ಲಾಕ್ಡೌನ್ ಆದಮೇಲೆ ಸಿನಿಮಾರಂಗದಲ್ಲಿ ಎಲ್ಲರಿಗಿಂತ ಹೆಚ್ಚು ತಲೆ ಕೆಡಿಸಿಕೊಂಡಿರುವುದು ಎಂದರೆ ನಿರ್ಮಾಪಕ ವರ್ಗ. ಒಟಿಟಿ ಎನ್ನುವ ಫ್ಲಾಟ್ಫಾರ್ಮ್ ಈ ಸಂದರ್ಭದಲ್ಲಿ ಒಂದಷ್ಟು ಸಿನಿಮಾಗಳಿಗೆ ಆಸರೆಯಂತಾಗಿದ್ದು ಸುಳ್ಳಲ್ಲ. ಆದರೆ ಎಲ್ಲ ಸಿನಿಮಾಗಳು ಅಲ್ಲಿಯೂ ಸಲ್ಲಬೇಕಾಗಿಲ್ಲ. ಹಾಗೆ ಗೊಂದಲ, ಚಿಂತೆ ಹತಾಶೆಗೊಳಗಾದ ನಿರ್ಮಾಪಕರ ಪಾಲಿಗೆ ಯೂಟ್ಯೂಬ್ ಮೂಲಕ ಸಮಾಧಾನಿಸಲು ಮುಂದಾಗಿದ್ದಾರೆ ಸಾರಕ್ಕಿ ಮಂಜು. ಚಿತ್ರರಂಗದೊಂದಿಗೆ ಎರಡೂವರೆ ದಶಕದ ನಂಟು ಹೊಂದಿರುವ ಸಾರಕ್ಕಿ ಮಂಜು ಏಳು ವರ್ಷ ಹಿಂದಿನಿಂದಲೇ ಯೂಟ್ಯೂಬ್ ವಾಹಿನಿ ಮೂಲಕ ಗಮನ ಸೆಳೆದವರು. ಸಿಲ್ವರ್ ಬಟನ್ ಅವಾರ್ಡ್ ಪಡೆದವರು. ನಾಲ್ಕೈದು ಯೂಟ್ಯೂಬ್ ವಾಹಿನಿಗಳನ್ನು ನಿರ್ವಹಿಸುತ್ತಿರುವ ಅವರ ಚಿಯರ್ಸ್ ಡಿಜಿಟಲ್ ಮೀಡಿಯಾ ಮೂಲಕ ಹೊರಗೆ ಬಂದು ಪ್ರಸ್ತುತ ಉತ್ತಮ ವ್ಯೂವ್ಸ್ ಪಡೆದುಕೊಳ್ಳುತ್ತಿರುವ ಚಿತ್ರ ಶಂಖನಾದ ಅರವಿಂದ್ ಅವರ `6 ಟು 6′ ಸಿನಿಮಾ. ಒಟ್ಟು ಯೂಟ್ಯೂಬ್ ಅವಕಾಶಗಳ ಬಗ್ಗೆ ಸಾರಕ್ಕಿ ಮಂಜು ಅವರು ಸಿನಿಕನ್ನಡ.ಕಾಮ್ ಜತೆಗೆ ಮಾತನಾಡಿದ್ದಾರೆ.
ಯೂಟ್ಯೂಬ್ ವಾಹಿನಿಯಲ್ಲಿ ಸಿನಿಮಾ ಹಾಕಿದರೆ ಲಾಭವೇನು?
ಹೌದು, ಮೊದಲ ನೋಟಕ್ಕೆ ಹಾಗೆ ಅನಿಸುವುದು ಸಹಜ. ಈಗ ನೀವೇ ಹೊಸದಾಗಿ ಒಂದು ಯೂಟ್ಯೂಬ್ ಶುರು ಮಾಡಿ ಅದರಲ್ಲಿ ನಿಮ್ಮ ಸಿನಿಮಾ ಹಾಕಿದರೆ ಅದಕ್ಕೆ ಬೇಕಾದಷ್ಟು ವ್ಯೂವ್ಸ್ ಬೀಳಬೇಕು ಅಂತ ಏನಿಲ್ಲ. ಆದರೆ ನನ್ನ ಯೂಟ್ಯೂಬ್ ವಾಹಿನಿಗೆ ಈಗಾಗಲೇ ಸಾಕಷ್ಟು ಪ್ರೇಕ್ಷಕರಿದ್ದಾರೆ. ಆದುದರಿಂದ ಮಿನಿಮಮ್ ವೀಕ್ಷಣೆಯಂತೂ ಇದ್ದೇ ಇರುತ್ತದೆ. ಉದಾಹರಣೆಗೆ ನಮ್ಮಲ್ಲಿ ಈಗ ಪ್ರಥಮ ಚಿತ್ರವಾಗಿ ತೆರೆಕಂಡಿರುವ `6 ಟು 6′ ಚಿತ್ರದ ವಿಚಾರವನ್ನೇ ತೆಗೆದುಕೊಳ್ಳಿ. ಅದು ತೆರೆಕಂಡು ಐದಾರು ವರ್ಷಗಳಾಗಿವೆ. ಅದು ತಮಗೆ ಲಾಭ ಮಾಡಿದ ಚಿತ್ರವಲ್ಲ ಎನ್ನುವುದನ್ನು ನಿರ್ಮಿಸಿದ ಶಂಖನಾದ ಅರವಿಂದ್ ಅವರೇ ಹೇಳಿಕೊಂಡಿದ್ದಾರೆ. ಹಾಗಂತ ಚಿತ್ರದ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ. ಆದರೆ ಸಿನಿಮಾ ಕೊಳ್ಳುವ ಇತರ ಮಾಧ್ಯಮಗಳು ಚಿತ್ರದ ಗೆಲುವಿನ ಬಗ್ಗೆ, ತಾರಾಗಣದ ಬಗ್ಗೆ ವಿಚಾರಿಸುತ್ತವೆ. ಆದರೆ ಇಲ್ಲಿ ಹೇಳಿಕೊಳ್ಳುವಂಥ ದೊಡ್ಡ ತಾರಾಗಣವೂ ಇಲ್ಲ. ಹಾಗಿದ್ದರೂ ನಮ್ಮ ಚಿಯರ್ಸ್ ಡಿಜಿಟಲ್ ಡಿಜಿಟಲ್ ಮೀಡಿಯಾ ಯೂಟ್ಯೂಬ್ ವಾಹಿನಿಯಲ್ಲಿ ಎರಡೇ ದಿನದಲ್ಲಿ 24,000ಕ್ಕೂ ಅಧಿಕ ವ್ಯೂವ್ಸ್ ಬಿದ್ದಿದೆ. ನಿಮಗೆ ತಿಳಿದಿರುವಂತೆ ಇಲ್ಲಿ ಜನ ನಿಮ್ಮ ಚಿತ್ರವನ್ನು ನೋಡಿದಷ್ಟೂ ನಿಮಗೆ ನಿರಂತರ ಆದಾಯ! ಒಂದು ರೀತಿಯಲ್ಲಿ ಲೈಫ್ ಟೈಮ್ ಇನ್ಕಮ್. ಗೂಗಲ್ ಆಡ್ ಸೆನ್ಸ್ ಗಳಿಕೆಯ ಹಣದಲ್ಲಿ ನಮ್ಮ ನಿಮ್ಮ ಪಾಲುದಾರಿಕೆ ಇರುತ್ತದೆ. ಖಂಡಿತವಾಗಿ ಇದು ನಿರ್ಮಾಪಕರ ಸ್ನೇಹಿಯೆನಿಸುವ ಪಾರದರ್ಶಕ ವ್ಯವಹಾರ ಎಂದು ಭರವಸೆ ನೀಡಬಲ್ಲೆ.
ಬೇರೆ ಯಾವೆಲ್ಲ ಸಿನಿಮಾಗಳು ನಿಮ್ಮಲ್ಲಿವೆ?
ಸದ್ಯಕ್ಕೆ ಆರಂಭಿಸಿದ್ದೇನಷ್ಟೇ. ನಿಮ್ಮಂಥ ಮಾಧ್ಯಮ ಮಿತ್ರರು ಇದನ್ನು ಹರಡುವುದರಿಂದ ಚಿತ್ರೋದ್ಯಮದದಲ್ಲಿ ಸಿನಿಮಾ ಮಾಡಿ ನಷ್ಟ ಅನುಭವಿಸಿದವರಿಗೆ ಉಪಕಾರ ಆಗಬಲ್ಲದು. ಹಾಗಾಗಿ ಸದ್ಯಕ್ಕೆ ನಮ್ಮಲ್ಲಿ ‘6 ಟು 6' ಚಿತ್ರ ಮಾತ್ರ ಇದೆ. ಅದರ ಹೊರತಾಗಿ
ನಾರಾಯಣ ಸಾ ಮಿ’ ಎನ್ನುವ ಕಿರುಚಿತ್ರವೂ ಇದೆ. ಪ್ರಣಯರಾಜ ಶ್ರಿನಾಥ್ ಅವರ ಅಭಿನಯದ ಈ ಕಿರುಚಿತ್ರ 40 ನಿಮಿಷಗಳ ಕಾಲಾವಧಿ ಹೊಂದಿದೆ. ಇನ್ನೊಂದಷ್ಟು ಚಿತ್ರ ನಿರ್ಮಾಪಕರ ಜತೆಗೆ ಮಾತುಕತೆ ನಡೆಯುತ್ತಿದೆ. ಇನ್ನೊಂದಷ್ಟು ಮಂದಿ ಹೊಸಬರಿಗೆ ನಾನೇನೋ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಆತಂಕ ಇದೆ. ಅಂಥವರಿಗೆ ನನ್ನೊಂದಿಗೆ ಮಾತನಾಡಿ ಎಲ್ಲವನ್ನು ಪರಿಹರಿಸಿಕೊಳ್ಳುವಂತೆ ಆಹ್ವಾನಿಸುತ್ತೇನೆ. ಸಾಧ್ಯವಾದರೆ ನನ್ನ ಸಂಪರ್ಕಕ್ಕಾಗಿ ನಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರನ್ನು ಪ್ರಕಟಿಸಿ .ನನ್ನ ಮೊಬೈಲ್ ಸಂಖ್ಯೆ- 8660538080. ಮತ್ತು ಇಮೇಲ್ ಐಡಿ cheersdigitalmedia@gmail.com
ನಮ್ಮ ಓದುಗರಿಗೆ ನಿಮ್ಮ ಬಗ್ಗೆ ಒಂದಷ್ಟು ಪರಿಚಯ ನೀಡುತ್ತೀರಾ?
