಅಚ್ಚರಿಯ ಬೆಳವಣಿಗೆಯೇ ಸರಿ. ಸಸ್ಪೆನ್ಸ್ ಜಾನರ್ ನಲ್ಲಿ ಚಿತ್ರ ರೆಡಿ ಮಾಡಿರುವುದಾಗಿ ಹೇಳಿರುವ ಚೇತನ್, ಸಿನಿಮಾದ ಮೇಕಿಂಗ್ ವಿಚಾರದಲ್ಲಿ ಯಾವುದೇ ಕಾಂಪ್ರೊಮೈಸ್ ಮಾಡಿಲ್ಲ. ಹಾಗಾಗಿಯೇ ಚಿತ್ರವನ್ನು ಒಟಿಟಿ ಫ್ಲಾಟ್ ಫಾರ್ಮ್ ಮೂಲಕ ಬಿಡುಗಡೆಗೊಳಿಸುವ ಯೋಜನೆ ಹಾಕಿದ್ದಾರೆ.

‘ಕನ್ಫ್ಯೂಸ್’ ಕಿರುಚಿತ್ರದ ಪಾತ್ರವರ್ಗದಲ್ಲಿ ಹೊಸ ಪ್ರೆತಿಭೆಗಳಾದ ವಿನಾಯಕ್, ಎಸ್ಕೆ. ಹರೀಶ್ ನಾಯ್ಕ್, ಬೇಬಿ ಜಾಗೃತಿ, ಸೌಂದರ್ಯ ಭಾರದ್ವಾಜ್, ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಚೇತನ್ ಕುಮಾರ್ ಕುಂಸಿ ಕೂಡ ನಟಿಸಿದ್ದಾರೆ.

Recommended For You

Leave a Reply