‘ಜೇಮ್ಸ್’ ಆ್ಯಕ್ಷನ್ ‌ಶುರು..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರದ ಮುಹೂರ್ತ ದೇವಸಂದ್ರದ ಬಾಲಾಂಜನೇಯ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ನೆರವೇರಿತು.

ಮಾಧ್ಯಮದ ಜತೆಗೆ ಮಾತನಾಡಿದ ಪುನೀತ್, ನಿರ್ದೇಶಕರು ಹೇಳುತ್ತಾರೆ ಇದು ಅಭಿಮಾನಿಗಳಿಗಾಗಿ ಮಾಡುತ್ತಿರುವ ಚಿತ್ರ ಎಂದು. ಮುಖ್ಯವಾಗಿ ಚಿತ್ರ ಮಾಡಿದವರಿಗೆ ಲಾಭವಾಗಬೇಕು. ಯಾಕೆಂದರೆ ಅವರು ನಮ್ಮನ್ನು ನಂಬಿ ಹಣ ಹಾಕುತ್ತಾರೆ ಎಂದು ನಿರ್ಮಾಪಕರ ಪರವಾಗಿರುವ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಚಿತ್ರದ ಹೆಸರಲ್ಲೇ ಒಂದು ಆ್ಯಕ್ಷನ್ ಛಾಯೆ ಇದೆ. ಹಾಗಾಗಿ ಖಂಡಿತವಾಗಿ ಚಿತ್ರದಲ್ಲಿ ಆ್ಯಕ್ಷನ್ ಗೆ ಆದ್ಯತೆ ಇರುತ್ತದೆ ಎಂದು ಪುನೀತ್ ಸುಳಿವು ಬಿಟ್ಟು ಕೊಟ್ಟರು.

ನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, “ಇದರಲ್ಲಿ ಅಪ್ಪು ಸರ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ಇನ್ನೂ ಫೈನಲಾಗಿಲ್ಲ. ಹೆಚ್ಚಿನ ದೃಶ್ಯಗಳನ್ನು ಕರ್ನಾಟಕದಲ್ಲೇ ಚಿತ್ರೀಕರಿಸಲಾಗುತ್ತದೆ. ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭಿಸಲಿದ್ದು, ಹಾಡುಗಳ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗುವ ಯೋಜನೆ ಇದೆ” ಎಂದರು.

ಕಿಶೋರ್ ಪತ್ತಿಕೊಂಡ ನಿರ್ಮಿಸುತ್ತಿರುವ ಜೇಮ್ಸ್ ಚಿತ್ರದಲ್ಲಿ ಶ್ರೀಶ ಕುದುವಳ್ಳಿ‌ ಛಾಯಾಗ್ರಾಹಕರು. ಚರಣ್ ಸಂಗೀತದಲ್ಲಿ ಹಾಡುಗಳು ಮೂಡಿ ಬರಲಿದ್ದು, ರವಿ ವರ್ಮ ಸಾಹಸ, ದೀಪು ಎಸ್ ಕುಮಾರ್ ಸಂಕಲನ, ರವಿಸಂತೇಹೈಕ್ಳು ಕಲೆ ಮತ್ತು ಎ ಹರ್ಷ ಅವರ ನೃತ್ಯ ನಿರ್ದೇಶನವಿದೆ.

Recommended For You

Leave a Reply

error: Content is protected !!