
“ಮಾಧ್ಯಮಗಳು ನನ್ನ ಆರಂಭದ ದಿನಗಳಿಂದಲೇ ಪ್ರೋತ್ಸಾಹ ನೀಡುತ್ತಾ ಬಂದಿವೆ. ಇದೀಗ ಸಿನಿಮಾ ವಿಮರ್ಶಕರ ವತಿಯಿಂದ ನೀಡಲಾಗುವ ಶ್ರೇಷ್ಠ ನಟ ಪ್ರಶಸ್ತಿ ಕೂಡ ನನಗೆ ದೊರಕಿರುವುದು ಹೆಮ್ಮೆ ಅನಿಸುತ್ತದೆ. ಈ ಪ್ರಶಸ್ತಿಯು ಕ್ರೆಡಿಟ್ ಪ್ರಮುಖವಾಗಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಸಲ್ಲಬೇಕು” ಎಂದು ಜಗ್ಗೇಶ್ ಅವರು ಹೇಳಿದರು. ಅವರು ‘ಚಂದನವನ ಕ್ರಿಟಿಕ್ಸ್ ಅಕಾಡೆಮಿ’ ವತಿಯಿಂದ ನೀಡಲಾದ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
‘ರಂಗನಾಯಕಿ’ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದುಕೊಂಡ ಅದಿತಿ ಪ್ರಭುದೇವ ಅವರು “ಇದು ತಮಗೆ ದೊರಕಿರುವ ಪ್ರಥಮ ಪ್ರಶಸ್ತಿ ಆಗಿದ್ದು, ಪ್ರಥಮದಲ್ಲೇ ಶ್ರೇಷ್ಠ ನಟಿ ಪ್ರಶಸ್ತಿ ದೊರಕಿರುವುದು ತುಂಬ ಖುಷಿ ತಂದಿದೆ” ಎಂದರು. ಅವರು ಕೂಡ ಪ್ರಶಸ್ತಿಯನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ಅವರಿಗೆ ಸಮರ್ಪಿಸುವುದಾಗಿ ತಿಳಿಸಿದರು.
ಕಳೆದ ಕೆಲವು ತಿಂಗಳಿನಿಂದ ಸುದ್ದಿಯಲ್ಲಿದ್ದ ‘ಚಂದನವನ ಕ್ರಿಟಿಕ್ಸ್ ಅಕಾಡೆಮಿ’ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶನಿವಾರ ಸಂಜೆ ಸಾಂಗವಾಗಿ ನೆರವೇರಿದ್ದು, ಹೆಚ್ಚಿನ ವಿಭಾಗದ ಪ್ರಶಸ್ತಿಗಳು ವರ್ಷಾಂತ್ಯದಲ್ಲಿ ತೆರೆಕಂಡ ‘ಅವನೆ ಶ್ರೀಮನ್ನಾರಾಯಣ’ ಚಿತ್ರಕ್ಕೆ ಸಂದಾಯವಾಗಿದ್ದು ವಿಶೇಷವಾಗಿತ್ತು.
ಚಂದನವನ ಕ್ರಿಟಿಕ್ಸ್ ಅಕಾಡೆಮಿಯ ಪ್ರಥಮ ವರ್ಷದ ಪ್ರಶಸ್ತಿ ವಿಜೇತ ಚಿತ್ರಗಳು ಮತ್ತು ಅದಕ್ಕೆ ಸಂಬಂಧ ಪಟ್ಟ ಕಲಾವಿದ, ತಂತ್ರಜ್ಞರ ಪೂರ್ಣ ವಿವರ ಹೀಗಿದೆ.
1.ಅತ್ಯುತ್ತಮ ಕಲಾ ನಿರ್ದೇಶನ
ಉಲ್ಲಾಸ್ – ಅವನೇ ಶ್ರೀಮನ್ನಾರಾಯಣ
2.ಅತ್ಯುತ್ತಮ ವಿಎಫ್ ಎಕ್ಸ್
ಅವನೇ ಶ್ರೀಮನ್ನಾರಾಯಣ
3.ಅತ್ಯುತ್ತಮ ಸಾಹಸ
ಅವನೇ ಶ್ರೀಮನ್ನಾರಾಯಣ
4.ಅತ್ಯುತ್ತಮ ನೃತ್ಯ ನಿರ್ದೇಶನ
ಇಮ್ರಾನ್ ಸರ್ದಾರಿಯಾ- ಹ್ಯಾಂಡ್ಸ್ ಪ್ – ಅವನೇ ಶ್ರೀಮನ್ನಾರಾಯಣ
5.ಅತ್ಯುತ್ತಮ ಸಂಕಲನ
ರಾಜೇಂದ್ರ ಅರಸ್- ಪ್ರೀಮಿಯರ್ ಪದ್ಮಿನಿ
6.ಅತ್ಯುತ್ತಮ ಸಾಹಿತ್ಯ
ಪ್ರಮೋದ ಮರವಂತೆ- ಇನ್ನುನು ಬೇಕಾಗಿದೆ- ಮುಂದಿನ ನಿಲ್ದಾಣ
7.ಅತ್ಯುತ್ತಮ ಗಾಯಕಿ
ಅದಿತಿ ಸಾಗರ್- ಸಂಶಯ ನೀ ಸಾಗುತಾ…- ಕವಲುದಾರಿ
8.ಅತ್ಯುತ್ತಮ ಗಾಯಕ
ಕಡಬಗೆರೆ ಮುನಿರಾಜು- ಆದಿ ಜ್ಯೋತಿ ಬನ್ಯೋ… ಬೆಲ್ ಬಾಟಮ್
9.ಅತ್ತ್ಯುತ್ತಮ ಛಾಯಾಗ್ರಹಣ
ಕರಮ್ ಚಾವ್ಲಾ- ಅವನೇ ಶ್ರೀಮನ್ನಾರಾಯಣ
10.ಅತ್ಯುತ್ತಮ ಸಂಭಾಷಣೆ
ಕವಿರಾಜ್- ಕಾಳಿದಾಸ ಕನ್ನಡ ಮೇಷ್ಟ್ರು
11.ಅತ್ಯುತ್ತಮ ಹಿನ್ನಲೆ ಸಂಗೀತ
ಅಜನೀಶ್ ಲೋಕನಾಥ್ – ಅವನೇ ಶ್ರೀಮನ್ನಾರಾಯಣ
12.ಅತ್ಯುತ್ತಮ ಸಂಗೀತ
ಅಜನೀಶ್ ಲೋಕನಾಥ- ಬೆಲ್ ಬಾಟಂ
13.ಅತ್ಯುತ್ತಮ ಬಾಲ ನಟ/ನಟಿ
ಐಶ್ವರ್ಯ ಉಪೇಂದ್ರ- ದೇವಕಿ
14.ಅತ್ಯುತ್ತಮ ಪೋಷಕ ನಟಿ
ಭಾಗೀರತಿ ಬಾಯಿ – ಮಿಸ್ಸಿಂಗ್ ಬಾಯ್
ಸೋನ್ ಗೌಡ – ಐ ಲವ್ ಯು
15.ಅತ್ಯುತ್ತಮ ಪೋಷಕ ನಟ
ಅನಂತನಾಗ್ – ಕವಲುದಾರಿ
16.ಅತ್ಯುತ್ತಮ ನಟಿ
ಅದಿತಿ ಪ್ರಭುದೇವ- ರಂಗನಾಯಕಿ
17.ಅತ್ಯುತ್ತಮ ನಟ
ಜಗ್ಗೇಶ್ – ಪ್ರೀಮಿಯರ್ ಪದ್ಮಿನಿ
18.ಅತ್ಯುತ್ತಮ ಚಿತ್ರಕಥೆ
ಬೆಲ್ ಬಾಟಮ್ – ಜಯತೀರ್ಥ
19.ಅತ್ಯುತ್ತಮ ಚಲನಚಿತ್ರ
ಪ್ರೀಮಿಯರ್ ಪದ್ಮಿನಿ