
ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯದ ಲಾಕ್ಡೌನ್ ಪರಿಸ್ಥಿತಿಯ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಾಮಾಜಿಕ ಜಾಲತಾಣದ ಮೂಲಕ ಒಂದು ಮನವಿ ನೀಡುವುದಾಗಿ ಸೂಚಿಸಿರುವ ಉಪೇಂದ್ರ ಉಲ್ಲೇಖಿಸಿರುವ ವಿಚಾರಗಳು ನಿಜಕ್ಕೂ ಯೋಚಿಸಬೇಕಾದಂಥ ಸಂಗತಿಗಳಾಗಿವೆ .
ಮಾನ್ಯ ಮುಖ್ಯಮಂತ್ರಿಗಳಲ್ಲಿ ಒಂದು ವಿನಂತಿ….
ದಯವಿಟ್ಟು ಎರಡರಲ್ಲಿ ಯಾವುದಾದರೂ ಒಂದು ಮಾಡಿ.
- ಶೇಕಡ ನೂರು ಲಾಕ್ಡೌನ್… ಸಂಪೂರ್ಣ ಸರ್ಕಾರೀ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆಯಿಂದ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸಿ. ( ಹಾಲು, ತರಕಾರೀ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರೇ ಸೇರುತ್ತಾರೆ ). ( ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ ).
- ಜನರಿಗೇ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್ಡೌನ್ ತೆರೆಯಿರಿ. ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ( ಸೋಶಿಯಲ್ ಡಿಸ್ಟೆನ್ಸಿಂಗ್ ) ಅಂತರ ಕಾಯ್ದುಕೊಂಡು, ಮಾಸ್ಕ್ ದರಿಸಿ ಅವರವರ ವ್ಯವಹಾರ ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರೂ ( ಹೀಗೆ ನಾಯಕರು ಮಾಡಿಬಿಟ್ಟಿದ್ದಾರೆ ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ ).
ಲಾಕ್ಡೌನ್ ಮಾಡಿಕೂಡ ಜನರನ್ನು ಹಾಲು ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ ?
ಇಷ್ಟೆಲ್ಲಾ ಲಾಕ್ಡೌನ್ ಮಾಡೀನೇ ನಮ್ ದಡ್ಜ ಜನರು ಹೀಗೆ ಇನ್ನು ಲಾಕ್ಡೌನ್ ತೆಗದ್ರೆ ರೋಡ್ ರೋಡಲ್ಲಿ ಹೆಣಗಳು ಬೀಳುತ್ತೆ ಅಂತ ಹೇಳುವವರಿಗೆ (ಹೆದರುವವರಿಗೆ ) ಒಂದು ಕಿವಿಮಾತು. ಹೀಗೇ ಲಾಕ್ಡೌನ್ ಮುಂದುವರಿಸಿದರೂ ಅದೇ ಪರೀಸ್ಥಿತಿ ಬರಬಹುದು ಯೋಚನೆ ಮಾಡಿ.
ಮಲಗಿದ್ರೆ – ಸಾವು
ಕೂತಿದ್ರೆ – ರೋಗ
ನಡೀತಿದ್ರೆ – ಜೀವನ.