`ಅಣ್ಣಯ್ಯ’ ನಿರ್ಮಾಪಕ ಇನ್ನಿಲ್ಲ!

ರವಿಚಂದ್ರನ್ ನಟನೆಯ ಅಣ್ಣಯ್ಯ', ಸುದೀಪ್ ನಟನೆಯರನ್ನ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕರಾಗಿದ್ದ ಚಂದ್ರಶೇಖರ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರ ಸಾವಿಗೆ ಕೋವಿಡ್ ಕಾರಣವಾಗಿದೆ. ಸಿನಿಕನ್ನಡದ ಜೊತೆ ಮಾತನಾಡಿದ ಮೃತರ ಅಳಿಯ ಸಾಯಿ ಅಶೋಕ್ ಅವರು ಈ ಮಾಹಿತಿಯನ್ನು ದೃಢೀಕರಿಸಿದ್ದಾರೆ.

ಸರಿಯಾಗಿ 23 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಆಗುವ ಮೂಲಕ ಚಂದ್ರಶೇಖರ್ ಅವರನ್ನು ಬೆಂಗಳೂರಿನ ಮಣಿಪಾಲ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಮುಂದಿನ ದಿನಗಳಲ್ಲಿ ಕೋವಿಡ್‌ ನೆಗೆಟಿವ್ ಬಂತಾದರೂ, ದಿಢೀರನೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡಿತ್ತು. ನಿನ್ನೆ ಬುಧವಾರ ರಾತ್ರಿ 11.50ರ ಸುಮಾರಿಗೆ ಚಂದ್ರಶೇಖರ್ ಇಹಲೋಕ ತ್ಯಜಿಸಿದ್ದರು.

ಚಂದ್ರಶೇಖರ್ ಅವರು ನಿಮಿಷಾಂಬ ಪ್ರೊಡಕ್ಷನ್ಸ್ ಮೂಲಕ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ಸೈನಿಕ, ಹಠಮಾರಿ ಹೆಣ್ಣು ಕಿಲಾಡಿ ಗಂಡು ಹೀಗೆ ಸುಮಾರು ಹದಿನಾಲ್ಕರಷ್ಟು ಚಿತ್ರಗಳನ್ನು ನಿರ್ಮಿಸಿದ್ದರು.ಪತ್ನಿ ಸುಮಾ ಮತ್ತು ಎರಡು ಹೆಣ್ಣು ಹಾಗೂ ಒಬ್ಬ ಗಂಡು ಹೀಗೆ ಮೂವರು ಮಕ್ಕಳನ್ನು ಅಗಲಿದ್ದಾರೆ.ಚಂದ್ರಶೇಖರ್ ಅವರಿಗೆ 65 ವರ್ಷ ವಯಸ್ಸಾಗಿತ್ತು. ಕೋವಿಡ್ ನೆಗೆಟಿವ್ ಆಗಿರುವ ಮೃತದೇಹವನ್ನು ಪಡೆದುಕೊಂಡು ಅಂತ್ಯಕ್ರಿಯೆ ನಡೆಸುವ ನಿಟ್ಟಿನಲ್ಲಿ ಪ್ರಸ್ತುತ ಕುಟುಂಬ ವರ್ಗ ಕಾರ್ಯೋನ್ಮುಖವಾಗಿದೆ.

ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವರ ಹೊಸ ಸಿನಿಮಾ ನಿರ್ಮಿಸುವ ಯೋಜನೆ ಹಾಕಿದ್ದರು ಚಂದ್ರಶೇಖರ್. ಆದರೆ ವಿಧಿಯ ಯೋಜನೆ ಬೇರೆಯೇ ಆಗಿತ್ತು. ಚಂದ್ರಶೇಖರ್ ಅವರ ಸಾವು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೆ ಕೂಡ ಬಾಧಕವಾಗಿದೆ. ಎರಡು ದಿನಗಳ ಹಿಂದೆಯಷ್ಟೇ ನಿರ್ಮಾಪಕ ರಾಮು ನಿಧನರಾಗಿದ್ದರು. ಒಂದೇ ವಾರದಲ್ಲಿ ಕನ್ನಡಚಿತ್ರರಂಗ ಇಬ್ಬರು ಪ್ರಮುಖ ನಿರ್ಮಾಪಕರನ್ನು ಕಳೆದುಕೊಂಡಿದೆ.

Recommended For You

Leave a Reply

error: Content is protected !!