ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವಿವಾಹ ಇಂದು ಬೆಳಿಗ್ಗೆ ನೆರವೇರಿದೆ.
ದಶಕದಿಂದ ಆತ್ಮೀಯರಾಗಿದ್ದ ನಟ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಅವರಿಗೆ ಇಂದು ಮದುವೆ ಮಹೂರ್ತ. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಜನಪ್ರಿಯರಾದ ಈ ಜೋಡಿ ಚಿತ್ರದಲ್ಲಿ ಒಂದಾಗಿರಲಿಲ್ಲ.ಆದರೆ ನಿಜ ಜೀವನದಲ್ಲಿ ಜೊತೆ ಸೇರಿ ಅಭಿಮಾನಿಗಳಿಗೂ ಖುಷಿ ನೀಡಿದ್ದಾರೆ.
ತಮ್ಮ ಪ್ರೇಮದ ಕುರುಹಾಗಿ ಪ್ರೇಮಿಗಳ ದಿನದಂದೇ ಅವರು ಜೊತೆಯಾಗುತ್ತಿರುವುದು ವಿಶೇಷ.