
ಕನ್ನಡ ಚಿತ್ರರಂಗದಲ್ಲಿ ಸ್ಟಿಲ್ ಸೀನು ಎಂದರೆ ಎಲ್ಲರಿಗೂ ಪರಿಚಯ. ಕಳೆದ ಮೂರು ದಶಕಗಳಿಂದ ಸುಮಾರು 150ಕ್ಕೂ ಅಧಿಕ ಸಿನಿಮಾಗಳ ಸ್ಟಿಲ್ ಫೊಟೊಗ್ರಾಫರ್ ಆಗಿ ಗುರುತಿಸಿಕೊಂಡವರು ಸೀನು ಅಲಿಯಾಸ್ ಶ್ರೀನಿವಾಸ್. ಮಂಗಳವಾರ ಮಧ್ಯಾಹ್ನ ಮೈಸೂರು ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಿಂದ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು. ಪ್ರಸ್ತುತ ಕಳೆದ ನಾಲ್ಕುದಿನಗಳಿಂದ ತುಮಕೂರು ರಸ್ತೆಯ ಸ್ಪರ್ಶ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾರೆ. ತನ್ನ ಪುಟ್ಟ ಕುಟುಂಬದ ಆದಾಯಕ್ಕೆ ಏಕೈಕ ಆಧಾರವಾಗಿದ್ದ ಸೀನು ಆಸ್ಪತ್ರೆ ಸೇರುವುದರೊಂದಿಗೆ ಕುಟುಂಬದ ಪರಿಸ್ಥಿತಿ ಅತಂತ್ರವಾಗಿದೆ.

ಸೀನು ಮತ್ತು ಕುಟುಂಬ ವಾಸವಾಗಿರುವುದು ಮಹಾಲಕ್ಷ್ಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ. ಅವರ ಪತ್ನಿ ಗೃಹಿಣಿ. ಇಬ್ಬರು ಮಕ್ಕಳಲ್ಲಿ ಮಗಳು ಸಾಯಿ ಹಿಮಬಿಂದು ಬಿಕಾಮ್ ವಿದ್ಯಾರ್ಥಿನಿ. ಮಗ ಸಾಯಿ ವಿಮಲ್ ದ್ವಿತೀಯ ಪಿಯು ವಿದ್ಯಾರ್ಥಿ. ಸಿನಿಕನ್ನಡ.ಕಾಮ್ ಜತೆಗೆ ಮಾತನಾಡಿದ ಸಾಯಿ ವಿಮಲ್ ವಿವರಿಸಿದ್ದು ಹೀಗೆ, ” ಘಟನೆ ನಡೆದಿದ್ದು ಮಂಗಳವಾರದಂದು. ನಮ್ಮಪ್ಪ ರಾಮನಗರದಿಂದ ಬರುತ್ತಿದ್ದರು. ಮಧ್ಯಾಹ್ನ 12 ಗಂಟೆಗೆ ಹೊರಟಿದ್ದಾರೆ. ಮೈಸೂರು ರೋಡ್ ಸಮೀಪ ಮಣ್ಣು ರಸ್ತೆಯಲ್ಲಿ ಗಾಡಿ ಸ್ಕಿಡ್ ಆಗಿ ಬಿದ್ದಿದೆ. ತಲೆಗೆ ಸ್ವಲ್ಪ ಏಟಾಗಿದೆ. ಆದರೂ ಹೊರಗೆ ಅಂಥ ಗಾಯ ಏನೂ ಕಾಣಿಸಿರದ ಕಾರಣ ಬಿದ್ದ ಜಾಗದಿಂದ ಒಂದು ಕಿ.ಮೀ ಹೋಗಿದ್ದಾರೆ. ಆದರೆ ಅಷ್ಟು ಹೊತ್ತಿಗೆ ತುಂಬ ಸುಸ್ತಾದಂತೆ ಅನಿಸಿರುವುದರಿಂದ ಪಕ್ಕದಲ್ಲಿರುವ ಸಂಬಂಧಿಕರ ಮನೆಗೆ ಫೋನ್ ಮಾಡಿದ್ದಾರೆ. ಅವರು ತಮ್ಮದೇ ರಿಕ್ಷಾದಲ್ಲಿ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಮಗೆ ವಿಷಯ ತಿಳಿದು ಫೋನ್ ಮಾಡಿದಾಗ “ಚೆನ್ನಾಗಿದ್ದೀನಿ. ಆದರೆ ಗಾಡಿ ಓಡಿಸಲು ಸಾಧ್ಯವಿಲ್ಲ” ಎಂದರು. ಆದರೆ ವಾಂತಿ ಆಗ್ತಿದೆ. ಮೋಸ್ಟ್ಲಿ ಗ್ಯಾಸ್ಟಿಕ್ ಇರಬೇಕು ಅಂತ ಸ್ಥಳೀಯ ಕ್ಲಿನಿಕ್ ನಲ್ಲಿ ವಾಂತಿಗೆ ಇಂಜೆಕ್ಷನ್ ತೆಗೆದುಕೊಂಡಿದ್ದೀನಿ” ಅಂತ ಹೇಳಿ ಮತ್ತೆ ಅದೇ ಮನೆಗೆ ಮರಳಿದ್ದಾರೆ.

ಆದರೆ ರಾತ್ರಿ ಹತ್ತು ಗಂಟೆಗೆ ಮತ್ತೆ ಫೋನ್ ಮಾಡಿದಾಗಲೂ, “ಊಟ ಮಾಡಿಲ್ಲ ಔಷಧಿ ತೆಗೆದುಕೊಂಡಿದ್ದೇನೆ” ಅಂದಿದ್ದು ಕೇಳಿ ಏನು ಹೀಗಂತಿದ್ದಾರೆ ಊಟ ಇಲ್ಲದೆ ಐಷಧಿ ತೆಗದುಕೊಂಡಿದ್ದಾರಲ್ಲ ಎಂದು ರಾತ್ರಿಯೇ ನಾವು ಓಲ ಮಾಡಿಕೊಂಡು ಅಲ್ಲಿಗೆ ಹೋಗಿದ್ದೇವೆ. ಆಸ್ಪತ್ರೆಗೆ ಹೋಗೋಣ ಎಂದರೆ ಬೇಡ ಜಸ್ಟ್ ಗ್ಯಾಸ್ಟಿಕ್ ಆಗಿರುವ ಹಾಗಿದೆ ಎಂದರು. ಹಣೆಯಲ್ಲಿ ಗಾಯ ಆಗಿದೆಯಲ್ಲ ಅಂದರೆ “ಅದು ಐಸ್ ಕ್ಯೂಬ್ ಇಟ್ಟರೆ ಸರಿಯಾಗುತ್ತೆ ಅಂಥ ನೋವೇನೂ ಇಲ್ಲ” ಎಂದರು ನಮ್ಮಪ್ಪ. ಆಮೇಲೆ ಗೊತ್ತಾಯ್ತು ಅದು ಇಂಟರ್ನಲ್ ಬ್ಲೀಡಿಂಗ್ ಆಗಿದೆ ಎಂದು! ಮರುದಿನ ಅಂದರೆ ಬುಧವಾರ ಬೆಳಿಗ್ಗೆ ಕೂಡ ಚೆನ್ನಾಗಿಯೇ ಇದ್ದರು. ಅಲ್ಲಿಂದ ಮಹಾಲಕ್ಷ್ಮಿ ಲೇಔಟ್ ಗೆ ಬಂದೆವು. ಓಲದಲ್ಲಿ ಬರುವಾಗ ಅವರೇ ಡ್ರೈವರ್‌ಗೆ ದಾರಿ ಹೇಳುತ್ತಿದ್ದರು. ತಮ್ಮ ಬಟ್ಟೆ ಹಾಕೋದು, ಶೂ ಬಿಚ್ಚೋದು ಎಲ್ಲ ಅವರೇ ಮಾಡಿಕೊಂಡಿದ್ದಾರೆ. ಆದರೆ ಬೆಳಿಗ್ಗೆ ಮತ್ತೆ ತಿಂಡಿ, ಜ್ಯೂಸ್ ಎಲ್ಲ ವಾಂತಿ ಮಾಡಿಕೊಂಡರು. ಮತ್ತೆ ನಾವು ತಡ ಮಾಡದೆ ತಕ್ಷಣ ಮಂಗಳ ಆಸ್ಪತ್ರೆಗೆ ಕರೆದುಕೊಂಡು ಹೋದೆವು.

“ನಿತ್ರಾಣ ಆಗ್ತಿದೆ ಗ್ಲೂಕೋಸ್ ಆದರೂ ಕೊಡಿ” ಎಂದು ನಮ್ಮಪ್ಪ ಕೇಳ್ಕೊಂಡರು. ಆದರೆ ಅವರು ಸ್ಕ್ಯಾನಿಂಗ್ ಮಾಡಿ ರಿಪೋರ್ಟ್ ತರಿಸಲು ಹೇಳಿದರು. ರಿಪೋರ್ಟ್ ನೋಡಿದ ಮೇಲೆ ನಿನ್ನೆಯೇ ಬಂದಿದ್ದರೆ ಮಾತ್ರೆ ಕೊಟ್ಟೇ ಗುಣ ಪಡಿಸಬಹುದಿತ್ತು. ಆದರೆ ಈಗ ದೊಡ್ಡ ಆಸ್ಪತ್ರೆಗೆ ಹೋಗಬೇಕಾಗಿದೆ ಎಂದರು. ಹಾಗೆ ತುಮಕೂರು ರಸ್ತೆಯ `ಸ್ಪರ್ಶ’ ಖಾಸಗಿ ಆಸ್ಪತ್ರೆಗೆ ಹೋದೆವು. ಚಿಕಿತ್ಸೆಗೆ ಎರಡೂವರೆ ಲಕ್ಷ ಪ್ಯಾಕೇಜ್ ಆಗುವುದಾಗಿ ಅವರು ಹೇಳಿದ್ದಾರೆ. ಆಗ ನಾವು ಸರ್ಕಾರಿ ಆಸ್ಪತ್ರೆಗೆ ಹೋಗುವ ಬಗ್ಗೆ ಯೋಚಿಸಿದೆವು. ಆದರೆ ಸ್ಪರ್ಶದವರು, “ಈಗಾಗಲೇ ತಡವಾಗಿದೆ ಇನ್ನಷ್ಟು ತಡ ಮಾಡಿದರೆ ರಿಸ್ಕ್ ಹೆಚ್ಚು” ಎಂದರು. ನಾವು ಮತ್ತೆ ಹೆಚ್ಚು ಯೋಚಿಸದೆ ಒಪ್ಪಿಕೊಂಡೆವು. ಅವರು ಕೂಡ ಕೋವಿಡ್ ಟೆಸ್ಟ್ ಕೂಡ ಮಾಡದೆ ರಿಸ್ಕ್ ತೆಗೆದುಕೊಂಡು ಆಪರೇಶನ್ ಮಾಡಿ ಮುಗಿಸಿದ್ದಾರೆ. ಆಪರೇಶನ್ ಏನೋ ಸಕ್ಸಸ್ ಆಯಿತು. ಮರುದಿನ ಸ್ಕ್ಯಾನಿಂಗ್ ಕೂಡ ಮಾಡಿದ್ದಾರೆ. ಇದೀಗ ಲೆಫ್ಟ್ ಬ್ರೈನ್‌ಗೆ ಏಟಾಗಿದೆ ಎಂದರು. ಇವತ್ತು ಸೆಮಿಕೊಮಾದಲ್ಲಿದ್ದಾರೆ. ನಾಳೆ ಎಚ್ಚರವಾಗುತ್ತೋ ನಾಡಿದ್ದಾಗುತ್ತೋ ಅಥವಾ ಆರು ತಿಂಗಳೇ ಆಗುತ್ತೋ ಅಂತ ಹೇಳುವುದು ಕಷ್ಟ ಅಂತಿದ್ದಾರೆ ಡಾಕ್ಟರ್! ಈಗಾಗಲೇ ಖರ್ಚು ಮೂರು ಲಕ್ಷ ದಾಟಿದೆ.

ಹಣಕ್ಕೆ ಕಷ್ಟವಾಗಿರುವುದರಿಂದ ಈಗ ಸರ್ಕಾರಿ ಆಸ್ಪತ್ರೆಗೆ ಹೋಗಲು ನಾವು ತಯಾರಿದ್ದೇವೆ. ಆದರೆ “ಮೊದಲೇ ಸರ್ಕಾರಿ ಆಸ್ಪತ್ರೆಯಲ್ಲೇ ಆಪರೇಷನ್ ಮಾಡಿದ್ದರೆ ಮಾತ್ರ ನಾವು ದಾಖಲು ಮಾಡಿರುತ್ತಿದ್ದೆವು. ಆದರೆ ಯಾವುದೋ ಖಾಸಗಿ ಆಸ್ಪ್ರತ್ರೆಯಲ್ಲಿ ಆಪರೇಶನ್ ಆಗಿರುವಕಾರಣ ನಾವು ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳುತ್ತಿದ್ದಾರೆ. ಅಪ್ಪನಿಗೆ ಸದ್ಯಕ್ಕೆ ವೆಂಟಿಲೇಟರಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಇರುವುದರಿಂದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಚಿಕಿತ್ಸೆ ಕೂಡ ಕಷ್ಟ ಆಗಿದೆ. ಒಟ್ಟಿನಲ್ಲಿ ಐಸಿಯು, ಔಷಧಿ ಎಂದು ದಿನದಿಂದ ದಿನಕ್ಕೆ ಚಾರ್ಜ್ ಆಗುತ್ತಲೇ ಇದೆ. ಹಾಗಾಗಿ ಕುಟುಂಬ ಸಂಕಷ್ಟಕ್ಕೆ ಬಿದ್ದಿದೆ.

ಈಗಾಗಲೇ ಸ್ಟಿಲ್ ಸೀನು ಕುಟುಂಬಕ್ಕೆ ಚಿತ್ರರಂಗದ ಕಡೆಯಿಂದ ಸಣ್ಣಪುಟ್ಟ ಸಹಾಯ ದೊರಕಲು ಶುರುವಾಗಿದೆ. ಆದರೆ ಅದು ದೊಡ್ಡ ಮಟ್ಟದಲ್ಲಿ ಆಗಬೇಕಿದೆ. ಯಾಕೆಂದರೆ ಸೀನು ಅಪಘಾತಕ್ಕೂ ಮುನ್ನವೇ ಸಾಲದಲ್ಲಿದ್ದರು. ಕಳೆದ ವರ್ಷ ನಿರ್ಮಿಸಿದ ಗಹನ' ಎನ್ನುವ ಚಿತ್ರ ಫ್ಲಾಪ್ ಆಗಿತ್ತು. ಹಾಗಾಗಿ ಟಿವಿ ರೈಟ್ಸ್ ಮಾರಾಟವಾಗಿಲ್ಲ. ಹಾಗಾಗಿ ಮನೆ ಬಾಡಿಗೆ, ಮಗನ ಕಾಲೇಜ್ ಫೀಸು ಹೀಗೆ ಹಣ ಹೊಂದಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಸುದೀಪ್ ಅವರ ಪ್ರಥಮ ಚಿತ್ರ
ಸ್ಪರ್ಶ’ ಸೇರಿದಂತೆ, ವಿಷ್ಣುವರ್ಧನ್ ಅವರ ವಿಷ್ಣು ಸೇನ', ಶಿವರಾಜ್ ಕುಮಾರ್ ಅವರ
ಭಾಗ್ಯದ ಬಳೆಗಾರ’, ಅಣ್ಣತಂಗಿ', ಗಣೇಶ್ ಅವರ
ಪಟಾಕಿ’, ದರ್ಶನ್ ಅವರ ಸಂಗೊಳ್ಳಿ ರಾಯಣ್ಣ',
ಕುರುಕ್ಷೇತ್ರ’ ಹೀಗೆ 150ಕ್ಕೂ ಅಧಿಕ ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿರುವ ಸೀನು ಅವರ ಸಿನಿಮಾ ಪ್ರೀತಿಗೆ ಅವು ನಿರ್ಮಿಸಿದ `ಗಹನ’ ಚಿತ್ರವೇ ಉದಾಹರಣೆ. ಚಿತ್ರಕ್ಕೆ ಅವರೇ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದು ವಿಶೇಷ. ಅವರ ಈ ಎಲ್ಲ ಸೇವೆಯನ್ನು, ಚಿತ್ರರಂಗದ ಮಂದಿ ನೆನಪಿಸಿಕೊಂಡು ಈ ಸಂದರ್ಭದಲ್ಲಿ ಸಹಾಯಕ್ಕೆ ಮುಂದಾಗುತ್ತಾರೆ ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇದೆ. ದಯವಿಟ್ಟು ಇಲ್ಲಿ ನೀಡಲಾಗಿರುವ ಸೀನು ಅವರ ಅಕೌಂಟ್‌ಗೆ ಅಥವಾ ಅವರ ಪುತ್ರನ ಗೂಗಲ್ ಪೇ ಸಂಖ್ಯೆಗೆ ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಸಹಾಯ ನೀಡುವಂತೆ ಮನವಿ.
NAME – SRINIVASA R
Acc No.- 50190013839059
IFSC code – BDBL0001750
Bank Name – BANDHAN BANK (malleswarm)
Google pay /phonepe – 9483452559




2 Comments