
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುವಿನಲ್ಲಿದ್ದಾರೆ. ಹಾಗಾಗಿ ಕಳೆದ ಸೋಮವಾರ ಅವರು ತಮ್ಮ ತಂದೆಯ ಊರಾದ ಗಾಜನೂರಿಗೆ ಹೋಗಿದ್ದಾರೆ. ಇದೀಗ ಅಲ್ಲಿ ಅವರು ತಂದೆಯ ಮಾದರಿಯಲ್ಲೇ ತೆಗೆಸಿಕೊಂಡಿರುವ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


ಪುನೀತ್ ರಾಜ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಚಾಮರಾಜನಗರಕ್ಕೆ ರಾಯಭಾರಿಯನ್ನಾಗಿ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಶೂಟಿಂಗ್ ನಿಂದ ವಿರಾಮ ಪಡೆದುಕೊಂಡಿರುವ ಪುನೀತ್ ರಾಜ್ ಕುಮಾರ್ ಕಳೆದ ಸೋಮವಾರ ಗಾಜನೂರಿಗೆ ಹೋಗಿದ್ದಾರೆ. ಚಾಮರಾಜನಗರದ ಉಸ್ತುವಾರಿ ಮುಗಿಸಿಕೊಂಡು, ಹಾಗೆಯೇ ತಂದೆಯ ಮನೆಗೂ ಭೇಟಿನೀಡಿ ಅತ್ತೆಯೊಂದಿಗೆ ಕುಶಲೋಪರಿ ನಡೆಸಿದ್ದಾರೆ. ಊರಿನಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅಪ್ಪಾಜಿ ಡಾ.ರಾಜ್ ಕುಮಾರ್ ಅವರು ಆ ಮನೆಯಲ್ಲಿ ಕಳೆದ ರೀತಿ, ಫೊಟೋಕ್ಕೆ ಪೋಸುಕೊಟ್ಟ ಶೈಲಿಯನ್ನು ಅನುಕರಿಸಿ ಒಂದು ಫೊಟೊ ಕೂಡ ತೆಗೆಸಿಕೊಂಡಿದ್ದಾರೆ. ಸದ್ಯದಲ್ಲೇ ಬೆಂಗಳೂರಿಗೆ ವಾಪಾಸಾಗಿ ‘ಜೇಮ್ಸ್’ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿರುವುದಾಗಿ ತಿಳಿದು ಬಂದಿದೆ.
