ಪ್ರಶಂಸೆ ಪಡೆಯುತ್ತಿದೆ `ಲಾಸ್ಟ್ ಸೀನ್’ ಆಲ್ಬಮ್ ಸಾಂಗ್

ಆಲ್ಬಂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಎನ್ ವಿನಾಯಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಆಫ್ಟರ್ 8 ಪಿಮ್ ಎನ್ನುವ ಹಾಡಿನ ಮೂಲಕ ಕಿಕ್ ಏರಿಸಿದ ಇವರು ಈ ಬಾರಿ ನಾಗರಿಕ ಸಮಾಜದ ಕ್ರೌರ್ಯವೊಂದನ್ನು ತೋರಿಸುವ ಮೂಲಕ ಕಿಕ್ ಇಳಿಸಿದ್ದಾರೆ! ಅದೇ ವೇಳೆ ಹಾಡಿನ ಮೇಕಿಂಗ್, ಸಬ್ಜೆಕ್ಟ್ ಎಲ್ಲವನ್ನೂ ಮೆಚ್ಚಿಕೊಂಡ ವೀಕ್ಷಕರು ಒಂದೇ ದಿನದಲ್ಲಿ ಲೈಕ್ ಸಂಖ್ಯೆ `100k’ಗೆ ಏರಿಸಿದ್ದಾರೆ!

ವಾಗೀಶ್ ಆಯುಶ್ ಮತ್ತು ಸಂಗೀತ ಎನ್ನುವ ನವ ಯುವ ಜೋಡಿಯನ್ನು ಇರಿಸಿಕೊಂಡು ಹಾಡಿನ ಉದ್ದಕ್ಕೂ ಮೋಡಿ ಮಾಡಿದ್ದಾರೆ ವಿನಾಯಕ. ಲಾಸ್ಟ್‌ ಸೀನ್ ಎನ್ನುವ ಈ ಹಾಡು ಕೊನೆಯ ದೃಶ್ಯದ ಫ್ಲ್ಯಾಶ್‌ ಬ್ಯಾಕ್ ಮೂಲಕವೇ ಕುತೂಹಲಕರವಾಗಿ ಶುರುವಾಗುತ್ತದೆ. ಸ್ವಚ್ಚ ಪ್ರೇಮದ ಜತೆಗೆ ಸಾಗುವ ದೃಶ್ಯಗಳಲ್ಲಿ ಕಾಮಾಂಧಕಾರವೊಂದು ದುತ್ತನೆ ಪ್ರತ್ಯಕ್ಷವಾಗುತ್ತದೆ. ವಾಟ್ಸ್ಯಾಪ್‌ನ ಲಾಸ್ಟ್‌ ಸೀನ್ ದೃಶ್ಯದೊಂದಿಗೆ ಕೊನೆಯಾಗುವಾಗ ನಾಗರಿಕ ಸಮಾಜದ ಹಲವಾರು ನೈಜ ಘಟನೆಗಳು ಕಣ್ಣೆದುರಿಗೆ ಬರುತ್ತವೆ.

ನಿರ್ದೇಶಕ ಪ್ರೇಮ್ ಪ್ರಶಂಸೆ

ಮೊದಲ ಆಲಿಸುವಿಕೆಯಲ್ಲೇ ಎದೆಯಾಳಕ್ಕಿಳಿಯುವ ಸಂಗೀತ ನೀಡಿದ್ದಾರೆ ಜುಬೈರ್ ಮಹಮ್ಮದ್. ಅದಕ್ಕೆ ತಕ್ಕಂತೆ ಪ್ರಮೋದ್ ಆಚಾರ್ಯ ರಚಿಸಿರುವ ಹಾಡಿನ ಸಾಲುಗಳು ವಾಸುಕಿ ವೈಭವ್ ಕಂಠದ ಮೂಲಕ ಕಾಡಲು ಶುರು ಮಾಡುತ್ತವೆ. ಮನು ಬಿಕೆ ಛಾಯಾಗ್ರಹಣ, ಕೃಷ್ಣ ಸುಜಾನ್ ಸಂಕಲನ, ಪ್ರಶಾಂತ್ ಗೌಡರ ಕಲೆ ಹಾಡಿಗೊಂದು ಕಳೆ ತಂದುಕೊಟ್ಟಿದೆ. ಸಪ್ಟೆಂಬರ್ 27ರಂದು ಆನಂದ್ ಆಡಿಯೋದ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾದ ಲಾಸ್ಟ್ ಸೀನ್' ಒಂದೇ ದಿನದಲ್ಲಿ ಹಂಡ್ರೆಡ್ ಕೆ ವ್ಯೂವ್ಸ್ ಪಡೆಯುವ ಮೂಲಕ ಜನಮೆಚ್ಚುಗೆ ಗಳಿಸಿರುವುದನ್ನು ಸೂಚಿಸಿದೆ. ಮೊದಲ ಹಾಡಿನ ಮೂಲಕವೇ ಮೇಕಿಂಗ್‌ ವಿಚಾರದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಎನ್ ವಿನಾಯಕ ಈ ಬಾರಿ ಪ್ರೇಮ್‌ನಂಥ ನಿರ್ದೇಶಕರಿಂದಲೇಹಿಂದಿ ಆಲ್ಬಮ್ ಹಾಡುಗಳ ಲೆವೆಲ್‌ನಲ್ಲಿದೆ’ ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ವಿನಾಯಕ್ ಯಾವಾಗ ಕನ್ನಡ ಸಿನಿಮಾ ನಿರ್ದೇಶಿಸುತ್ತಾರೆ ಎಂದು ಕೇಳುವ ಮಟ್ಟಕ್ಕೆ ಮೇಕಿಂಗ್ ಇದೆ ಎನ್ನುವುದು ನಿಜ.

Recommended For You

Leave a Reply

error: Content is protected !!