ಸಾಮಾನ್ಯವಾಗಿ ಧಾರಾವಾಹಿಗಳು ನಾಯಕಿಯ ಹೆಸರಿನಲ್ಲೇ ಇರುತ್ತವೆ. ಆದರೆ ಇಲ್ಲಿ ಆಕೃತಿ ಎನ್ನುವುದು ನಾಯಕಿಯ ಹೆಸರಲ್ಲ. ಅದೊಂದು ಆಕಾರ! ಹೆಸರೇ ಕುತೂಹಲ ಮೂಡಿಸಬೇಕಾದರೆ, ಕತೆ ಎಷ್ಟೊಂದು ಕೌತುಕವಾಗಿರಬಹುದಲ್ಲವೇ? ಅಂಥದೊಂದು ನಿರೀಕ್ಷೆ ಮೂಡಿಸುವ ಧಾರಾವಾಹಿ ಆಕೃತಿ'ಯು ಇಂದಿನಿಂದ ಕನ್ನಡದ ಜನಪ್ರಿಯ ವಾಹಿನಿಉದಯ’ದಲ್ಲಿ ಪ್ರಸಾರವಾಗಲಿದೆ. ಇನ್ನು ಮುಂದೆ ಸೋಮವಾರದಿಂದ... Read more »
ಚಂದನ್ ಶೆಟ್ಟಿ ಗಾಯನ ಹಾಗೂ ಸಂಗೀತ ಸಂಯೋಜನೆ ಇರುವ ‘ಕೋಲು ಮಂಡೆ’ ಹಾಡು ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಮೂಲಕ ಬಿಡುಗಡೆಯಾದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬರೋಬ್ಬರಿ ಇಪ್ಪತ್ತು ಲಕ್ಷ ಮಂದಿ ವೀಕ್ಷಣೆ ಕಂಡು ಹೊಸ ದಾಖಲೆ ನಿರ್ಮಿಸಿದೆ. ಬಿಗ್ ಬಾಸ್ 5 ಗೆದ್ದ... Read more »
ಅಪಘಾತಕ್ಕೊಳಗಾಗಿ ಚಿಕಿತ್ಸೆಯಲ್ಲಿರುವ ಸ್ಟಿಲ್ ಸೀನು ಕುರಿತಾದ ವಿಸ್ತೃತ ವರದಿಯನ್ನು ನೀವು ಈಗಾಗಲೇ ಸಿನಿಕನ್ನಡ.ಕಾಮ್‌ನಲ್ಲಿ ಓದಿರುತ್ತೀರಿ. ಕೋಮಾದಲ್ಲಿ ಸ್ಟಿಲ್ ಸೀನು ಇದೀಗ ಅವರನ್ನು ಭೇಟಿಯಾಗಿರುವ IFMA(ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಶನ್) ಕಷ್ಟಕ್ಕೆ ಸ್ಪಂದಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಕಳೆದ ಮೂರು ದಶಕಗಳಿಂದ ಸ್ಥಿರ... Read more »
ಅಪೂರ್ವ ಶ್ರೀ ಅವರು ಕನ್ನಡದ ಅಪರೂಪದ ಪ್ರತಿಭೆ. ಅಪೂರ್ವ ಅವರಿಗೆ ಪ್ರಸ್ತುತ ಹೆಚ್ಚಿನ ಜನಪ್ರಿಯತೆ ಮತ್ತು ಅಭಿಮಾನಿ ಬಳಗವನ್ನು ಗಳಿಸಿಕೊಟ್ಟಿರುವುದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ‘ಪುಷ್ಪ’ ಪಾತ್ರ. ಜಾಕಿ, ಅಣ್ಣಾಬಾಂಡ್, ಕಾಶಿ ಫ್ರಮ್ ವಿಲೇಜ್, ಸುಂಟರಗಾಳಿ, ಸುಂದರಿ ಗಂಡ... Read more »
ಕನ್ನಡ ಚಿತ್ರರಂಗದಲ್ಲಿ ಸ್ಟಿಲ್ ಸೀನು ಎಂದರೆ ಎಲ್ಲರಿಗೂ ಪರಿಚಯ. ಕಳೆದ ಮೂರು ದಶಕಗಳಿಂದ ಸುಮಾರು 150ಕ್ಕೂ ಅಧಿಕ ಸಿನಿಮಾಗಳ ಸ್ಟಿಲ್ ಫೊಟೊಗ್ರಾಫರ್ ಆಗಿ ಗುರುತಿಸಿಕೊಂಡವರು ಸೀನು ಅಲಿಯಾಸ್ ಶ್ರೀನಿವಾಸ್. ಮಂಗಳವಾರ ಮಧ್ಯಾಹ್ನ ಮೈಸೂರು ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಿಂದ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು.... Read more »
ಶಿವರಾಜ್ ಕುಮಾರ್ ನಟನೆಯ `ಭಜರಂಗಿ 2′ ಚಿತ್ರ ಎರಡನೇ ಶೆಡ್ಯೂಲ್ ನಲ್ಲಿ ಯಶಸ್ವಿಯಾಗಿ ಒಂದು ವಾರದ ಚಿತ್ರೀಕರಣ ಮುಗಿಸಿದೆ. ಮೋಹನ್ ಬಿ.ಕೆರೆ ಸ್ಟುಡಿಯೋನಲ್ಲಿ ನಡೆದ ಚಿತ್ರೀಕರಣದ ಬಳಿಕ ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಸುದೀಪ್ ಅಲ್ಲಾದರೆ, ನಾವು... Read more »
ಮಕ್ಕಳ ಫೊಟೋಗಳನ್ನು ಆಕರ್ಷಕವಾಗಿ ತೆಗೆದು ಮನಸೆಳೆಯುವ ಯುವ ಛಾಯಾಗ್ರಾಹಕ, ನಿರ್ದೇಶಕ ಪುನೀಕ್ ಶೆಟ್ಟಿ ಇದೀಗ ಮತ್ತೆ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ಶ್ರೀರಾಮನ ವೇಷದಲ್ಲಿ ಮಗುವೊಂದರ ಚಿತ್ರ ಕ್ಲಿಕ್ಕಿಸಿದ್ದ ಪುನೀಕ್ ಶೆಟ್ಟಿ ಇದೀಗ ಗಣೇಶೋತ್ಸವದ ಪ್ರಯುಕ್ತ ಪುಟ್ಟ ಮಗುವೊಂದು ಸಂಭ್ರಮದಲ್ಲಿ ಭಾಗಿಯಾಗಿರುವುದನ್ನು ತಮ್ಮ ಛಾಯಾಚಿತ್ರ ಕಲೆಯಲ್ಲಿ... Read more »
ಬಹುಶಃ ಒಬ್ಬ ಗಾಯಕನಿಗಾಗಿ ನಮ್ಮ ದೇಶ ಈ ಮಟ್ಟದಲ್ಲಿ ಮಿಡಿದಿರುವುದು ಇದೇ ಪ್ರಥಮ ಎನ್ನಬಹುದು. ತಮ್ಮನ್ನು ನಾಸ್ತಿಕ ಎಂದು ಕರೆದುಕೊಳ್ಳುವ ಪದ್ಮಭೂಷಣ ಕಮಲಹಾಸನ್ ಅವರಿಂದ ಹಿಡಿದು ಮೆಗಾಸ್ಟಾರ್ ಚಿರಂಜೀವಿ ತನಕ ಪ್ರತಿಯೊಬ್ಬರು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸುಧಾರಣೆಯಾಗಲೆಂದು ಪ್ರಾರ್ಥಿಸಿದ್ದಾರೆ. ಅದಕ್ಕೆ ಕಾರಣ... Read more »
