ಆ ದಿನಗಳು ಖ್ಯಾತಿಯ ನಟ ಚೇತನ್ ಅವರು ಇಂದು ವೈವಾಹಿಕ ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ಬಹುಕಾಲದ ಸ್ನೇಹಿತೆ ಮೇಘಾ ಜತೆಗೆ ಸಹಿ ಹಾಕಿ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಮೇಘಾ ಅವರು ಮೂಲತಃ ಉತ್ತರ ಭಾರತದವರಾಗಿದ್ದು, ಇಬ್ಬರೂ ಸಂವಿಧಾನದ ಬಗ್ಗೆ ಅಭಿಮಾನ... Read more »
ಐದು ದಿನಗಳ ಹಿಂದೆ ಕನ್ನಡಿಗರ ಪ್ರೀತಿಯ ನಿರೂಪಕ ಸಂಜೀವ ಕುಲಕರ್ಣಿ ನಿಧನರಾದರು. ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಅವರು 49ನೆಯ ವಯಸ್ಸಿನಲ್ಲೇ ಅಕಾಲಮೃತ್ಯುವಿಗೆ ಒಳಗಾದರು. ಆದರೆ ಇಂಥದೊಂದು ಸಾವಿನಿಂದ ಪಾರಾಗಲು ಕಳೆದ ಹದಿನೈದು ವರ್ಷಗಳಿಂದ ಅವರು ಹೋರಾಟ ನಡೆಸಿದ್ದರು. ಆರಂಭದಲ್ಲಿ ಆಪ್ತರಿಂದ ಧನ ಸಹಾಯ ಪಡೆದಿದ್ದ... Read more »
ಚಿತ್ರ: ಡಿಂಗ ತಾರಾಗಣ: ಆರ್ವ ಗೌಡ, ಅಭಿಷೇಕ್ ಜೈನ್, ಅನುಷಾ ರಾಡ್ರಿಗಸ್ ನಿರ್ದೇಶನ: ಅಭಿಷೇಕ್ ಜೈನ್ ನಿರ್ಮಾಣ: ಮಧು ದೀಕ್ಷಿತ್ ಐ ಫೋನ್ ನಲ್ಲಿ ಚಿತ್ರೀಕರಿಸಲಾದ ಸಿನಿಮಾ ಎನ್ನುವ ಹೆಮ್ಮೆಯೊಂದಿಗೆ ತೆರೆಕಂಡಿರುವ ಚಿತ್ರವೇ ಡಿಂಗ. ಕಳೆದ ವಾರ ನಾಯಿ ಜತೆಗೆ ಮನುಷ್ಯನ ಭಾವನಾತ್ಮಕ ಸಂಬಂಧದ... Read more »
ಚಿತ್ರ: ಕಾಣದಂತೆ ಮಾಯವಾದನು ತಾರಾಗಣ: ವಿಕಾಸ್, ಸಿಂಧು ಲೋಕನಾಥ್ ನಿರ್ದೇಶಕ: ರಾಜ್ ಪತಿಪಾಟಿ ನಿರ್ಮಾಣ: ಬ್ಯಾಕ್ ಬೆಂಚರ್ಸ್ ಮೋಶನ್ ಪಿಕ್ಚರ್ಸ್ ನಾವೆಲ್ಲ ಸತ್ತಮೇಲೆ ಏನಾಗುತ್ತೇವೆ? ನಮ್ಮ ಬದುಕು ಏನೇ ಇದ್ದೂ ಅದು ನಾವು ಸಾಯುವ ತನಕ ಮಾತ್ರ ಎಂಬ ನಂಬಿಕೆ ಹಲವರಿಗೆ. ಅಥವಾ ನಮ್ಮ... Read more »
ನಿಖಿಲ್ ಕುಮಾರ ಸ್ವಾಮಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ಸಮಾರಂಭ ಇಂದು ಮುಂಜಾನೆ ಅದ್ದೂರಿಯಾಗಿ ನೆರವೇರಿತು. ಬಸವನಗುಡಿಯ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದ ಬಳಿಕ ನಿಖಿಲ್ ಮತ್ತು ಚಿತ್ರತಂಡದವರು ಮಾಧ್ಯಮದ ಜತೆಗೆ ಮಾತನಾಡಿದರು. “ನನ್ನ ಪ್ರಕಾರ ಪ್ರತಿ... Read more »
ಚುನಾವಣೆ ಸಮಯದಲ್ಲಿ ನನ್ನ ಮೇಲೆ ಸಾಕಷ್ಟು ಟ್ರೋಲ್ ಮಾಡಲಾಯಿತು. ಆದರೆ ಅದರಿಂದ ನನಗೆ ಹೆಸರು ಜನಪ್ರಿಯತೆ ಬಂದಿರಬಹುದೇ ಹೊರತು ಬೇರೆ ಯಾವ ಪರಿಣಾಮ ಆಗಿಲ್ಲ.. ಎಂದು ನಿಖಿಲ್ ಕುಮಾರ ಸ್ವಾಮಿ ಹೇಳಿದ್ದಾರೆ. ಅವರು ಲಹರಿ ಸಂಸ್ಥೆಯ ನಿರ್ಮಾಣದಲ್ಲಿರುವ ತಮ್ಮ ನೂತನ ಸಿನಿಮಾದ ಮುಹೂರ್ತದ ವೇಳೆ... Read more »
ಒಬ್ಬ ನಟನ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ಹೊರಬಂದಿರುವ ದಾಖಲೆ ಏನಾದರೂ ಇದ್ದರೆ, ಅದು ಡಾ.ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ. ಆ ದಾಖಲೆಯ ಮಟ್ಟವನ್ನು ಹೆಚ್ಚಿಸುವಂತೆ ರಾಜ್ ಕುಮಾರ್ ಅವರ ಪುಸ್ತಕಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಅವುಗಳಿಗೆ ತಾಜಾ ಉದಾಹರಣೆ ಎನ್ನುವಂತೆ ಪತ್ರಕರ್ತ ಕಟ್ಟೆ ಗುರುರಾಜ್... Read more »
“ಮಂಡ್ಯದ ಗಂಡು ಎನ್ನುವ ಹೆಸರು ಅಂಬರೀಷ್ ಅವರಿಗೆ ಮಾತ್ರ. ಅವರು ಏಳುಕೋಟಿ ಕನ್ನಡದ ಆಸ್ತಿ. ಅದು ಚಿತ್ರದ ಶೀರ್ಷಿಕೆ ಮಾತ್ರವಲ್ಲ, ಅವರಿಗೆ ಸಿಕ್ಕಿರುವಂಥ ಬಿರುದುಗಳು. ಹಾಗಾಗಿ ಮಂಡ್ಯದ ಗಂಡು, ಕಲಿಯುಗ ಕರ್ಣ ಮೊದಲಾದ ಯಾವುದೇ ಹೆಸರನ್ನು ಕೂಡ ಮುಂದೆ ಯಾರೂ ಬಳಸಬಾರದು” ಎಂದು ಅಂಬರೀಷ್... Read more »
“ಅಶುಬೆದ್ರ ಅವರು ನನಗೆ ನಿರ್ಮಾಪಕರಾಗಿ ಪರಿಚಯವಾದವರು. ಸಾಮಾನ್ಯವಾಗಿ ಯಾರಾದರೂ ನಿರ್ಮಾಪಕರು ನಟನಾ ಕ್ಷೇತ್ರಕ್ಕೆ ಧುಮುಕಿದರೆ ಇವರಿಗೇಕೆ ಈ ನಟನೆಯ ಉಸಾಬರಿ ಬೇಕಿತ್ತು ಅಂತ ಅಂದುಕೊಳ್ಳುವುದು ಇದೆ. ಆದರೆ ಅಶು ಬೆದ್ರ ಅವರ ಬಗ್ಗೆ ಯಾವಾಗಲೂ ಇವರು ಯಾಕೆ ನಟನಾಗಲಿಲ್ಲ? ಯಾಕೆ ನಿರ್ಮಾಣ ಮಾತ್ರ ಮಾಡುತ್ತಾರೆ... Read more »
“ಈ ಪುಸ್ತಕದ ಶೀರ್ಷಿಕೆಯೇ ಹಾಡಿನ ಸಾಲು. ಅದನ್ನು ಪದಗಳೇ ನೆನಪಿಸುತ್ತವೆ ಎನ್ನುವುದಾದರೆ ಅದಕ್ಕೆ ಆ ಹಾಡಿಗೆ ಇರುವ ಪ್ರಭಾವವೇ ಕಾರಣ” ಎಂದರು ಶರಣ್. ಅವರು “ಮಧುರ ಮಧುರವೀ ಮಂಜುಳಗಾನ” ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. “ನಾನು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸಿದ್ದೆ.... Read more »
ಡಾರ್ಲಿಂಗ್ ಕೃಷ್ಣ ಎರಡೆರಡು ಶೇಡ್ ನಲ್ಲಿ ನಟಿಸಿರುವ ಚಿತ್ರ ‘ಲವ್ ಮಾಕ್ಟೈಲ್’ ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರದ ಬಿಡುಗಡೆಯ ಪೂರ್ವಭಾವಿಯಾಗಿ ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಒಂದಷ್ಟು ತಮಾಷೆಯ ಸಂಗತಿಗಳ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತು. ಇದೊಂದು ಕಾಲೇಜ್ ಲವ್ ಸ್ಟೋರಿಯಾಗಿದ್ದು, ಚಿತ್ರ ನೋಡಿದ... Read more »
ನವ ನಿರ್ದೇಶಕ ಸಿ ಜೆ ವರ್ಧನ್ ರಚಿಸಿ, ನಿರ್ದೇಶಿಸಿರುವ ಚಿತ್ರ ‘ಓಜಸ್ ದಿ ಲೈಟ್’ ಬಿಡುಗಡೆಗೆ ಸಿದ್ಧವಾಗಿದೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಸಿನಿಮಾದ ವಿಶೇಷಗಳ ಬಗ್ಗೆ ಚಿತ್ರತಂಡ ಹಂಚಿಕೊಂಡಿದೆ. “ನಾಯಕಿಯ ಮನೆಯಲ್ಲಿ ದಿಗ್ಭ್ರಮೆಗೆ ಒಳಗಾಗುವಂಥ ಘಟನೆಯೊಂದು ನಡೆಯುತ್ತದೆ. ಆದರೆ ಅದಕ್ಕೆ ಹೆದರದೆ ರಾವಣನನ್ನು... Read more »
‘ಅಯೋಗ್ಯ’ ಎನ್ನುವ ಹೆಸರೇ ಆಕರ್ಷಕ! ಕನ್ನಡದ ಹಾಡುಗಳುಪರಭಾಷಿಗರನ್ನು ಕೂಡ ಸೆಳೆದ ಉದಾಹರಣೆ ಗಳು ಸಾಕಷ್ಟಿವೆ. ಆದರೆ ಯೂಟ್ಯೂಬ್ ನಲ್ಲಿ ಹತ್ತು ಕೋಟಿಯನ್ನು ಮೀರಿ ವ್ಯೂವ್ಸ್ ಪಡೆದ ಕನ್ನಡದ ಮೊದಲ ಹಾಡು ಎನ್ನುವ ಕ್ರೆಡಿಟ್ ಮಾತ್ರ ‘ಏನಮ್ಮಿ..ಏನಮ್ಮಿ’ಗೆ ಸಲ್ಲುತ್ತದೆ. ಅಯೋಗ್ಯ ಎನ್ನುವ ಹೆಸರಿನೊಂದಿಗೆ ಬಂದರೂ ಯೋಗ್ಯತೆಯ... Read more »
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರೂಪಕ, ಕಿರುತೆರೆ ಪ್ರತಿಭೆ ಸಂಜೀವ ಕುಲಕರ್ಣಿ (49)ನಿಧನರಾಗಿದ್ದಾರೆ. ಕಿರುತೆರೆ ಮತ್ತು ವೇದಿಕೆಯ ನಿರೂಪಣಾ ಕ್ಷೇತ್ರಕ್ಕೆ ಮೆರುಗು ತಂದುಕೊಟ್ಟವರು ಸಂಜೀವ ಕುಲಕರ್ಣಿ. ತೊಂಬತ್ತರ ದಶಕದಲ್ಲಿ ಉದಯ ಟಿ.ವಿಯಲ್ಲಿ ಪ್ರಸಾರವಾದಂಥ ಹಲವಾರು ಕಾರ್ಯಕ್ರಮಗಳಿಂದ ಮನಸೆಳೆದ ಅವರು ಈ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಡಿಮ್ಯಾಂಡಪ್ಪೋ ಡಿಮ್ಯಾಂಡು’... Read more »
“ಕಳೆದು ಐದು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಐದು ಚಿತ್ರಗಳನ್ನು ಮಾಡಿದ್ದೆ. ಆದರೆ ಲೀಡಾಗಿ ಒಳ್ಳೆಯ ಅವಕಾಶಗಳು ಈಗ ದೊರಕುತ್ತಿವೆ. ನಾಯಕನಾಗಿ ನನಗೆ ಈ ವರ್ಷ ಹೆಚ್ಚು ಹೆಚ್ಚು ಅವಕಾಶಗಳು ದೊರೆಯುತ್ತಿವೆ. ಅದರಲ್ಲಿ ಕೂಡ ‘ರೈಮ್ಸ್’ ಚಿತ್ರದಲ್ಲಿನ ಪಾತ್ರ ತುಂಬ ವಿಭಿನ್ನವಾಗಿದೆ” ಎಂದು ಭರವಸೆ ವ್ಯಕ್ತಪಡಿಸಿದರು... Read more »
ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್ ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್ ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್ ನಿರ್ಮಾಣ: ವೈ ಎನ್ ಶಂಕರೇಗೌಡ ಮತ್ತು ಇತರರು ಇದು ಎರಡು ದೇಶವಾಸಿಗಳ ನಡುವಿನ ಸಂಬಂಧದ ಕತೆ. ಸಾಮಾಜಿಕ ಜಾಲತಾಣದಲ್ಲಿ ದೇಶ ಭಕ್ತಿಯ ವಿಚಾರ ಬಂದೊಡನೆ ಕಾಣಿಸುವ ಎರಡು... Read more »
ಕನ್ನಡ ಚಿತ್ರರಂಗದಲ್ಲಿ ಬರಹಗಾರರು ಗುರುತಿಸಿಕೊಳ್ಳುವುದು ಕಡಿಮೆ. ಅದೇ ರೀತಿ ನಮ್ಮ ಸಿನಿಮಾಗಳಲ್ಲಿ ಕಾದಂಬರಿ ಅಥವಾ ನೇರ ಕತೆಯಾಧಾರಿತ ಚಿತ್ರಗಳಿಗಿಂತ ರಿಮೇಕ್ ಗೆ ಮಹತ್ವ. ಇಂಥ ಸಂದರ್ಭದಲ್ಲಿ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸುವೆಡೆಗೆ ಹೆಜ್ಜೆ ಹಾಕುತ್ತಿರುವವರು ಟಿ.ಕೆ ದಯಾನಂದ್. ಈಗಾಗಲೇ ಕವಿ, ಕಥೆಗಾರ, ಪತ್ರಕರ್ತ,ಅಂಕಣಕಾರ ಹಾಗೂ ಅನ್ಯಾಯಗಳ... Read more »
“ಡಾರ್ಲಿಂಗ್ ಕೃಷ್ಣ ನನಗೆ ಸುನೀಲ್ ಎಂದೇ ಪರಿಚಯ. ಯಾಕೆಂದರೆ ಅವರು ನನ್ನ ‘ಜಾಕಿ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿದ್ದ ದಿನಗಳಿಂದಲೇ ಪರಿಚಯ. ಹಾಡುಗಳನ್ನು ನೋಡಿದೆ. ಚಿನ್ನಿ ಪ್ರಕಾಶ್ ಅವರ ಕೊರಿಯೋಗ್ರಫಿಗೆ ರವಿಚಂದ್ರನ್ ಚಿತ್ರಗಳಿಂದಲೇ ಅಭಿಮಾನಿ. ಇಲ್ಲಿನ ಹಾಡುಗಳು ಕೂಡ ಉತ್ತಮವಾಗಿ ಮೂಡಿ ಬಂದಿವೆ” ಎಂದು ಪುನೀತ್... Read more »
ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆದಿತ್ಯ ರಾವ್ ಎನ್ನುವ ಭಯೋತ್ಪಾದಕನದ್ದೇ ಸುದ್ದಿ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸುವ ಮೂಲಕ ಪ್ರಯಾಣಿಕರು ಮತ್ತು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಈತನ ಬಗ್ಗೆ ಚಿತ್ರ ಬರುತ್ತಿರುವ ಸುದ್ದಿ ಹಬ್ಬಿದೆ. ‘ಜೋಗಿ’ ಪ್ರೇಮ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ... Read more »