ರಾಖಿ ಕಟ್ಟಿದ ರಾಕಿ ಭಾಯ್

ಇವರನ್ನು ಕಂಡರೆ ಉರ್ಕೊಳ್ಳೋರು ಒಬ್ರೋ ಇಬ್ರೋ ಇರಬಹುದು. ಆದರೆ ಊರು ತುಂಬ ಅಣ್ತಮ್ಮನಂಥ ಫ್ರೆಂಡ್ಸು, ಫ್ಯಾನ್ಸು. ಮನೆಯೊಳಗೊಬ್ಬ ಒಡಹುಟ್ಟಿದ ಮುದ್ದಿನ ತಂಗಿ. ಸಹೋದರಿ ನಂದಿನಿಯ ಕೈಗಳಿಂದ ರಾಖಿ ಕಟ್ಟಿಸಿಕೊಳ್ಳದಿದ್ದರೆ ರಾಕಿ ಭಾಯ್ ಗೆ ಸಮಾಧಾನವೇ ಇಲ್ಲ. ಹಾಗಾಗಿಯೇ ಇಂದು ಕೂಡ ರಕ್ಷಾ ಬಂಧನಕ್ಕೆ ಸರಿಯಾಗಿ ಹಾಸನಕ್ಕೆ ತೆರಳಿ ತಂಗಿಯ ಬಳಿ ಸೇರಿದ್ದಾರೆ. ಈ ಅಣ್ಣ ತಂಗಿಯ ಅನುಬಂಧದ ಬಗ್ಗೆ ಖುದ್ದಾಗಿ ಯಶ್ ತಂಗಿ ನಂದಿನಿ ರಾಹುಲ್ ಅವರು ಸಿನಿ ಕನ್ನಡ.ಕಾಮ್ ಜತೆಗೆ ಹಂಚಿಕೊಂಡಿರುವ ಒಂದಷ್ಟು ವಿಶೇಷ ಮಾಹಿತಿ ಮತ್ತು ಎಕ್ಸ್‌ಕ್ಲೂಸಿವ್ ವಿಡಿಯೋ ಇಲ್ಲಿದೆ.

ರಕ್ಷಾ ಬಂಧನ ಹೇಗೆ ಆಚರಿಸಿಕೊಂಡಿರಿ?

ತುಂಬ ಚೆನ್ನಾಗಿ ಆಯಿತು. ಈ ಸಲ ಬರಲ್ಲವೇನೋ ಅಂದುಕೊಂಡಿದ್ದೆ. ಯಾಕೆಂದರೆ ನಾನು ಹಾಸನದಲ್ಲಿದ್ದೇನೆ. ಇತ್ತೀಚೆಗಷ್ಟೇ ನನ್ನ ಮಗುವನ್ನು ನೋಡೋಕೆ ಅಂತ ಬಂದಿದ್ದ. ಆಗ ಲಾಕ್ಡೌನ್ ಎಲ್ಲ ಇದ್ದರೂ ರಿಸ್ಕ್ ತೆಗೆದುಕೊಂಡು ಬಂದು ಮಗು ನೋಡ್ಕೊಂಡು ಹೋಗಿದ್ದ. ಮತ್ತೆ ಈಗ ರಕ್ಷಾ ಬಂಧನದ ಸಮಯಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ ಟು ಶೂಟಿಂಗ್ ತಯಾರಿ ಬೇರೆ ನಡೆದಿದೆ ಅಂತ ಗೊತ್ತು. ಈಗ ತಾನೇ ವರ್ಕೌಟು, ಜಿಮ್ ಎಲ್ಲ ಶುರು ಮಾಡಿಕೊಂಡಿದ್ದಾನೆ. ಅಷ್ಟೊಂದು ಡಯೆಟ್ಟಲ್ಲಿ ಇರಬೇಕಾದರೆ ಹೀಗೆಲ್ಲ ಎಲ್ಲೂ ತಿರುಗಾಡೋ ಹಾಗಿರಲಿಲ್ಲ. ಆದರೆ ಆ ಬಗ್ಗೆ ಎಲ್ಲ ಚಿಂತೇನೇ ಮಾಡದೆ ಬಂದು ಹೋದ. ಕಳೆದ ಸಲಾನೂ ಅಷ್ಟೇ ಶೂಟಿಂಗ್‌ ಗೆ ಅಂತ ಹೊರಟಿದ್ದೋನು ಮಿಡ್ನೈಟಲ್ಲಿ ಬಂದು ವಿಶ್ ಮಾಡಿದ್ದ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಏನೂ ಗಿಫ್ಟ್ ಕೊಡಲ್ಲ. ಯಾಕೆಂದರೆ ಬರುವಾಗೆಲ್ಲ ಗಿಫ್ಟ್ ತರುತ್ತಿರುತ್ತಾನೆ. ಹಾಗಾಗಿ ಅವನು ಬರೋದೇ ನನಗೆ ದೊಡ್ಡ ಗಿಫ್ಟ್‌ ತರಹ ಅನಿಸಿತು. ಖುಷಿಯಾಗಿದ್ದೀನಿ.

ನೀವು ಯಶ್ ಅವರನ್ನು ಮನೇಲಿ ಏನಂತ ಕರೀತೀರ..?

ನಾನು ಚಿಕ್ಕೋಳಿರಬೇಕಾದರೆ ಅಣ್ಣಾ' ಅಂತಾನೇ ಕರೀತಾ ಇದ್ದಿದ್ದು. ಆದರೆ ಚಿಕ್ಕ ವಯಸ್ಸಲ್ಲಿದ್ದಾಗ ನಮ್ ಡ್ಯಾಡಿ ಬೈಯ್ತಾ ಇದ್ರು. ಯಾಕೆಂದರೆ ಅವರಿಗೆ ಹೆಣ್ಣು ಮಕ್ಕಳೆಂದರೆ ಪ್ರೀತಿ ಜಾಸ್ತಿ! ಹಾಗಾಗಿ ಆ ಸದರದಿಂದ ನವೀನ್ ಅಂತ ಆಮೇಲೆ ಯಶ್ ಅಂತಾನೇ ಕರೀತಾ ಇದ್ದೆ. ಆದರೆ ಇತ್ತೀಚೆಗೆ ಕೆಲವರು ಅವರನ್ನುಭೈಯಾ- ಭೈಯಾ’ ಅಂತ ಕರೆಯೋದನ್ನು ನೋಡಿ; ನನಗೂ ಇದೇನೋ ಚೆನ್ನಾಗಿದೆ ಅನಿಸ್ತು. ಅದಕ್ಕೆ ನಾನು ಕೂಡ ಭೈಯಾ ಅಂತಾನೇ ಕರೀತೀನಿ. ಬಹುಶಃ ನಾನು ಮತ್ತು ಚಿಕ್ಕಣ್ಣ ಬಿಟ್ರೆ ಬೇರೆ ಯಾರೂ ಅವರನ್ನು ಭೈಯಾ ಅಂತ ಕರೆಯಲ್ಲ ಅನ್ಸುತ್ತೆ. ನಾನೇ ಹೆಚ್ಚಾಗಿ ಭೈಯಾ ಅನ್ನೋದು. ಅವನು ನನ್ನ ಕರೆಯೋದೇ `ಡುಮ್ಮು’ ಅಂತ. ಅದು ಈಗ ಅಂತ ಅಲ್ಲ; ಚಿಕ್ಕೋರಾಗಿರುವಾಗಿನಿಂದಲೂ ಅದೇ ರೀತೀನೇ ಕರೆಯೋದು. ಆಕ್ಚುಯಲಿ ನನಗೆ ಹಾಗೆ ಬೇರೆ ಯಾರೇ ಹಾಗೆ ಕರೆದರೂ ಕೋಪ ಬರುತ್ತೆ. ಆದ್ರೆ ಅಣ್ಣ ಕರೆದ್ರೆ ಮಾತ್ರ ಕೋಪ ಬರಲ್ಲ. ಯಾಕೆಂದರೆ ಅವನು ನನ್ನ ಕರೆಯೋದೇ ಹಾಗೆ ಅಂತ ಫಿಕ್ಸಾಗಿದ್ದೀನಿ.

ಯಶ್ ಅವರಿಗೆಂದೇ ನೀವು ಪ್ರೀತಿಯಿಂದ ಮಾಡುವ ಅಡುಗೆ ಯಾವುದು?

ಅಣ್ಣನಿಗೆ ನಾನು ಮಾಡುವ ಚಿಕನ್ ಫ್ರೈ ಅಂದರೆ ತುಂಬಾನೇ ಇಷ್ಟ. ಮನೇಲಿ ಅಮ್ಮಾನು ಮಾಡ್ತಾರೆ; ನಾನೂ ಮಾಡ್ತಿರ್ತೀನಿ. ಅಮ್ಮಾನೇ ನನಗೆ ಹೇಳ್ಕೊಟ್ಟಿದ್ದು. ಆದರೆ ಅಣ್ಣನಿಗೆ ನಾನು ಮಾಡಿದ್ರೆ ಇಷ್ಟ. ಆಮೇಲೆ ಇನ್ನೊಂದು ಏನೆಂದರೆ ಅವನಿಗೆ ನಾನು ಏನೇ ಅಡುಗೆ ಮಾಡಿದ್ರೂ ಅವನಿಗೆ ಇಷ್ಟವಾಗುತ್ತೆ. ಯಾಕೆಂದರೆ ಮದುವೆಗೆ ಮೊದಲು ನಾನು ಮಾಡ್ತಿದ್ದಿದ್ದೇ ಅಪರೂಪ. ಆದರೆ ನಾನು ಮಾಡಿದ್ರೆ, ತುತ್ತು ಬಾಯಿಗಿಡುವಾಗಲೇನೇ ಅವನಿಗೆ ಗೊತ್ತಾಗೋದು. “ಹೇಯ್; ಇದು ಡುಮ್ಮು ಮಾಡಿರೋದಾ ಇವತ್ತು? ಸುಪರ್ ಆಗಿದೆ” ಅಂತಾನೆ. ನಮ್ಮಮ್ಮ ಕೋಪ ತೋರಿಸುತ್ತಾರೆ. “ಏನು.. ಇಷ್ಟು ದಿನ ನಾನು ಮಾಡಿಕೊಟ್ಟಿರೋದಕ್ಕಿಂತ ಯಾವತ್ತೋ ಒಂದಿನ ನಿನ್ನ ತಂಗಿ ಮಾಡ್ಕೊಟ್ಟಿದ್ದೇ ಹೆಚ್ಚಾಗೋಯ್ತಾ?” ಅಂತ ಕೇಳ್ತಾರೆ. ಆದರೆ ನಾನು ಅಮ್ಮನಷ್ಟು ಚೆನ್ನಾಗಿ ಅಡುಗೆ ಮಾಡ್ತೀನ ಅನ್ನೋದು ನನಗೆ ಈಗಲೂ ಡೌಟಿದೆ. ಆದರೆ ನಮ್ಮಣ್ಣ ಇಷ್ಟ ಪಡ್ತಾನೆ ಅಂತ ಖುಷೀನೂ ಇದೆ.

ನೀವು ಮತ್ತು ಯಶ್ ಮಾತ್ರ ಪಯಣಿಸಿದ ಯಾವುದಾದರೂ ಜಾಗದ ನೆನಪಿದೆಯೇ?

ಚಿಕ್ಕ ವಯಸ್ಸಿನಿಂದ ನನ್ನ ಮನೇಲೆ ಟೂರು, ಟ್ರಿಪ್ಸ್ ಅಂತ ಕಳಿಸಿದ್ದೇ ಇಲ್ಲ. ಹಾಗಾಗಿ ಅಪ್ಪಾಮ್ಮನ ಬಿಟ್ಟು ದೂರ ಇದ್ದಿದ್ದೇ ಕಡಿಮೆ. ಅವನನ್ನು ಮಾತ್ರ ಕಳಿಸುತ್ತಿದ್ದರು. ನಾನು ಅವಾಗೆಲ್ಲ ಬೇಜಾರು ಮಾಡ್ಕೋತಿದ್ದೆ; ಅವನನ್ನು ಮಾತ್ರ ಕಳಿಸ್ತೀರ ಅಂತ. ಆದರೆ ನನಗೆ ತುಂಬ ನೆನಪಾಗೋದು ಅಂದರೆ ಮದುವೆಗೆ ಮೊದಲು ಒಂದಷ್ಟು ಟೆಂಪಲ್ಸ್‌ಗೆ ಹೋದೆವು. ಅದಕ್ಕಿಂತ ಮೊದಲು ನಾನು ದೇವಸ್ಥಾನಗಳಿಗೆ ಹೋಗಿದ್ದೇ ಕಡಿಮೆ. ನಾನು ನಮ್ಮಣ್ಣ ಮತ್ತು ಡ್ರೈವರ್ಸ್‌ ಮಾತ್ರ ಇದ್ದಿದ್ದು. ನಮ್ಮಮ್ಮ ಯಾರೂ ಇರಲಿಲ್ಲ. ಆಗ ನಾವು ಧರ್ಮಸ್ಥಳ, ಹಾಸನಾಂಬ, ಶೃಂಗೇರಿ, ಸುಬ್ರಹ್ಮಣ್ಯ ಎಲ್ಲ ಹೋಗಿ ಬಂದಿದ್ದಿವಿ. ಸಾಮಾನ್ಯವಾಗಿ ನಾನು ಟ್ರಾವೆಲ್ ಮಾಡೋದೇ ಕಡಿಮೆ. ಅದರಲ್ಲಿಯೂ ಅವನೊಂದಿಗೆ ಸುತ್ತಾಡಿದ್ದೇ ಇಲ್ಲ ಎನ್ನಬಹುದು. ಯಾಕೆಂದರೆ ಜಾಸ್ತಿ ಪ್ರಯಾಣ ಮಾಡೋದು ಅಂದರೆ ನನಗೆ ವಾಂತಿ ಶುರುವಾಗ್ತಿತ್ತು.

ನಿಮಗೆ ಯಶ್ ನಟನೆಯಲ್ಲಿ ತುಂಬಾ ಇಷ್ಟವಾಗಿದ್ದು ಯಾವ ಸಿನಿಮಾ ?

ನನಗೆ ರಾಜಾಹುಲಿ' ಚಿತ್ರದಲ್ಲಿರುವ ಅಣ್ಣನ ಬಾಡಿ ಶೋ ಇಷ್ಟ. ತುಂಬ ಕಷ್ಟಪಟ್ಟು ಡಯೆಟ್, ಜಿಮ್ ಎಲ್ಲ ಮಾಡ್ತಾನೆ. ಅದು ಬಿಟ್ಟರೆಮಿಸ್ಟರ್ ಆಂಡ್ ಮಿಸ್ಸಸ್ ರಾಮಾಚಾರಿ’, ಸಂತು ಸ್ಟ್ರೈಟ್ ಫಾರ್ವರ್ಡ್' ಮತ್ತು ಕಿರಾತಕ ಕೂಡ ಇಷ್ಟ. ಕಿರಾತಕದಲ್ಲರೋ ಕ್ಯಾರೆಕ್ಟರೇ ಇವನದ್ದು ಅಂತ ಎಲ್ರಿಗೂ ಹೇಳ್ತಿರ್ತೀನಿ. ಚಿಕ್ಕ ವಯಸ್ಸಲ್ಲಿ ಮನೇಲೆಲ್ಲ ಹಿಂಗೇ ಮೋಸ ಮಾಡೋನು ಅಂತೀನಿ. "ಅದಕ್ಕೆ ಏನೇ ಹಾಗಂತೀಯ" ಎಂದು ನಗ್ತಿರ್ತಾನೆ. ನಾನು ಹೈದರಾಬಾದಲ್ಲಿದ್ದಾಗ ತೆಲುಗು ಸಿನಿಮಾ ನೋಡ್ತಿದ್ದೆ. ನೋಡಿದ ತಕ್ಷಣ ಈ ಸಿನಿಮಾ ಅಣ್ಣ ಮಾಡಿದ್ರೆ ಚೆನ್ನಾಗಿರುತ್ತೆ ಅಂದರೆ ತಕ್ಷಣ ಫೋನ್ ಮಾಡಿ ಹೇಳ್ತೀನಿ. ತೆಲುಗಿನಲ್ಲಿ ನಿತಿನ್ ನಟನೆಯಇಷ್ಕ್’, ಪ್ರಭಾಸ್ ನಟನೆಯ ಮಿರ್ಚಿ', ಮಹೇಶ್ ಬಾಬು ನಟನೆಯಪೋಕಿರಿ’ ಚಿತ್ರಗಳು ಇಷ್ಟವಾಗಿದ್ದವು. ನಾನು ಸಜೆಸ್ಟ್ ಮಾಡಿರುವ ಹೆಚ್ಚಿನ ಚಿತ್ರಗಳೆಲ್ಲ ಅಣ್ಣ ಮಾಡಿದ್ದರೂ, ಬೇರೆ ಹೀರೋಗಳ ನಟನೆಯಲ್ಲಿ ಕನ್ನಡದಲ್ಲಿ ಬಂದು ಹಿಟ್ ಆಗಿವೆ. ಆದರೆ ಅಣ್ಣ ನನಗೆ ಅಣ್ಣನನ್ನು ಪೊಲೀಸ್ ಪಾತ್ರದಲ್ಲಿ ನೋಡಬೇಕು ಅಂತ ತುಂಬ ಇಷ್ಟ. ಹಿಂದೆ ಎಲ್ಲ ನನಗೆ ಶಂಕರನಾಗ್ ಅವರ ಪೊಲೀಸ್ ಪಾತ್ರಗಳು ಇಷ್ಟವಾಗುತ್ತಿದ್ದವು. ಈಗ ಮತ್ತೆ ಅಣ್ಣನನ್ನು ಪೊಲೀಸ್ ಆಗಿ ನೋಡುವಾಸೆ ಇದೆ. ಅದು ನನ್ನ ಅಮ್ಮಂಗೂ ಇಷ್ಟ.

ಯಶ್ ಅವರನ್ನು ಬಿಟ್ಟರೆ ನಿಮಗೆ ಯಾವ ಹೀರೋ ಇಷ್ಟ?

ನಮಗೆಲ್ಲ ಚಿಕ್ಕಂದಿನಿಂದಲೇ ಡ.ರಾಜ್ ಕುಮಾರ್ ಅವರೆಂದರೆ ಇಷ್ಟ. ನನಗಂತೂ ಹೀರೋ ಆಗಿ ಡಾ.ರಾಜ್ ಕುಮಾರ್ ಮತ್ತು ಅವರ ನಟನೆಯ ಸಿನಿಮಾಗಳು ಅಂದರೆ ತುಂಬ ಇಷ್ಟ. ನಮ್ಮನೇಲಿ ನಾವೆಲ್ಲ ಅವರಿಗೆ ದೊಡ್ಡ ಫ್ಯಾನ್. ಆಮೇಲೆ ನನಗೆ ಶಂಕರನಾಗ್ ಮತ್ತು ಅಂಬರಿಷ್ ಅವರುಗಳು ಇಷ್ಟ. ಇನ್ನು ಯಂಗ್ ಸ್ಟರ್ಸ್ ಅಂದರೆ ಎಲ್ಲರೂ ಇಷ್ಟವಾಗ್ತಾರೆ. ಒಂದೊಂದು ಸಿನಿಮಾಗಳಲ್ಲಿ ಒಬ್ಬೊಬ್ಬರು ಇಷ್ಟವಾಗುತ್ತಾರೆ. ದರ್ಶನ್, ಸುದೀಪ್ ಅವರೆಲ್ಲ ನನಗೆ ಇಷ್ಟ. ಹೊಸ ಜನರೇಶನ್ನಲ್ಲಿ ನನಗೆ ವಿರಾಟ್ ಕೂಡ ತುಂಬ ಇಷ್ಟ. `ಕಿಸ್’ ಫಿಲ್ಮ್ ನಲ್ಲಿ ಅವರು ಚೆನ್ನಾಗಿ ನಟನೆ ಮಾಡಿದ್ದಾರೆ.

Recommended For You

Leave a Reply

error: Content is protected !!
%d bloggers like this: