ತೀರದ ನೋವಿಗೊಂದು ಅಭಿಮಾನದ ಹಾಡು ಹಾಡಿದ ನವೀನ್ ಸಜ್ಜು

ಪುನೀತ್ ರಾಜಕುಮಾರ್ ಜನ್ಮದಿನ ಹಲವು ಕಾರಣಗಳಿಗೆ ದಾಖಲೆಯಾಗಿ ಉಳಿಯಿತು. ಈಗಲೂ ಆಚರಣೆಯ ರೀತಿಗಳು ಮುಗಿದಿಲ್ಲ. ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು ನಿನ್ನೆ ತಾನೇ ಪುನೀತ್ ಕುರಿತಾದ ಹಾಡೊಂದನ್ನು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.

ಎಂಬ ಮನುಷ್ಯತ್ವವದ ಸಾಕಾರಮೂರ್ತಿಯನ್ನು ಕಳೆದುಕೊಂಡು ಐದು ತಿಂಗಳು ಕಳೆದರು ನೋವು ಮಾತ್ರ ಇನ್ನು ಜನರ ಮನಸ್ಸಿನಲ್ಲಿ ಹಾಗೆ ಉಳಿದಿದೆ.
ಅಪ್ಪು ನೆನಪಿನಲ್ಲಿ ಅಭಿಮಾನಿಗಳು ರಕ್ತದಾನ,ಅನ್ನ ಸಂತರ್ಪಣೆ,ನೇತ್ರದಾನ,ಆರೋಗ್ಯ ತಪಾಸಣೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ.

‘ಅಪ್ಪು’ ಎಂಬ ಮಾಣಿಕ್ಯನನ್ನು ಕಳೆದುಕೊಂಡ ತೀರದ ನೋವಿಗೆ ಅಭಿಮಾನದ ಹಾಡನ್ನು ಹಾಡಿದ್ದಾರೆ ಬಿಗ್ ಬಾಸ್ ಖ್ಯಾತಿಯ ಗಾಯಕ ನವೀನ್ ಸಜ್ಜು.

ತಮ್ಮ ದೇಸಿ ಧ್ವನಿಯಿಂದಲೆ ಹೆಸರುವಾಸಿಯಾಗಿರುವ ನವೀನ್ ಸಜ್ಜುರವರ ಈ ಹಾಡು ಅಪ್ಪು ಅಭಿಮಾನಿಗಳ ಕಣ್ಣಾಳಿಗಳನ್ನು ಒದ್ದೆ ಮಾಡಿಸಿದೆ.

‘ದೊಡ್ಮನೆ ದೊರೆ’ ಅಪ್ಪು ಅಜರಾಮರ ಎಂಬ ಈ ಹಾಡನ್ನು ಬರೆದವರು ಚೇತನ್ ಕುಮಾರ್ .
ಸಂಗೀತ ಸಂಯೋಜನೆ-ಗಾಯನ-ನಿರ್ದೇಶನ ನವೀನ್ ಸಜ್ಜು ನಿರ್ವಹಿಸಿದ್ದಾರೆ.

ಮಾರ್ಚ್ ೨೦ ನೇ ತಾರೀಖಿನಂದು ಬಿಡುಗಡೆಯಾಗಿರುವ ದೊಡ್ಮನೆ ದೊರೆ ಹಾಡನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ
ನಿಶಾ

Recommended For You

Leave a Reply