ದಿಯಾ ಎನ್ನುವ ಒಂದೇ ಒಂದು ಸಿನಿಮಾ ಪೃಥ್ವಿ ಅಂಬಾರ್ ಎನ್ನುವ ನಟನನ್ನು ನ್ಯಾಶನಲ್ ಸ್ಟಾರ್ ಮಾಡಿತು ಎನ್ನಬಹುದು. ಅದಕ್ಕೆ ಅಮೆಜಾನ್ ಪ್ರೈಮಲ್ಲಿ ಚಿತ್ರ ನೋಡಿ ಮೆಚ್ಚಿದಂಥ ದೇಶದ ವಿವಿಧ ರಾಜ್ಯಗಳ ಜನರೇ ಸಾಕ್ಷಿ. ಅಂಥ ಪೃಥ್ವಿ ಅಂಬಾರ್ ಇವತ್ತು ತಮ್ಮ ಜನ್ಮದಿನಾಚರಣೆ ಮಾಡಿಕೊಂಡರು. ಕರಾವಳಿಯ... Read more »
ಹಂಸಲೇಖಾ ಅವರ ಶಿಷ್ಯ ಆರವ್ ರಿಷಿಕ್ ಇತ್ತೀಚೆಗೆ ತಮ್ಮ ಸಂಗೀತ ಸಂಯೋಜನೆಯ ಹಾಡುಗಳ ಮೂಲಕ ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಚಂದನವನದ ಯುವ ನಿರ್ದೇಶಕ ರಾಜು ದೇವಸಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 4ನೇ ಚಿತ್ರ ಇದು. ಅಕ್ಷತೆ, ಗೋಸಿಗ್ಯಾಂಗ್, ಕತ್ತಲೆ ಕಾಡು ಚಿತ್ರಗಳ ಬಳಿಕ... Read more »
ಕನ್ನಡದ ಜನಪ್ರಿಯ ನಟ, ನಿರ್ದೇಶಕ ವಿ ರವಿಚಂದ್ರನ್ ಅವರ ಮಾವ ಅಂದರೆ ಪತ್ನಿ ಸುಮತಿಯವರ ತಂದೆ ನಿಧನರಾಗಿದ್ದಾರೆ. ಮಾಜಿ ಕೇಂದ್ರ ಸಚಿವರಾಗಿದ್ದ ಎ.ಎಮ್ ವೇಲು ಅವರು ಎರಡು ದಿನಗಳ ಹಿಂದೆ ಚೆನ್ನೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಎ.ಎಮ್ ವೇಲು ಅವರು ತಮಿಳು ನಾಡಿನ... Read more »
ಲಾಕ್ಡೌನ್ ಆದಮೇಲೆ ಸಿನಿಮಾರಂಗದಲ್ಲಿ ಎಲ್ಲರಿಗಿಂತ ಹೆಚ್ಚು ತಲೆ ಕೆಡಿಸಿಕೊಂಡಿರುವುದು ಎಂದರೆ ನಿರ್ಮಾಪಕ ವರ್ಗ. ಒಟಿಟಿ ಎನ್ನುವ ಫ್ಲಾಟ್ಫಾರ್ಮ್ ಈ ಸಂದರ್ಭದಲ್ಲಿ ಒಂದಷ್ಟು ಸಿನಿಮಾಗಳಿಗೆ ಆಸರೆಯಂತಾಗಿದ್ದು ಸುಳ್ಳಲ್ಲ. ಆದರೆ ಎಲ್ಲ ಸಿನಿಮಾಗಳು ಅಲ್ಲಿಯೂ ಸಲ್ಲಬೇಕಾಗಿಲ್ಲ. ಹಾಗೆ ಗೊಂದಲ, ಚಿಂತೆ ಹತಾಶೆಗೊಳಗಾದ ನಿರ್ಮಾಪಕರ ಪಾಲಿಗೆ ಯೂಟ್ಯೂಬ್ ಮೂಲಕ... Read more »
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ವಂಶಪಾರಂಪರ್ಯದಲ್ಲಿ ಬಂದು ಸ್ಟಾರ್ ಆಗಿರುವವರ ಮೇಲೆ ಸಿನಿ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ! ಅದಕ್ಕೆ ಪೂರಕವಾಗಿ ಸುಶಾಂತ್ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸದ ಉದ್ಯಮದ ಸ್ಟಾರ್ ಗಳು ಇನ್ನಷ್ಟು ಕೆಂಗಣ್ಣಿಗೆ ಗುರಿಯಾಗಿದ್ದರು. ಅದರಲ್ಲಿ ಮುಖೇಶ್... Read more »
