ಬಸವನಗುಡಿಯ ನ್ಯಾಶನಲ್ ಗ್ರೌಂಡ್ ನಲ್ಲಿ ಶಿವರಾತ್ರಿ ಪ್ರಯುಕ್ತ ಸಲಗ ಚಿತ್ರತಂಡ ಫ್ಲಡ್ ಲೈಟ್ ಕ್ರಿಕೆಟ್ ಮ್ಯಾಚ್ ಹಮ್ಮಿಕೊಂಡಿದೆ. ಅದರಲ್ಲಿ ಆಟಗಾರರಾಗಿರುವುದು ಬ್ಲಾಕ್ ಕೋಬ್ರ ವಿಜಯ್ ಮತ್ತು ಡಾಲಿ ಧನಂಜಯ್ ಎನ್ನುವುದು ವಿಶೇಷ.
ಇಂದು ಸಂಜೆ 6.30ಕ್ಕೆ ಸಲಗ ಕ್ರಿಕೆಟ್ ಮ್ಯಾಚ್ ಎಂದು ಮೊದಲೇ ತೀರ್ಮಾನಿಸಲಾಗಿತ್ತು. ಡಾಲಿ ಧನಂಜಯ್ ನಾಯಕರಾಗಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಇಂದು ತೆರೆಕಂಡಿರುವ ಕಾರಣ, ಧನಂಜಯ್ ಥಿಯೇಟರ್ ಸುತ್ತಾಟ ನಡೆಸಿ ಆಗಮಿಸಿದ್ದಾರೆ. ಧನಂಜಯ್ ಮತ್ತು ವಿಜಯ್ ಸಮವಸ್ತ್ರದೊಂದಿಗೆ ಮೈದಾನ ಪ್ರವೇಶಿಸುತ್ತಿದ್ದ ಹಾಗೆ ಅಭಿಮಾನಿಗಳು ಜೈಕಾರ ಕೂಗಿದರು. ಕ್ರಿಕೆಟ್ ಅಭಿಮಾನಿಗಳು, ದುನಿಯಾ ವಿಜಯ್ ಅಭಿಮಾನಿಗಳು, ಡಾಲಿ ಧನಂಜಯ್ ಅಭಿಮಾನಿಗಳು, ‘ಸಲಗ’ ಚಿತ್ರದ ಅಭಿಮಾನಿಗಳು, ಸಿನಿಮಾರಂಗದ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್ ಅಭಿಮಾನಿಗಳು, ಜಾಗರಣೆ ಪ್ರಿಯರು ಹೀಗೆ ಎಲ್ಲರೂ ಸೇರಿರುವುದು ಕ್ರೀಡಾಳುಗಳಿಗೆ ಉತ್ಸಾಹ ತಂದಿದೆ. ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಮ್ಯಾಚ್ ಮುಗಿದ ಬಳಿಕ ಯಾರು ಗೆದ್ದರು ಮತ್ತು ಇತರ ಮಾಹಿತಿಗಳನ್ನು ಸಿನಿಕನ್ನಡ ನಿಮಗೆ ನೀಡಲಿದೆ.