“ಬಿಂಬ” ಚಿತ್ರಕ್ಕೆ ತುಂಬಲಾಗದ ನಷ್ಟ ಮಾಡಿದ ರಾಜ್ಯ ಪ್ರಶಸ್ತಿ ಸಮಿತಿ

ಈ ಜಗತ್ತಿನಲ್ಲಿ ಪ್ರಶಸ್ತಿ ಬಂದವರಿಗೇನೇ ಪ್ರಶಸ್ತಿ ಬರಬೇಕು ಎನ್ನುವ ನಿಯಮಗಳೇನೂ ಇಲ್ಲ. ಆದರೆ ಪ್ರಶಸ್ತಿ ವಿಜೇತರು ಮಾಡಿ, ವಿಶ್ವದ ಗಮನ ಸೆಳೆದ ಚಿತ್ರವನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿಲ್ಲ ಎನ್ನುವುದು ವಿಪರ್ಯಾಸ. ಇದೇ ಆರೋಪದೊಂದಿಗೆ   ‘ಬಿಂಬ’ ಚಿತ್ರತಂಡ ಮಾಧ್ಯಮದ ಮುಂದೆ ಬಂದಿದೆ.

ಬಿಂಬ ಎನ್ನುವುದು ಖ್ಯಾತ ನಾಟಕಕಾರ ಸಾಮಿ ವೆಂಕಟಾದ್ರಿ ಅಯ್ಯರ್ (ಸಂಸ)ರ ಜೀವನದ ಕತೆಯನ್ನು ಆಧಾರಿಸಿ ಮಾಡಿದಂಥ ಚಿತ್ರ. ಈ ಹಿಂದೆ ನಾಟಕವಾಗಿ ಪ್ರದರ್ಶನವಾಗಿದ್ದ ಕತೆಯನ್ನು ಸಿನಿಮಾವಾಗಿ ಮಾಡಲಾಗಿತ್ತು. ಅದರ ಪ್ರಮುಖ ವಿಶೇಷತೆ ಏನೆಂದರೆ ಒಬ್ಬನೇ ನಟ, ಒಂದೇ ಲೊಕೇಶನ್, ಒಂದೇ ವಾದ್ಯದ ಹಿನ್ನೆಲೆ ಸಂಗೀತದೊಂದಿಗೆ ಬಂದು ದಾಖಲೆ ಮೂಡಿಸಿದ ಚಿತ್ರ. ಮಾತ್ರವಲ್ಲ 90 ನಿಮಿಷಗಳ ಈ‌ ಚಿತ್ರವನ್ನು ಒಂದೇ ಟೇಕ್ ನಲ್ಲಿ ಚಿತ್ರೀಕರಿಸಲಾಗಿತ್ತು.ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಯು ಆರ್ ಎಫ್ ವಲ್ಡ್ ರೆಕಾರ್ಡ್ ಪ್ರಶಸ್ತಿಗಳನ್ನು ಕನ್ನಡಕ್ಕೆ ತಂದುಕೊಟ್ಟಂಥ ಚಿತ್ರ ಇದು. ಲಂಡನ್ ಚಿತ್ರೋತ್ಸವದಲ್ಲಿ ಕೂಡ‌ ಸಿನಿಮಾ ಪ್ರದರ್ಶನಗೊಂಡಿದೆ. ಆದರೆ ಇತ್ತೀಗಷ್ಟೇ ಘೋಷಣೆಯಾದ 2018ರ ರಾಜ್ಯ ಪ್ರಶಸ್ತಿ ಘೋಷಣೆಯ ವೇಳೆ ಚಿತ್ರವನ್ನು ಪರಿಗಣಿಸಿಲ್ಲ ಎನ್ನುವುದು ದುರಂತ ಎಂದು ನಿರ್ದೇಶಜ ಜಿ ಮೂರ್ತಿ ಹೇಳಿದ್ದಾರೆ.

“ಕಳೆದ ಬಾರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ. ಆ ಬಗ್ಗೆ ಮಾಧ್ಯಮಗೋಷ್ಠಿ ಏರ್ಪಡಿಸುವ ಹಂತದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ವಿದ್ಯಾಶಂಕರ್ ಅವರು ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಚಿತ್ರ ನೋಡಿದವರು ಪ್ರಪಂಚದಲ್ಲೇ ಇಂಥ ಸಿನಿಮಾ ಬಂದಿಲ್ಲ ಎನ್ನುತ್ತಾರೆ. ಆದರೆ ಪ್ರಶಸ್ತಿ ಆಯ್ಕೆ ಸಮಿತಿಯವರು ಒಂದು ಪ್ರಶಂಸೆಯ ಮಾತು ಕೂಡ ಆಡುವುದಿಲ್ಲ. ಅದೇ ಸಂದರ್ಭದಲ್ಲಿ ಈ ಬಾರಿ ಪ್ರಶಸ್ತಿ ಬಂದ ಚಿತ್ರಗಳ ಬಗ್ಗೆ ನಾವು ಪ್ರಶ್ನಿಸುವುದಿಲ್ಲ. ಯಾಕೆಂದರೆ ಅವುಗಳನ್ನು ನಾವು ನೋಡಿಲ್ಲ. ಆದರೆ ಈ ವಿಶ್ವದಾಖಲೆ ಮಾಡಿದಂಥ ಚಿತ್ರವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಂತೆ ವರ್ತಿಸಿರುವುದು ನೋವು ತಂದಿದೆ ” ಎಂದು ನಟ ಶ್ರೀನಿವಾಸ್ ಪ್ರಭು ಹೇಳಿದರು.

ಬಿಂಬದ ಒಂದು ಝಲಕ್‌ ಇಲ್ಲಿದೆ ನೋಡಿ

Recommended For You

Leave a Reply

error: Content is protected !!
%d bloggers like this: