ಗಾಯಕ ಎಸ್.ಪಿ.ಬಿಗೆ ಕೊರೊನಾ

ಜನಪ್ರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರುಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ವಿಶ್ವದಲ್ಲೇ ಹರಡಿರುವ ಕೊರೊನಾ ಇದೀಗ ನಮ್ಮ ದೇಶದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದು, ಇತ್ತೀಚೆಗೆ ಮನೆಯಲ್ಲೇ ಇರುವ ಖ್ಯಾತನಾಮರೂ ಕೂಡ ಸೋಂಕಿಗೊಳಗಾಗಿ ಸುದ್ದಿಗೆ ಗ್ರಾಸವಾಗುತ್ತಿರುವುದು ವಿಶೇಷ.

ತಮಗೆ ಆಗಿರುವ ವೈರಸ್ ಅಟ್ಯಾಕ್ ಬಗ್ಗೆ ಸ್ವತಃ ಎಸ್.ಪಿ ಬಾಲು ಅವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ “ನನಗೆ ಮೂರು ದಿನಗಳಿಂದ ಸ್ವಲ್ಪ ಗಾಯಕನಿಗೆ ಬರಬಾರದಂಥ ಅನಾರೋಗ್ಯ ಬಂದಿದೆ. ಅಂದರೆ ಚೆಸ್ಟ್ ಕಂಜೆಶನ್, ಕೋಲ್ಡ್ ಮತ್ತು ಸಣ್ಣದಾಗಿ ಜ್ವರ ಬಂದಿದೆ. ಈ ಸಂದರ್ಭದಲ್ಲಿ ನಾನು ಅದನ್ನು ಸಣ್ಣದಾಗಿ ತಿಳಿಯದೆ, ಆಸ್ಪತ್ರೆಗೆ ಹೋಗಿ ವೈದ್ಯರ ಪರೀಕ್ಷೆಗೆ ಒಳಗಾದೆ. ಅವರು ನನಗೆ ತುಂಬ ಸಣ್ಣಮಟ್ಟಿನಲ್ಲಿ ಕೋವಿಡ್ 19 ಲಕ್ಷಣಗಳಿವೆ ಎಂದರು. ಮಾತ್ರವಲ್ಲ, ಇದನ್ನು ಮನೆಯಲ್ಲೇ ಸೆಲ್ಫ್ ಕ್ವಾರಂಟೈನಲ್ಲಿ ಇರುವ ಮೂಲಕ ಮೆಡಿಟೇಶನ್ ಮಾಡಿಕೊಂಡು ಸುಧಾರಿಸಿಕೊಳ್ಳಬಹುದು ಎಂದರು. ಆದರೆ ನಾನು ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಯಾಕೆಂದರೆ ನನ್ನ ಕುಟುಂಬದವರು ನನ್ನನ್ನು ಒಬ್ಬನೇ ಬಿಡುವುದು ಕಷ್ಟ. ಹಾಗಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಸ್ನೇಹಿತರೇ ಇಲ್ಲಿ ಇದ್ದಾರೆ. ಅವರು ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಆರೋಗ್ಯವೂ ಚೆನ್ನಾಗಿದೆ. ಆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ದಯವಿಟ್ಟು ನನಗೆ ಫೋನ್ ಮಾಡಿ ಆರೋಗ್ಯ ವಿಚಾರಿಸುವ ತೊಂದರೆ ತೆಗೆದುಕೊಳ್ಳಬೇಡಿ. ಎರಡು ದಿನಗಳಲ್ಲಿ ಎಲ್ಲವೂ ಗುಣವಾಗಿ ಮರಳುವ ಸಾಧ್ಯತೆ ಇದೆ. ಈಗಾಗಲೇ ನನಗೆ ಒಂದಷ್ಟು ಫೋನ್ ಕರೆಗಳು ಬರುತ್ತಿವೆ. ಬಹಳ ಕಾಲ್ಸ್‌ ನಾನು ರಿಸೀವ್ ಮಾಡುತ್ತಿಲ್ಲ. ನಾನು ಮೆಡಿಟಶನ್ ನಿರತನಾಗುತ್ತೇನೆ. ನಿಮ್ಮೆಲ್ಲರ ಕಾಳಜಿಗೆ ವಂದನೆಗಳು. ನಾನು ಕ್ಷೇಮವಾಗಿದ್ದೇನೆ ಮತ್ತು ಕ್ಷೇಮವಾಗಿರುತ್ತೇನೆ” ಎಂದಿದ್ದಾರೆ.

ಪ್ರಸ್ತುತ ಎಸ್ ಪಿ ಬಿಯವರು ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಸೆಂಟರಲ್ಲಿ ಚಿಕಿತ್ಸೆಯಲ್ಲಿದ್ದಾರೆ. 74 ವರ್ಷದ ಈ ಹಿರಿಯ ಗಾಯಕ ಮೂಲತಃ ಆಂಧ್ರ ಪ್ರದೇಶದವರಾದರೂ ತಮ್ಮ ಹಾಡುಗಳ ಮೂಲಕ ದಕ್ಷಿಣದ ಎಲ್ಲ ರಾಜ್ಯಗಳ ಮನಗೆದ್ದಿದ್ದಾರೆ. ಅದರಲ್ಲಿಯೂ ಕನ್ನಡಿಗರು ಬಾಲಸುಬ್ರಹ್ಮಣ್ಯಂ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದಾರೆ. ಅಂತೆಯೇ ಅವರು ಕನ್ನಡಿಗರ ಅಭಿಮಾನದ ಬಗ್ಗೆ ತಮ್ಮ ವಿಶೇಷ ಋಣ ಇದೆಯೆಂದು ಪದೇಪದೆ ಹೇಳುತ್ತಿರುತ್ತಾರೆ. ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಈ ಬಗ್ಗೆ ಟ್ವಿಟ್ ಮಾಡಿ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ.

Recommended For You

Leave a Reply

error: Content is protected !!
%d bloggers like this: