‘ರಾಜ ನಿವಾಸ’ ಚಿತ್ರೀಕರಣ ಪೂರ್ಣ

ಯುವ ಪ್ರತಿಭೆ ರಾಘವ್ ನಾಯಕ್ ಮತ್ತು ಕೃತ್ತಿಕಾ ರವೀಂದ್ರ ಜೋಡಿಯಾಗಿ ನಟಿಸುತ್ತಿರುವ ‘ರಾಜ‌ನಿವಾಸ’ದ ಚಿತ್ರೀಕರಣ ಪೂರ್ತಿಯಾಗಿದೆ.

‘ಡಿಎಎಂ 36 ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜನಿವಾಸ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಡೈಮಂಡ್ ಸ್ಟಾರ್
ಶ್ರೀನಗರ ಕಿಟ್ಟಿ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಅವರು ಪಾಲ್ಗೊಂಡಿರುವ ಸಾಹಸದ ದೃಶ್ಯವೊಂದನ್ನು ಅದ್ಧೂರಿ ಸೆಟ್ ನಲ್ಲಿ ಚಿತ್ರೀಕರಿಸಲಾಗಿದೆ. ಸಿನಿಮಾ ಶೂಟಿಂಗ್ ಸುಮಾರು 56 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಆಸುಪಾಸಿನಲ್ಲೇ ಪೂರ್ತಿ ಮಾಡಲಾಗಿದೆ.

ಪೋಷಕ ಪಾತ್ರದಲ್ಲಿ ಬಲರಾಜ್ ವಾಡಿ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ. ಇದೇ ಬರುವ ದಸರಾ ಹಬ್ಬದಂದು ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಪಿ ಆಂಜನಪ್ಪ ಹಾಗೂ ಲೋಕೇಶ್ ಎನ್ ಗೌಡ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಮಿಥುನ್ ಸುವರ್ಣ ಅವರು ವಹಿಸಿದ್ದಾರೆ.

Recommended For You

Leave a Reply