ಶಬರಿಮಲೆಗಾಗಿ ಮಾಲೆ ಧರಿಸಿದ ಶಿವಣ್ಣ

ಚಂದನವನದ ಎವರ್ ಗ್ರೀನ್ ಸುಪರ್ ಸ್ಟಾರ್ ಡಾ. ಶಿವರಾಜ್ ಕುಮಾರ್ ಶಬರಿ ಮಲೆಗೆ ಹೋಗಲು ಮಾಲೆ ಧಾರಣೆ ಮಾಡಿಕೊಂಡಿದ್ದಾರೆ. ಲಗ್ಗೆರೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಾಸ್ತ್ರ ವಿಧಿಗಳನ್ನು ಪೂರೈಸಲಾಗಿದ್ದು, ಎಂದಿನಂತೆ ಹಿರಿಯ ನಟ ಶಿವರಾಮ್ ಅವರು ಗುರುಸ್ವಾಮಿಗಳಾಗಿದ್ದಾರೆ.

ಮಾರ್ಚ್ 14ರಂದು ಶಬರಿ‌ಮಲೆಗೆ ಹೊರಡಲಿದ್ದಾರೆ. ತಂಡದಲ್ಲಿ ಮನೆ ಮಂದಿಗಳಾದ ರಾಘವೇಂದ್ರ ರಾಜ್ ಕುಮಾರ್ ಕೂಡ ಮಾಲೆ ಧರಿಸಲಿದ್ದು ಪುನೀತ್ ರಾಜ್ ಕುಮಾರ್ ಕೊನೆಗೆ ಬಂದು ಸೇರುವುದಾಗಿ ಮಾಹಿತಿ ದೊರಕಿದೆ.

ನಿರ್ಮಾಪಕ ಶ್ರೀಕಾಂತ್, ನಿರ್ದೇಶಕ ರಘುರಾಮ್, ಶಿವಣ್ಣನ ಸಹಾಯಕರಾದ ಗೋವಿಂದು ಸೇರಿದಂತೆ ಮನೆ ಕೆಲಸದ ಮಂದಿ ಸೇರಿದಂತೆ 40ಕ್ಕೂ ಅಧಿಕ ಜನ ಜತೆಗಿರುವುದಾಗಿ ತಿಳಿದು ಬಂದಿದೆ. ಮಾರ್ಚ್ 15ರಂದು ವಾಪಾಸಾಗುವ ಯೋಜನೆ ಹಾಕಲಾಗಿದೆ

Recommended For You

Leave a Reply