ಕನ್ನಡದಲ್ಲಿ ನಿರ್ಮಾಪಕಿಯರ ಸಂಖ್ಯೆ ತೀರ ಕಡಿಮೆ. ಅವರ ನಡುವೆ ಅಭ್ಯುದಯಕ್ಕೆ ಬರುತ್ತಿರುವವರು ಮಾಲತಿ ಗೌಡ! ‘ಅಭ್ಯುದಯ ಕಂಬೈನ್ಸ್’ ಮೂಲಕ ಮಾಲತಿ ಗೌಡ ನಿರ್ಮಿಸಿರುವ ‘ದಿ ಸೂಟ್’ ಚಿತ್ರದ ಸೆನ್ಸಾರ್ ಪೂರ್ಣಗೊಂಡಿದೆ.
ತಮ್ಮ ಚಿತ್ರಕ್ಕೆ ದೊರಕಬಹುದಾದ ಮಾರುಕಟ್ಟೆಯ ಬಗ್ಗೆ ಅರಿತುಕೊಳ್ಳಲು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕರ ಸಂಘ ಆಯೋಜಿಸಿದ್ದ ‘ಫಿಲ್ಮ್ ಬಜಾರ್’ಗೆ ನಿರ್ಮಾಪಕಿ ಮಾಲತಿಗೌಡ ಆಗಮಿಸಿದ್ದರು.
ಸಿಕನ್ನಡದ ಜತೆ ಮಾತನಾಡಿದ ಅವರು ಸದ್ಯದಲ್ಲೇ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ನೆರವೇರಲಿದೆ. ಭಗತ್ ರಾಜ್ ನಿರ್ದೇಶಿಸಿರುವ ಪ್ರಥಮ ಚಿತ್ರ ಇದಾಗಿದ್ದು ಗಡ್ಡ ವಿಜಿ, ನಾಗೇಂದ್ರ ಪ್ರಸಾದ್, ಉಮೇಶ್ ಬಣಕಾರ್, ದೀಪ್ತಿ ಕಾಪ್ಸೆ, ಧಾನ್ವಿ ಕೋಟೆ,
ಚಿದು ಶ್ರೀಧರ್ ಮೊದಲಾದವರ ತಾರಾಗಣವಿರುವುದಾಗಿ ತಿಳಿಸಿದರು.
ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು ಸಸ್ಪೆನ್ಸ್ ಸಬ್ಜೆಕ್ಟ್ ಹೊಂದಿದೆ ಎಂದು ನಿರ್ಮಾಪಕಿ ಮಾಲತಿ ಗೌಡ ಸಿನಿಕನ್ನಡದೊಂದಿಗೆ ತಿಳಿಸಿದ್ದಾರೆ.