ಮಿಲನ ಪ್ರಕಾಶ್ ತಂದೆ ನಿಧನ

ಕನ್ನಡದ ಜನಪ್ರಿಯ ನಿರ್ದೇಶಕ, ಕಿರುತೆರೆ ಧಾರಾವಾಹಿಗಳ ‌ನಿರ್ಮಾಪಕ ಮಿಲನ ಪ್ರಕಾಶ್ ಅವರ ತಂದೆ ಹಿರಿಯ ನಿರ್ಮಾಪಕ ಸಿ.ಜಯರಾಮ್ ನಿಧನರಾಗಿದ್ದಾರೆ.

ನಿರ್ಮಾಣರಂಗದಲ್ಲಿ ದಶಕಗಳಿಂದ ಹೆಸರು ಮಾಡಿರುವ ಇವರು ಚಂದನವನದಲ್ಲಿ ಸಿ.ಜಯರಾಮ್ ಎಂದೇ ಗುರುತಾಗಿದ್ದರು. ಕಳೆದರಾತ್ರಿ 2 ಗಂಟೆಗೆ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಜಯರಾಮ್ ಅವರ ನಿರ್ಮಿಸಿರುವ ಚಿತ್ರಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸ್ಥಾನ ಪಡೆದಿರುವಂಥವು.
‘ಪಾವನ‌ ಗಂಗ’, ‘ಗಲಾಟೆ ಸಂಸಾರ’, ‘ಆಟೋರಾಜ’, ‘ನಾ ನಿನ್ನ ಬಿಡಲಾರೆ’ ಹೀಗೆ ಸೂಪರ್ ಹಿಟ್ ಚಿತ್ರಗಳ ನಿರ್ಮಾಣದ ಮೂಲಕ ಸ್ಟಾರ್ ನಿರ್ಮಾಪಕರಾಗಿದ್ದರು.

ಮೃತರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 12 ಗಂಟೆಗೆ ಸುಮನಹಳ್ಳಿಯ ಸ್ಮಶಾನದಲ್ಲಿ ನೆರವೇರಿಸಲಿರುವುದಾಗಿ ತಿಳಿದುಬಂದಿದೆ.

Recommended For You

Leave a Reply

error: Content is protected !!