ನಾನು 1994ರಲ್ಲಿ ಜಗ್ಗೇಶ್ ಅವರ ಅಭಿನಯದ ಸೋಮ' ಸಿನಿಮಾ ಮೂಲಕ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಅದೇ ವರ್ಷ
ಕಥಾವ್ಯಕ್ತಿ’ ಎನ್ನುವ ಧಾರಾವಾಹಿಗೆ ಶೀರ್ಷಿಕೆ ಗೀತೆ ಮತ್ತು ಒಂದು ಡ್ಯೂಯೆಟ್ ಬರೆದೆ. 1996ರಲ್ಲಿ ಬೆಳಕಿನೆಡೆಗೆ' ಎನ್ನುವ ಎರಡು ಕಂತುಗಳ ಧಾರವಾಹಿಗೆ ಸಂಭಾಷಣೆ ಬರೆಯುವ ಮೂಲಕ ಸಂಭಾಷಣಕಾರನಾದೆ. ಅದೃಷ್ಟ ಕಾಣಬೇಕಾದರೆ 2000ನೇ ವರ್ಷ ಬರಬೇಕಾಯಿತು! ಯಾಕೆಂದರೆ ಆ ಬಳಿಕ ಒಂದೊಂದೇ ಮೆಗಾಸೀರಿಯಲ್ ಗೆ ಬರೆಯುವ ಅವಕಾಶ ದೊರಕಿತು.
ಸುಪ್ರಭಾತ’ ಎನ್ನುವ ವಾಹಿನಿಯ ಮೂಲಕ ಯಶಸ್ಸಿನ ಪಯಣ ಶುರುವಾಯಿತು. ‘ಸಂಕೋಲೆ',
ಜಾಲ’, ‘ಮನೆಮನೆ ಕಥೆ',
‘ಅಂಕುರ’ ಹೀಗೆ ವರ್ಷ ಪೂರ್ತಿ ಬ್ಯುಸಿ ಇದ್ದೆ. 2001ರಲ್ಲಿ ಬರೆದ ಕಾವ್ಯಾಂಜಲಿ' ಧಾರಾವಾಹಿಯನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಿದ್ದಾರೆ ಎನ್ನುವುದೇ ಹೆಮ್ಮೆ. ಮರು ವರ್ಷಗಳಲ್ಲಿ ಬಂದ
‘ತುಳಸಿ’ ಕೂಡ ಅಷ್ಟೇ ದೊಡ್ಡ ಹಿಟ್ಆಯಿತು. ‘ಶರದೃತು', '
ಸುಕನ್ಯಾ’,ಮುತ್ತಿನ ತೆನೆ',
ಅಗ್ನಿಶಿಖೆ’, ಮಳೆ',
ಕ್ಲಾಸ್‌ಮೇಟ್ಸ್’, ಜೋಕಾಲಿ',
ಮನೆ ದೇವ್ರು’, 'ಚಕ್ರವಾಕ',
ದೀಪವೂ ನಿನ್ನದೇ ಗಾಳಿಯೂ ನಿನ್ನದೇ’, ‘ಕರ್ಪೂರದ ಗೊಂಬೆ'
, ‘ಅಮ್ಮ ನಿನಗಾಗಿ’, ಮಂಗಳ ಗೌರಿ' ಹೀಗೆ ಸಾಕಷ್ಟು ಧಾರಾವಾಹಿಗಳಿಗೆ ಬರೆದೆ. ಇದೀಗ ಯೂಟ್ಯೂಬ್ ಎನ್ನುವ ಡಿಜಿಟಲ್ ಪ್ರಪಂಚಕ್ಕೆ ಬಂದು ಏಳು ವರ್ಷವಾಗಿದೆ. ಈಗಾಗಲೇ '
ಸಿಲ್ವರ್ ಬಟನ್ ಅವಾರ್ಡ್’ ಗಳಿಸಿದೆ. ಇನ್ನಷ್ಟು ಪ್ರಥಮಗಳನ್ನು ದಾಖಲಿಸುವಂಥ ಪ್ರಾಮಾಣಿಕ ಉತ್ಸಾಹವಿದೆ.