`ಸೂಫಿಯುಂ ಸುಜಾತಯುಂ’ ನಿರ್ದೇಶಕ ನಿಧನ

ಕೇರಳದ ಮಲಪ್ಪುರಂ ಜಿಲ್ಲೆಯ ನಾರಣಿಪುಳ ಶಾನವಾಜ್ ಬುಧವಾರ ರಾತ್ರಿ 10.20ಕ್ಕೆ ನಿಧನರಾಗಿದ್ದಾರೆ. ಸುಮಾರು ರಾತ್ರಿ 9.30ರ ಸುಮಾರಿಗೆ ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಆಸ್ಪತ್ರಗೆ ಬರಲು ಎರಡೂವರೆ ಗಂಟೆ ಕಾಲಾವಧಿಯ ಆಂಬುಲೆನ್ಸ್ ಪ್ರಯಾಣ ಮಾಡಲಾಗಿತ್ತು. ಕೊಯಂಬತ್ತೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಶಹನವಾಜ್‌ರನ್ನು... Read more »

`ಅವನಲ್ಲಿ ಇವಳಿಲ್ಲಿ’ ಈ ವಾರ ತೆರೆಯಲ್ಲಿ

ನವ ನಿರ್ದೇಶಕ ಸಂದೇಶ್ ಕೃಷ್ಣಮೂರ್ತಿನಿರ್ದೇಶನದ ಚಿತ್ರ `ಅವನಲ್ಲಿ ಇವಳಿಲ್ಲಿ’ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸಂದೇಶ್ ಕೃಷ್ಣಮೂರ್ತಿಯವರು ತಮ್ಮ ಹೆಸರಿಗೆ ತಕ್ಕಂತೆ ಚಿತ್ರದಲ್ಲೊಂದು ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಅದರ ಜೊತೆಗೆ ಇದೊಂದು ಲವ್-ಆಕ್ಷನ್ ಡ್ರಾಮ ಆಗಿದ್ದು ಪ್ರೇಕ್ಷಕರನ್ನು ಸೆಳೆಯುವುದೆಂಬ ನಿರೀಕ್ಷೆ ಅವರಲ್ಲಿದೆ.... Read more »

‘ಸಮುದಾಯ’ದ ಕಾರ್ಯದರ್ಶಿಯಾದ ಕಾವ್ಯ ಅಚ್ಯುತ್

ಸಮುದಾಯ ಬೆಂಗಳೂರು ಇದರ ನೂತನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಕಾವ್ಯಾ ಅಚ್ಯುತ್ ಆಯ್ಕೆಯಾಗಿದ್ದಾರೆ. ‘ಸಮುದಾಯ’ ಬೆಂಗಳೂರು ಇದರ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಖ್ಯಾತ ಸಾಮಾಜಿಕ‌ ಕಾರ್ಯಕರ್ತೆ, ರಂಗನಟಿ ಕಾವ್ಯ ಅಚ್ಯುತ್ ಆಯ್ಕೆಯಾಗಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದ... Read more »

ನವ ಜೋಡಿಗೆ ಸೆಕೆಂಡ್ ಲೈಫ್ !

ಯುವ ನಟ ಆದರ್ಶ್ ಗುಂಡುರಾಜ್ ಮತ್ತು ಸಿಂಧೂ ರಾವ್ ವಿವಾಹದ ದೃಶ್ಯಾವಳಿ‌ ಚಿತ್ರೀಕರಣವಾಗಿದೆ. ಲಾಕ್ಡೌನ್ ಬಳಿಕ ಸದ್ದಿಲ್ಲದೆ ನಡೆಯುತ್ತಿರುವ ವಿವಾಹದ ಪಟ್ಟಿಯಲ್ಲಿ ಈ ಯುವತಾರೆಯರ ಮದುವೆಯೂ ಸೇರಿಕೊಂಡಿದೆ. ಪರಿಸ್ಥಿತಿಗೆ ತಕ್ಕಂತೆ ಯಾವುದೇ ಅದ್ಧೂರಿತನವಿಲ್ಲದೆ ಸರಳವಾಗಿಯೇ ನೆರವೇರಿದೆ. ಅಂದಹಾಗೆ ಇವರಿಬ್ಬರು ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ... Read more »

‘ಸ್ಟಾರ್’ ಸಿನಿಮಾಗಳು ಕಲಿಸೋದೇನು..?!

ನಮ್ಮ ಇಂದಿನ ಸಿನಿಮಾಗಳು ಮಕ್ಕಳ‌ ಮೇಲೆ ಬೀರುತ್ತಿರುವ ಪರಿಣಾಮಗಳೇನು? ಈ ಬಗ್ಗೆ ಯೋಚಿಸಿದಾಗ ನಿಜಕ್ಕೂ ಆತಂಕ ಮೂಡುವುದು ಸಹಜ. ಯಾಕೆಂದರೆ ಮನರಂಜನೆ ಮಾತ್ರ ಗುರಿಯಾಗಿಸಿಕೊಂಡು ನೋಡಿದರೂ ಬಹಳಷ್ಟು ಬಾರಿ ಚಿತ್ರಗಳಲ್ಲಿ ಸ್ಟಾರ್ ನಾಯಕರ ಅದ್ಧೂರಿತನವೇ ಹಾಸ್ಯ, ಮನರಂಜನೆ ಎಲ್ಲವೂ ಆಗಿರುತ್ತದೆ. ಕೇವಲ ಕೆಲವು ದಶಕಗಳ... Read more »

ಅಪರೂಪದ ಚಿತ್ರ ‘ಅಪೊಕ್ಯಾಲಿಪ್ಟೊ’

ಈ ಬಾರಿ ಹಳೆಯದೊಂದು ಹಾಲಿವುಡ್ ಸಿನಿಮಾದ ವಿಮರ್ಶೆಯನ್ನು ನೀಡುತ್ತಿದ್ದೇವೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬರಹಗಳ‌ ಮೂಲಕ ಜನಪ್ರಿಯರಾಗಿರುವ ಚೇತನ್ ಶಶಿ ಬರೆದಿದ್ದಾರೆ. ಜಗತ್ತಿನ ಶೇಕಡ 98ರಷ್ಟು ಜನರಿಗೆ ಇಂತಹದ್ದೊಂದು ಭಾಷೆ ಅಸ್ತಿತ್ವದಲ್ಲಿದೆ ಅನ್ನೋದೆ ಗೊತ್ತಿರಲಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಇರೋ ಭಾಷೆಯಲ್ಲಿ, ಅದೂ... Read more »

ಅನುರಾಗದ ಸಂಭ್ರಮ..!

ಅನುರಾಗ ಸಂಗಮ ಸಿನಿಮಾ ನೋಡಿದವರಿಗೆ ಆ ಚಿತ್ರ ತೀರ ಇತ್ತೀಚೆಗೆ ಬಂದಂತೆ ಅನಿಸಬಹುದು. ಯಾಕೆಂದರೆ ಅದರಲ್ಲಿ ತುಂಬಿರುವ ಭಾವಗಳು ಅಷ್ಟು ಹಸಿರು. ಆದರೆ ಚಿತ್ರ ತೆರೆಕಂಡು ಇಂದಿಗೆ 25 ವರ್ಷಗಳು! ಆ ಕುರಿತಾದ ವಿಶೇಷ ಲೇಖನ ಇದು. ಚಿತ್ರದಲ್ಲಿ ರಮೇಶ್ ಅರವಿಂದ್ ಗಿಂತ ಪ್ರಾಧಾನ್ಯತೆ... Read more »

ನಾನೇಕೆ `ಶಕೀಲಾ’ ಸಿನಿಮಾ ಮಾಡಿದೆ..?

ದಶಕದ ಹಿಂದಿನವರೆಗೂ ಶಕೀಲ ಸಿನಿಮಾ' ಎಂದರೆ ಕಣ್ಣರಳಿಸುವ ಒಂದು ಸಮೂಹ ಇತ್ತು. ಆದರೆ ಆಂಡ್ರಾಯಿಡ್ ಫೋನ್, ಪೋರ್ನ್ ವಿಡಿಯೋಗಳು ಹರಿದಾಡಿದ ಬಳಿಕ ಆ ಹೆಸರನ್ನೇ ಮರೆತವರಿದ್ದಾರೆ. ಆದರೆ ಅದಕ್ಕೂ ಹಿಂದಿನ ದಶಕಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ವಯಸ್ಕರ ಸಿನಿಮಾಗಳನ್ನು ಶಕೀಲ ಸಿನಿಮಾಗಳೆಂದೇ ಕರೆಯುವ ಟ್ರೆಂಡ್... Read more »

ಛಾಯಾಗ್ರಾಹಕ ಅರುಣ್ ಕುಮಾರ್ ವಿಧಿವಶ

ಸುಮಾರು 30ಕ್ಕೂ ಅಧಿಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದಂಥ ಅರುಣ್ ಕುಮಾರ್ ಇಂದು ಸಂಜೆ ನಿಧನರಾಗಿದ್ದಾರೆ. ಅವರ ಸಾವಿಗೆ ಬ್ರೈನ್ ಟ್ಯೂಮರ್ ಕಾರಣವೆಂದು ತಿಳಿದು ಬಂದಿದೆ. ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡ ಚಿತ್ರಗಳಲ್ಲಿ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ಚಿತ್ರ ಅದರ ಛಾಯಾಗ್ರಹಣದ ಕಾರಣದಿಂದ ಹೆಚ್ಚು ಸುದ್ದಿ ಮಾಡಿತ್ತು.... Read more »

`ಕನ್ನಡಿಗ’ದಲ್ಲಿ ಸುಮಲತಾ ಇಲ್ಲ!

ಕನ್ನಡದ ಕನಸುಗಾರ ಬಿಎಮ್ ಗಿರಿರಾಜ್ ನಿರ್ದೇಶನದಲ್ಲಿ `ಕನ್ನಡಿಗ’ನಾಗಿ ನಟಿಸುತ್ತಿರುವ ಚಿತ್ರದ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತು. ಚಿತ್ರದಲ್ಲಿ ಚೆನ್ನಭೈರಾದೇವಿ ಎನ್ನುವ ರಾಣಿಯ ಪಾತ್ರದಲ್ಲಿ ಸುಮಲತಾ ಅಂಬರೀಷ್ ಅವರು ನಟಿಸಲಿದ್ದಾರೆ ಎಂದು ನಿರ್ದೇಶಕ ಗಿರಿರಾಜ್ ಮುಹೂರ್ತದ ವೇಳೆ ತಿಳಿಸಿದ್ದರು. ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ... Read more »

ಸೌಭಾಗ್ಯವತಿಯಾದ TV9 ಭಾಗ್ಯ

ಕನ್ನಡದ ಜನಪ್ರಿಯ ವಾರ್ತಾವಾಹಿನಿ ಟಿವಿ9ನಲ್ಲಿ ‘ಫಿಲ್ಮಿ ಫಂಡ’ ಜನಪ್ರಿಯ ಸಿನಿಮಾ ಕಾರ್ಯಕ್ರಮ. ಕಳೆದ ಮೂರು ವರ್ಷಗಳಿಂದ ಅದರ ಜನಪ್ರಿಯ ವರದಿಗಾರ್ತಿಯಾಗಿ ಸಾಕಷ್ಟು ಸುದ್ದಿಗಳನ್ನು ನೀಡಿರುವ ಭಾಗ್ಯ ಇಂದು ವಿವಾಹಿತೆಯಾದರು. ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಅಂಜನ್ ಕುಮಾರ್ ಎನ್ನುವ ವರನನ್ನು ಮಲ್ಲೇಶ್ವರದ ‘ಬಡಗನಾಡು ಕಲ್ಯಾಣ... Read more »

ಸರಳ, ಮನೋಜ್ಞ ಚಿತ್ರವೊಂದರ ಕುರಿತು..

ಆಕ್ಟ್ 1978 ಚಿತ್ರವನ್ನು ವೀಕ್ಷಿಸಿದ ಅಶೋಕ್ ಶೆಟ್ಟರ್ ಈ ಬಾರಿ ಸಿನಿಕನ್ನಡದ ಜತೆಗೆ ಚಿತ್ರದ ಕುರಿತಾದ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸದ ಪ್ರಾಧ್ಯಾಪಕರಾದ ಅಶೋಕ ಶೆಟ್ಟರ್ ಅಪರೂಪದಲ್ಲಿ ಮೆಚ್ಚುವ ಸಿನಿಮಾಗಳ ಪಟ್ಟಿಯಲ್ಲಿ ಆಕ್ಟ್ ಕೂಡ ಸ್ಥಾನ ಪಡೆದಿದೆ ಎನ್ನುವುದೇ ಚಿತ್ರಕ್ಕೆ... Read more »

ಅಕ್ಷರ ಮಾಂತ್ರಿಕ ಇನ್ನಿಲ್ಲ..!

ಜನಪ್ರಿಯ ಪತ್ರಕರ್ತ ರವಿಬೆಳಗೆರೆ ನಿಧನರಾಗಿದ್ದಾರೆ. ಗುರುವಾರ ತಡರಾತ್ರಿ ಹೃದಯಾಘಾತದಿಂದ ಮೃತರಾದ ಅವರಿಗೆ 62 ವರ್ಷ ವಯಸ್ಸಾಗಿತ್ತು. ಸಿನಿಕನ್ನಡದ ಜೊತೆಗೆ ಮಾತನಾಡಿದ ಹಾಯ್ ಬೆಂಗಳೂರ್ ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಬಿಲ್ಲಾಡಿ “ಬಾಸ್ ನಿನ್ನೆ ಈ ವಾರದ ಪತ್ರಿಕೆಯ ಕೆಲಸ ಮುಗಿಸಿಯೇ ಹೋಗಿದ್ದಾರೆ” ಎಂದು ನಿಟ್ಟುಸಿರು... Read more »

ಆಲ್ಬಮ್ ಹಾಡಿನಲ್ಲಿ ಅನುರಾಧಾ ಭಟ್

ದಶಕದಿಂದ ಕನ್ನಡ ಸಿನಿಮಾಗಳ ಜನಪ್ರಿಯ ಗೀತೆಗಳಿಗೆ ದನಿಯಾದವರು ಅನುರಾಧಾ ಭಟ್. ಆ ಕಾರಣಕ್ಕಾಗಿ ಅವರು ಕನ್ನಡಿಗರಿಂದ ವಿಶೇಷ ಅಭಿಮಾನವನ್ನು ಪಡೆದಿದ್ದಾರೆ. ತಮ್ಮನ್ನು ಕನ್ನಡದ ಸಂಪತ್ತಾಗಿ ಕಾಣುವ ಅಭಿಮಾನಿಗಳಿಗೆ ‘ಕನ್ನಡವೇ ತಮ್ಮ ಸಿರಿವಂತಿಕೆ’ ಎಂದು ತೋರಿಸುವಂಥ ವಿಡಿಯೋ ಹಾಡೊಂದನ್ನು ನೀಡಿದ್ದಾರೆ ಅನುರಾಧಾ. ವಿಶೇಷ ಏನೆಂದರೆ ಈ... Read more »

ನಟ ಸೋಮಣ್ಣ ನಿಧನ

ಹಿರಿಯ ನಟ ಸೋಮಣ್ಣ ಇಂದು ನಿಧನರಾಗಿದ್ದಾರೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಸೋಮಣ್ಣನ ಬಗ್ಗೆ ಇಂದಿನ ತಲೆಮಾರಿಗೆ ಅರಿವು ಕಡಿಮೆ ಎಂದೇ ಹೇಳಬಹುದು. ಯಾಕೆಂದರೆ ಅವರು ನಟನೆಗೆ ವಿರಾಮ ನೀಡಿ ಸಾಕಷ್ಟು ಕಾಲವಾಗಿದೆ. ಆದರೆ ಅವರ ಸಹೋದರ ದತ್ತಣ್ಣನ ವಿಚಾರಕ್ಕೆ... Read more »

`ಶಂಕ್ರಿ’ಯಾಗಿ ರಮಿತ್ ಎಂಟ್ರಿ..!

ಶಂಕರನಾಗ್ ಎನ್ನುವ ಹೆಸರು ಕನ್ನಡ ಚಿತ್ರರಂಗ ಇವರುತನಕ ಒಂದು ಪ್ರೇರಣಾ ಶಕ್ತಿಯಾಗಿ ಇರುತ್ತದೆ. ಇದೀಗ ಅದೇ ಶಂಕರನಾಗ್ ಸ್ಫೂರ್ತಿಯಲ್ಲಿ ಕಿರುಚಿತ್ರವೊಂದು ಬಿಡುಗಡೆಗೆ ತಯಾರಾಗುತ್ತಿದ್ದು, ಅದರಲ್ಲಿ ಶಂಕರನಾಗ್ ಅಭಿಮಾನಿಯಾಗಿ ನವನಟ ರಮಿತ್ ಅಭಿನಯಿಸುತ್ತಿದ್ದಾರೆ. `ಆಟೋ ಶಂಕ್ರಿ’ ಎನ್ನುವ ಈ ಶಾರ್ಟ್‌ಫಿಲ್ಮ್ ಪೋಸ್ಟರ್ ಬಿಡುಗಡೆಗೆ ತಯಾರಿ ನಡೆದಿದೆ.... Read more »

ನಿರ್ದೇಶಕ ಜಿ ಮೂರ್ತಿ ನಿಧನ

ನಿರ್ದೇಶಕ ಜಿ ಮೂರ್ತಿಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಸಾವು ಸಂಭವಿಸಿದೆ ಎನ್ನುವುದನ್ನು ಅವರ ಸಹೋದರ ಸಂಬಂಧಿ ಸುಂದರ್ ಸಿನಿಕನ್ನಡಕ್ಕೆ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ನಿಧನರಾಗಿರುವ ಅವರ ಪಾರ್ಥಿವ ಶರೀರವನ್ನು ಪ್ರಸ್ತುತ ಅವರ ಸುಮನ ಹಳ್ಳಿಯ ಮನೆಯಲ್ಲಿ ಇರಿಸಲಾಗಿದೆ. ಸಂಜೆ ನಾಲ್ಕು... Read more »

ಸ್ಮರಣಾರ್ಹ ಪ್ರತಿಭೆ ಡಾ.ಕೊಯಿರಾ ನೆನಪುಗಳು

“ಭಾರತ ಹಳ್ಳಿಗಳ ದೇಶ; ಹಳ್ಳಿಗಳಲ್ಲೇ ಅದರ ಜೀವನಾಡಿ ಇದೆ” ಎಂದಿದ್ದರು ಮಹಾತ್ಮಾ ಗಾಂಧಿ. ಗ್ರಾಮೀಣ ಪ್ರದೇಶದ ಅದ್ಭುತ ಸಾಧಕರನ್ನು ಕಂಡಾಗಲೆಲ್ಲ ಈ ಮಾತು ಎಷ್ಟು ನಿಜ ಎಂದು ಅನಿಸುವುದು ಇದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಹುಟ್ಟಿ ಗ್ರಾಮೀಣ ಪ್ರತಿಭೆಗಳ ಬಗ್ಗೆ ಅಧ್ಯಯನ ನಡೆಸಿ ಅವರನ್ನು... Read more »

ನವದುರ್ಗೆಯಾದ ವಿಷ್ಣುಪ್ರಿಯ..!

ನವರಾತ್ರಿಗೆ ನವವಿಧ ವಸ್ತ್ರ ವೈವಿಧ್ಯ, ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಅರಿತಿದ್ದೇವೆ. ಆದರೆ ನವದುರ್ಗೆಯ ರೂಪದಲ್ಲೇ ದೇವತೆ ಪ್ರತ್ಯಕ್ಷವಾದರೆ ಹೇಗಿರಬಹುದು? ಅಂಥದೊಂದು ಕಲ್ಪನೆಗೆ ಸಾಕಾರ ನೀಡಿರುವುದು ವಿಷ್ಣುಪ್ರಿಯಾ ಎನ್ನುವ ಬಾಲಕಿ ಮತ್ತು ಪುನೀಕ್ ಶೆಟ್ಟಿ ಎನ್ನುವ ಛಾಯಾಗ್ರಾಹಕ! ಈ ಕುರಿತಾದ ವಿಶೇಷ ಮಾಹಿತಿ ನಿಮ್ಮ ಸಿನಿಕನ್ನಡದಲ್ಲಿ ಮಾತ್ರ.... Read more »

ಹೊಸ ಮನು ಪ್ರಾರಂಭ..!

ಚಿತ್ರರಂಗದಲ್ಲಿಯೂ ಮನ್ವಂತರ ಸಂಭವಿಸುತ್ತಿರುತ್ತದೆ. ಪ್ರೇಮಲೋಕ, A ಆದ ಬಳಿಕ ಮುಂಗಾರುಮಳೆ ಬಂದಂತೆ ಇಲ್ಲಿ ಹೊಸದೊಂದು ಪ್ರಾರಂಭಕ್ಕೆ ಮುನ್ನುಡಿ ಬರೆದು ಕುಳಿತಿದ್ದಾರೆ ಮನು ಕಲ್ಯಾಡಿ. ಕ್ರೇಜಿಸ್ಟಾರ್ ಪುತ್ರ ಮನುರಂಜನ್‌ರನ್ನು ನಾಯಕರನ್ನಾಗಿಸಿ ಪ್ರಾರಂಭ ಎನ್ನುವ ಚಿತ್ರದ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ ಮನು. ಹಿಂದೆ ಇಪ್ಪತ್ತರ ಹರೆಯದಲ್ಲಿ ಪ್ರೇಮಲೋಕ... Read more »

ನಟ, ಬರಹಗಾರ ಕೃಷ್ಣನಾಡಿಗ್ ನಿಧನ

ಹಿರಿಯ ನಟ ಕೃಷ್ಣ ನಾಡಿಗ್ ಅವರು ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಸಾಕಷ್ಟು ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದರೂ ಕೂಡ ಕಲಾವಿದರಾಗಿ ಹೆಚ್ಚು ಜನಪ್ರಿಯರಾಗಿದ್ದರು. ನಿರ್ದೇಶಕರಾಗಬೇಕು ಎನ್ನುವ ಕನಸಿನಿಂದ ಚಿತ್ರರಂಗ ಪ್ರವೇಶ ಮಾಡಿದ್ದ ಅವರ... Read more »
error: Content is protected !!