‘ಅಮೃತಮತಿ’ ಧ್ವನಿಸಾಂದ್ರಿಕೆಯ ಜನಾರ್ಪಣೆ

ಅಮೃತಮತಿ‌ ಚಿತ್ರದ ನಿರ್ದೇಶಕರಾದ ಧ್ವನಿ ಸಾಂದ್ರಿಕೆ ಬಿಡುಗಡೆಯಾಗಿದೆ. ಜನಪ್ರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಅತಿಥಿಯಾಗಿ ಆಗಮಿಸಿ ಹಾಡುಗಳನ್ನು ಬಿಡಗಡೆಗೊಳಿಸಿದರು.ಚಿತ್ರದ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪನವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡುತ್ತಾ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀಡಿದರು.

ಇದು ಹಾಡುಗಳ ಲೋಕಾರ್ಪಣೆಯಲ್ಲ, ಜನಾರ್ಪಣೆ ಎಂದ ಬರಗೂರು ಅವರು “13ನೇ ಶತಮಾನದಲ್ಲಿ ಜನ್ನ ಕವಿ ಬರೆದ ಜನ್ನ ಕವಿಯ ‘ಯಶೋಧರ ಚರಿತೆ’ಯನ್ನು ಆಧಾರ ಮಾಡಿಟ್ಟುಕೊಂಡು ತಯಾರು ಮಾಡಿರುವ ಚಿತ್ರ ಇದು. ಕತೆಯನ್ನು ಮೂಲಕ ಮರುವ್ಯಾಖ್ಯಾನ ಮಾಡಿದ್ದೇನೆ. ಅರಮನೆ ಅಮೃತಮತಿಗೆ ಸೆರೆಮನೆ. ಹೊರಮನೆಯಲ್ಲಿನ ಕುದುರೆ ಲಾಯದವನ ಪ್ರೀತಿ ಆಕೆಯ ಆತ್ಮಸಾಕ್ಷಿಯ ಶೋಧವನ್ನು ಮಾಡುವ ಪ್ರಯತ್ನ ಮಾಡಿದ್ದೇನೆ. ಕುದುರೆ ಲಾಯದವನ ಬಳಿಗೆ ಹೋಗುವುದು ಕಾಮದಿಂದ ಮಾತ್ರವೇ? ಹಾಗಾದರೆ ಮತ್ತೇಕೆ ಇರಬಹುದು ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇನೆ” ಎಂದರು.

ಚಿತ್ರದ ನಾಯಕಿ ಹರಿಪ್ರಿಯಾ ಮಾತನಾಡಿ “ಬರಗೂರು ರಾಮಚಂದ್ರಪ್ಪನವರ ಅವರ ಚಿತ್ರಗಳು ತುಂಬ ಅರ್ಥಪೂರ್ಣವಾಗಿರುತ್ತದೆ ಎಂದು ಗೊತ್ತಿತ್ತು. ಶೂಟಿಂಗ್ ನನಗೆ ಹೊಸ ಅನುಭವ. ಚಿತ್ರೀಕರಣ ಶುರುವಾಗ ಮೊದಲು ಪ್ರತಿದಿನ ಬೆಳಿಗ್ಗೆ ಒಂದು ರೌಂಡ್ ಟೇಬಲ್ ಮಾತುಕತೆಯಲ್ಲಿ ಎಲ್ಲ ಕಲಾವಿದರನ್ನು ಸೇರಿಸಲಾಗುತ್ತಿತ್ತು. ಇದು ನನಗೆ ಹೊಸ ಅನುಭವ. ಲೇಔಟ್ ನಾಗರಾಜ್ ಅವರು ನೀಡಿದ ಕಾಸ್ಟ್ಯೂಮ್ ಚೆನ್ನಾಗಿತ್ತು” ಎಂದರು.

ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್ ಅವರು ಬರಗೂರು ಸರ್ ಅವರ ಚಿತ್ರಕ್ಕೆ ಸಂಗೀತ ನೀಡುವುದೇ ಖುಷಿಯ ವಿಚಾರ. ಇದರಲ್ಲಿ ಎರಡು ಜಾನಪದ ಗೀತೆಗಳನ್ನು ಬಳಸಿದ್ದೇವೆ. ಉಳಿದ ಗೀತೆಗಳನ್ನು ಬರಗೂರು ಸರ್ ಸ್ವತಃ ಬರೆದಿದ್ದಾರೆ” ಎಂದರು. ಚಿತ್ರದ ನಾಯಕ ಕಿಶೋರ್ ಜತೆಗೆ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ವತ್ಸಲಾ ಮೋಹನ್ ಗಾಯಕರಾದ ಖಾಸಿಂ, ಜೋಗಿ ಸುನೀತಾ, ನಿರ್ಮಾಪಕ ಪುಟ್ಟಣ್ಣ, ಮೊದಲಾದವರು ಉಪಸ್ಥಿತರಿದ್ದರು.

Recommended For You

Leave a Reply

error: Content is protected !!
%d bloggers like this: