ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಎಂಟ್ರಿಗೆ ಲಂಕೇಶ್ ಕಾರಣ!

ಡಾ.ರಾಜ್ ಕುಮಾರ್ ಅವರ ಸಾಮಾಜಿಕ ಹೋರಾಟಗಳ ಬಗ್ಗೆ ನೆನಪಿಸುವಾಗ ಮೊದಲು ನೆನಪಾಗುವುದೇ ಗೋಕಾಕ್ ಚಳವಳಿ. ಆದರೆ ಅಂಥ ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್ ಅವರು ಭಾಗಿಯಾಗಲು ಕಾರಣವಾಗಿದ್ದೇ ಇಂದ್ರಜಿತ್ ಲಂಕೇಶ್ ಎನ್ನುವ ಮಾಹಿತಿಯನ್ನು ಇಂದ್ರಜಿತ್ ಲಂಕೇಶ್ ಅವರು ತಿಳಿಸಿದರು. ಅವರು ಈ ವಿಶೇಷ ಮಾಹಿತಿಯನ್ನು `ಲಂಕೇಶ್ ಆಪ್’ ಬಿಡುಗಡೆ ಸಮಾರಂಭದಲ್ಲಿ ತಿಳಿಸಿದರು.

ಗೋಕಾಕ್ ಚಳವಳಿಯಲ್ಲಿ ಭಾಗಿಯಾಗಲು ಸಿನಿಮಾ ಕಲಾವಿದರನ್ನು ಕರೆದುಕೊಂಡು ಬನ್ನಿ ಎಂದು ಲಂಕೇಶ್ ಅವರು ನಟ ಲೋಕೇಶ್ ಅವರಲ್ಲಿ ತಿಳಿಸಿದ್ದಾರೆ. ಆಗ ಅವರು ರಾಜ್ ಕುಮಾರ್ ಅವರು ಬಂದರೆ ದೊಡ್ಡ ಶಕ್ತಿ ಬಂದಂತೆ ಎಂದು ಹೇಳಿದ್ದಾರೆ. ಆಗ ಲಂಕೇಶ್ ಅವರು ಡಾ.ರಾಜ್ ಕುಮಾರ ಭಾಗಿಯಾಗುತ್ತಾರೆ ಎಂದು ತಮ್ಮ ಪತ್ರಿಕೆಯಲ್ಲಿ ಮಾಡಿದ ಸುದ್ದಿ ಮುಂದಿನ ಬೆಳವಣಿಗೆಗಳಿಗೆ ಕಾರಣವಾಯಿತು ಎಂದು ಇಂದ್ರಜಿತ್ ವಿವರಿಸಿದರು. ಘಟನೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿರುವ ವಿಡಿಯೋ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ.

ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ
ನಟ ಡಾ.ಶಿವರಾಜ್ ಕುಮಾರ್ “ಈ ಕಾರ್ಯಕ್ರಮಕ್ಕೆ ಬಂದಿದ್ದು ನಿಜಕ್ಕೂ ಸಾರ್ಥಕ ಅನಿಸಿತು. ನಾನಿನ್ನು ಕಲಿಯುವ ವಿದ್ಯಾರ್ಥಿಯಾಗಿದ್ದು, ನಾನು ಹೆಚ್ಚು ಮಾತನಾಡುವಷ್ಟು ಜ್ಞಾನ ಸಂಪಾದಿಸಿಲ್ಲ” ಎಂದರು. ಕಾರ್ಯಕ್ರಮದ ಉದ್ದಕ್ಕೂ ತಮ್ಮ ಎಂದಿನ ಸರಳ ವರ್ತನೆಯ ಮೂಲಕ ಗಮನ ಸೆಳೆದರು. ಗಾಂಧಿ ಜಯಂತಿಯಂದು ಗಾಂಧಿಭವನದಲ್ಲಿ ನಡೆದ ಸಮಾರಂಭದಲ್ಲಿ ಬೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು “ಲಂಕೇಶ್ ಆತ್ಮಕತೆ ಆಡಿಯೋ ಬುಕ್ಸ್” ಟ್ರೇಲರ್ ಬಿಡುಗಡೆ ಮಾಡಿದರು.
ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿಯವರು “ಲಂಕೇಶ್ ಆಪ್” ಪ್ರದರ್ಶನ ಮಾಡಿದರು. ಡಾ. ಶಿವರಾಜ್ ಕುಮಾರ್ ಅವರ ಮಾತು ಮತ್ತು ಸನ್ಮಾನದ ದೃಶ್ಯಗಳಿಗಾಗಿ ಈ ಕೆಳಗೆ ನೀಡಿರುವ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಬಹುದಾಗಿದೆ.

Recommended For You

Leave a Reply

error: Content is protected !!