ಇದು ಕಿರುಚಿತ್ರಗಳ ಕಾಲ. ಲಾಕ್ಡೌನ್ ಆದ ಮೇಲೆಯಂತೂ ಕಿರುಚಿತ್ರ ಮತ್ತು ಕಿರುತೆರೆಗಳಿಗೆ ಮೊರೆ ಹೋದವರೇ ಹೆಚ್ಚು. ಸದ್ಯದ ಈ ಎರಡೂ ಜನಪ್ರಿಯ ಮಾಧ್ಯಮಗಳನ್ನು ಜತೆಯಾಗಿಸಲು ಬಂದಿದೆ `ಪ್ರಗುಣಿ ಕಿರುಚಿತ್ರೋತ್ಸವ ಸ್ಪರ್ಧೆ…!’ ಇಲ್ಲಿ ಪ್ರಗುಣಿ ಎಂದರೆ ಈ ಕಿರುಚಿತ್ರೋತ್ಸವದ ಮೂಲಕ ಲಾಂಚ್ ಆಗುತ್ತಿರುವ ಕನ್ನಡದ ಹೊಸ... Read more »
ಕಳೆದ ಎರಡು ದಿನಗಳಿಂದ ಕರಾವಳಿಯ ಸಿನಿಮಾ, ನಾಟಕರಂಗ ವಿಭಾಗದಲ್ಲಿ ಒಂದು ಆತಂಕದ ವಿಚಾರ ಹರಿದಾಡುತ್ತಿದೆ. ತುಳು ಭಾಷೆಯ ಜನಪ್ರಿಯ ಕಲಾವಿದ ಅರವಿಂದ್ ಬೋಳಾರ್ ಅವರ ವಿರುದ್ಧ ಒಂದಷ್ಟು ಕಡೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಖಾಸಗಿ ವಾಹಿನಿ ಡೈಜಿವರ್ಲ್ಡ್ ನಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ವಾಹಿನಿ ಮುಖ್ಯಸ್ಥ... Read more »
ನಟ, ಸಾಹಿತಿ ಶೇಖರ ಭಂಡಾರಿ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್ ಬಾಧಿತರಾಗಿ ಸಾವನ್ನಪ್ಪಿದ ಕಲಾವಿದ ಹುಲಿವಾನ್ ಗಂಗಾಧರಯ್ಯ ಅವರ ಬಳಿಕ ಕನ್ನಡ ಸಿನಿಮಾ ಲೋಕದಿಂದ ಕೊರೊನಾದಿಂದಾಗಿ ಸಾವು ಕಾಣುತ್ತಿರುವ ಮತ್ತೋರ್ವ ನಟ ಇವರಾಗಿದ್ದಾರೆ. ಶೇಖರ ಭಂಡಾರಿಯವರು ಕಾರ್ಕಳ ಘಟ್ಟದ ಮನೆ ಬಾಬು ಭಂಡಾರಿ ಮತ್ತು ಅಭಯಾ... Read more »
ಮಾಲಾಶ್ರೀಯವರಂಥ ನಟಿ ಕನ್ನಡದಲ್ಲಿ ಬೇರೆ ಇಲ್ಲ. ಅವರವರ ಜಾಗದಲ್ಲಿ ಎಲ್ಲರಿಗೂ ಪ್ರತ್ಯೇಕವಾದ ಸ್ಥಾನ ಮಾನವಿದೆ. ಆದರೆ ಅಕ್ಷರಶಃ ಆಕ್ಷನ್ ಹೀರೋಯಿನ್ ಆಗಿ ಮೆರೆದ ನಟಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಇತ್ತೀಚೆಗೆ ಆಕ್ಷನ್ ಚಿತ್ರಗಳಿಂದ ಜನಪ್ರಿಯತೆ ಪಡೆಯುವ ಮೊದಲು ಅಷ್ಟೇ ದೊಡ್ಡ ಮಟ್ಟದಲ್ಲಿ ಸಾಂಸಾರಿಕ ಚಿತ್ರಗಳ ನಾಯಕಿಯಾದವರೂ... Read more »
