ಕನ್ನಡ ಕಿರುತೆರೆಯಲ್ಲಿ ಜನಪ್ರಿಯ, ಹೊಸ ಕನ್ನಡ ಸಿನಿಮಾಗಳನ್ನು ನೀಡುವಲ್ಲಿ ಜೀ಼ ಕನ್ನಡದ ಪಾತ್ರ ಪ್ರಮುಖ. ಆ ನಿಟ್ಟಿನಲ್ಲಿ ಕನ್ನಡದ ಎರಡು ಖ್ಯಾತ ಚಿತ್ರಗಳನ್ನು ಈ ವಾರ ಜೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.
ಕಥಾಸಂಗಮ
ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಕಥಾ ಸಂಗಮ’ದ ಬಳಿಕ ಅದೇ ಮಾದರಿಯಲ್ಲಿ ಕತೆಗಳ ಗುಚ್ಛದೊಂದಿಗೆ ಅದೇ ಹೆಸರಲ್ಲಿಯೇ ಚಿತ್ರ ತರಲು ರೂವಾರಿಯಾದವರು ರಿಷಬ್ ಶೆಟ್ಟಿ.
ಕಿರಣ್ ರಾಜ್ ಕೆ, ಚಂದ್ರಜಿತ್ ಬೆಳ್ಳಿಯಪ್ಪ, ಶಶಿ ಕುಮಾರ್ ಪಿ, ರಾಹುಲ್ ಪಿ.ಕೆ, ಜಮದಗ್ನಿ ಮನೋಜ್, ಕರಣ್ ಅನಂತ್, ಜಯಶಂಕರ್ ಹೀಗೆ ಏಳು ಮಂದಿ ಯುವ ನಿರ್ದೇಶಕರ ವಿವಿಧ ಕಥೆಗಳ ಗುಚ್ಛ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಮೃತಾ ನಾಯಕ್, ಹರಿಪ್ರಿಯ, ರಿಷಬ್ ಶೆಟ್ಟಿ, ಕಿಶೋರ್, ರಾಜ್ ಬಿ. ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಅವಿನಾಶ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಹರಿ ಸಮಷ್ಟಿ ಮುಂತಾದವರು ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.
ಶ್ರೀದೇವಿ ಪ್ರೊಡಕ್ಷನ್ಸ್, ಪ್ರದೀಪ್ ಎನ್.ಆರ್. ಮತ್ತು ರಿಷಬ್ ಶೆಟ್ಟಿ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿರುವ ‘ಕಥಾ ಸಂಗಮ’ ಇದೇ ಶನಿವಾರ ರಾತ್ರಿ 7 ಕ್ಕೆ ಜೀ಼ ಕನ್ನಡ ಹಾಗೂ ಜೀ಼ ಕನ್ನಡ ಎಚ್‍ಡಿ ವಾಹಿನಿಯ ಮೂಲಕ ಮೊದಲಬಾರಿ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದೆ.
ರಾಮಾರ್ಜುನ
ಅನೀಶ್ ತೇಜೇಶ್ವರ್ ನಟನೆ ಹಾಗೂ ನಿರ್ದೇಶನದ ಬಹುನಿರೀಕ್ಷಿತ ಚಿತ್ರವಾಗಿತ್ತು ರಾಮಾರ್ಜುನ.
ಆಕ್ಷನ್ ಎಂಟರ್ ಟೈನರ್ ಆಗಿರುವ ಈ ಸಿನಿಮಾ ವಿಮೆ, ವೈದ್ಯಕೀಯ ಹಾಗೂ ರಾಜಕೀಯ ಮಾಫಿಯಾದ ಕಥೆ ಹೇಳುತ್ತದೆ. ನಾಯಕ ಒಬ್ಬ ವಿಮಾ ಏಜೆಂಟ್ ಆಗಿರುತ್ತಾನೆ. ಪ್ರತಿಯೊಬ್ಬರೂ ವಿಮೆ ಪಡೆಯಬೇಕೆನ್ನುವುದು ಅವನ ಬಯಕೆ. ಜನರ ಸಮಸ್ಯೆಗಳಿಗೆ ಒಂದೇ ಫೋನ್ ಕರೆಗೆ ಸ್ಪಂದಿಸುತ್ತಿರುತ್ತಾನೆ. ಆದರೆ ಆ ಪ್ರದೇಶದಲ್ಲಿ ಮರಣಿಸಿದ 20 ಮಂದಿಯ ಹಿಂದೆ ಬಹುದೊಡ್ಡ ಇನ್ಷೂರೆನ್ಸ್ ಹಗರಣವಿರುತ್ತದೆ. ಈ ಹಗರಣದ ಹಿಂದಿನ ರೂವಾರಿಗಳನ್ನು ಪತ್ತೆ ಮಾಡಲು ಹೊರಟ ನಾಯಕನ ಸಾಹಗಾಥೆಯೇ ‘ರಾಮಾರ್ಜುನ’ ಚಿತ್ರ.
ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ರವಿ ಕಾಳೆ, ಶರತ್ ಲೋಹಿತಾಶ್ವ ನಟಿಸಿದ್ದಾರೆ. ಇದೇ ಭಾನುವಾರ ರಾತ್ರಿ 7 ಕ್ಕೆ ಜೀ಼ ಕನ್ನಡ ಹಾಗೂ ಜೀ಼ ಕನ್ನಡ ಹೆಚ್‍ಡಿ ವಾಹಿನಿಯಲ್ಲಿ ಚಿತ್ರ ಪ್ರಸಾರಗೊಳ್ಳಲಿದೆ.