ಶ್ರೇಷ್ಠ ನಿರ್ದೇಶಕರಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡಿರುವ ರಿಷಬ್ ಶೆಟ್ಟಿ ಇದೀಗ ತಾವು ‘ಹೀರೋ' ಎಂದು ಸಾಬೀತು ಮಾಡಲು ತಯಾರಾಗಿದ್ದಾರೆ. ಚಿತ್ರದಲ್ಲಿ ಹೆಸರಿಗೆ ತಕ್ಕಂತೆ ರಿಷಬ್ ನಾಯಕ ಮತ್ತು ಮತ್ತು ನಿರ್ಮಾಪಕ ಮಾತ್ರ. ಈ ಹಿಂದೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ರಿಷಬ್ ಅವರಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ಎಮ್. ಭರತ್ ರಾಜ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಎಸ್ಟೇಟ್ ಒಂದರಲ್ಲಿ ಇಪ್ಪತ್ತನಾಲ್ಕು ಗಂಟೆಗಳೊಳಗೆ ನಡೆಯುವಂಥ ಈ ಕತೆಯನ್ನು ಕೇವಲ ಇಪ್ಪತ್ತನಾಲ್ಕು ಮಂದಿಯ ತಂಡದೊಂದಿಗೆ ಚಿತ್ರ ಮಾಡಿರುವುದು ವಿಶೇಷ. ಲಾಕ್ಡೌನ್ ಸಂದರ್ಭ ಜುಲೈನಲ್ಲಿ ಚಿತ್ರೀಕರಣ ಶುರು ಮಾಡಿದ ಈ ಸಿನಿಮಾವನ್ನು ಪರಿಮಿತ ಅವಕಾಶಗಳಲ್ಲಿ ಆಕರ್ಷಕವಾಗಿ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ರಿಷಭ್ ಹೇಳಿದ್ದಾರೆ. ನಾಯಕಿಯಾಗಿ `ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್, ಖಳನಾಗಿ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಾಹಕರು. ವಸ್ತ್ರ ವಿನ್ಯಾಸದ ನಿರ್ವಹಣೆ ಪ್ರಗತಿ ರಿಷಭ್ ಶೆಟ್ಟಿಯವರದ್ದು. ಧರಣಿ ಕಲಾನಿರ್ದೇಶಕರು.