ಕಳೆದ ವರ್ಷಾರಂಭದಲ್ಲೇ ತೆರೆಕಂಡು ವರ್ಷಪೂರ್ತಿ ಸುದ್ದಿಯಲ್ಲಿದ್ದ ಸಿನಿಮಾ `ಬೆಲ್ ಬಾಟಂ’. ಎಂಬತ್ತರ ದಶಕದಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಕಳ್ಳತನದ ಘಟನೆಯನ್ನು ಆಧಾರವಾಗಿಸಿದ ಚಿತ್ರದ ಪ್ರಮುಖ ಆಕರ್ಷಣೆ ನಾಯಕ ರಿಷಭ್ ಶೆಟ್ಟಿ ಮತ್ತು ರೆಟ್ರೋ ಕಾಲದ ಮೇಕಿಂಗ್ ಆಗಿತ್ತು. ಕನ್ನಡದ ಉತ್ತಮ, ಸಭ್ಯ ಚಿತ್ರಗಳ ನಿರ್ದೇಶಕ ಎಂದು... Read more »
ನಟ, ಕತೆಗಾರ, ಪತ್ರಕರ್ತ,ನಿರೂಪಕ ಯತಿರಾಜ್ ಅವರು ಒಂದು ಕಿರುಚಿತ್ರವನ್ನು ಹೊರಗೆ ತಂದಿದ್ದಾರೆ. ಅದರ ಹೆಸರು ‘ಚಿಂಟು- ನಂಬಲಾಗದ ನಂಟು' ಸಾಮಾನ್ಯವಾಗಿ ಕಿರುಚಿತ್ರಕ್ಕೆ ಎಲ್ಲರೂ ಆಯ್ಕೆ ಮಾಡುವಂಥ ದೆವ್ವ, ಅಪರಾಧ, ಪ್ರೇಮ, ಮೋಸ ಮೊದಲಾದ ವಿಚಾರಗಳನ್ನು ಬದಿಗಿಟ್ಟು ಪ್ರಚಲಿತ ಸಮಸ್ಯೆಯೊಂದಕ್ಕೆ ಧ್ವನಿಯಾಗಿರುವುದು ‘ಚಿಂಟು’ ವಿಶೇಷ. ಅದೇ... Read more »
‘ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸುಗಳ ಅಂತರಂಗದ ಚಳವಳಿ’ ಎನ್ನುವ ವಾಕ್ಯದ ಕೊನೆಯಲ್ಲಿ ವಿವೇಕಾನಂದ ಹೆಚ್.ಕೆ ಎನ್ನುವ ಹೆಸರು! ಇಂಥದೊಂದು ಅಂಕಿತದೊಂದಿಗೆ ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಲೇಖನಗಳಿಗೆ ಲೆಕ್ಕವಿಲ್ಲ. ನಿತ್ಯವೂ ಒಂದು ಪ್ರಚಲಿತ ವಿದ್ಯಮಾನವನ್ನೆತ್ತಿಕೊಂಡು... Read more »
ಜನಪ್ರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರುಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ವಿಶ್ವದಲ್ಲೇ ಹರಡಿರುವ ಕೊರೊನಾ ಇದೀಗ ನಮ್ಮ ದೇಶದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದು, ಇತ್ತೀಚೆಗೆ ಮನೆಯಲ್ಲೇ ಇರುವ ಖ್ಯಾತನಾಮರೂ ಕೂಡ ಸೋಂಕಿಗೊಳಗಾಗಿ ಸುದ್ದಿಗೆ ಗ್ರಾಸವಾಗುತ್ತಿರುವುದು ವಿಶೇಷ. ತಮಗೆ ಆಗಿರುವ ವೈರಸ್ ಅಟ್ಯಾಕ್ ಬಗ್ಗೆ ಸ್ವತಃ ಎಸ್.ಪಿ... Read more »