ನಟ ರಕ್ಷಿತ್ ಶೆಟ್ಟಿ ಸಾಮಾನ್ಯವಾಗಿ ಯಾರ ಬಗ್ಗೆಯೂ ಮಾತನಾಡುವವರಲ್ಲ. ತಮ್ಮ ಕಾಲೆಳೆದವರ ಬಗ್ಗೆ ಕೂಡ ಮಾತನಾಡದ ರಕ್ಷಿತ್ ಏಕಾಏಕಿ ಚೇತನ್ ಅವರಿಗೊಂದು ಉತ್ತರ ನೀಡಿದ್ದರು. ಅದು ಅವರು ನಮ್ಮ ಕನ್ನಡ ಚಿತ್ರರಂಗವನ್ನು ತಮಾಷೆ ಮಾಡಿದವರ ಜೊತೆ ಸೇರಿದರು ಎನ್ನುವ ಕಾರಣಕ್ಕಾಗಿ. ಆದರೆ ನಿಜಕ್ಕೂ ಕನ್ನಡ ಚಿತ್ರರಂಗ ರಕ್ಷಿತ್ ಗೆ ಎಷ್ಟರಮಟ್ಟಿಗೆ ಬೆಂಬಲ ತೋರಿಸಿದೆ ಎನ್ನುವ ಬಗ್ಗೆ ಪತ್ರಕರ್ತ ನವೀನ್ ಸೂರಿಂಜೆ ಇಲ್ಲಿ ಅವಲೋಕಿಸಿದ್ದಾರೆ.
ಬ್ರಾಹ್ಮಣ್ಯದ ಬಗ್ಗೆ ಮಾತನಾಡಿದ ನಟ ಚೇತನ್ ರನ್ನು ಬೆಂಬಲಿಸಿ ನನ್ನ ಗೆಳೆಯ ಸುದೀಪ್ತೋ ಮೊಂಡಲ್ ಟ್ವೀಟ್ ಮಾಡಿದ್ದ. ಟ್ವೀಟ್ ನಲ್ಲಿ ಕನ್ನಡ ಚಿತ್ರರಂಗದಲ್ಲಿರುವ ಬ್ರಾಹ್ಮಣ್ಯವನ್ನೂ ಸುದೀಪ್ತೋ ಉಲ್ಲೇಖಿಸಿದ್ದ. ಆಗ ಕನ್ನಡ ಸಿನಿಮಾ ಲೋಕದ ಬ್ರಾಹ್ಮಣರಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಟ್ವೀಟರ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು ಶೂದ್ರ ರಕ್ಷಿತ್ ಶೆಟ್ಟಿ.
ಇವತ್ತು ರಕ್ಷಿತ್ ಶೆಟ್ಟಿ, ತನ್ನ ಬುಡಕ್ಕೆ ಬಂದಾಗ ಸಿಡಿದೆದ್ದಿದ್ದಾರೆ. ರಕ್ಷಿತ್ ಶೆಟ್ಟಿ ಹೆಸರು ಡ್ರಗ್ಸ್ ಕೇಸಲ್ಲಿ ಕೇಳಿ ಬಂದಿಲ್ಲ, ರಕ್ಷಿತ್ ಶೆಟ್ಟಿ ವಿರುದ್ದ ಚಿತ್ರರಂಗದೊಳಗೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪಗಳಿಲ್ಲ. ಆದರೂ ರಕ್ಷಿತ್ ಶೆಟ್ಟಿಯೇ ಟಾರ್ಗೆಟ್ ಯಾಕಾದರು ?
ಒಬ್ಬ ಬ್ರಾಹ್ಮಣ ಯುವ ನಟರನ್ನು ಪತ್ನಿ ಸಮೇತ ಡ್ರಗ್ ಕೇಸ್ ಸಂಬಂಧ ಮೂರ್ನಾಲ್ಕು ಬಾರಿ ಸಿಸಿಬಿ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ಮಾಡುತ್ತಾರೆ. ಅದು ಒಂದು ಸುದ್ದಿಯಾಯ್ತೇ ವಿನಹ ರಕ್ಷಿತ್ ಶೆಟ್ಟಿ ವಿರುದ್ದದ ಕಾರ್ಯಕ್ರಮದಂತೆ ಪ್ರಸಾರವಾಗಲಿಲ್ಲ ಯಾಕೆ ?
ಒಬ್ಬ ಖ್ಯಾತ ಬ್ರಾಹ್ಮಣ ನಟನ ಹೆಸರನ್ನು ಉಲ್ಲೇಖಿಸಿ, ನಾವೆಲ್ಲರೂ ಒಟ್ಟಿಗೇ ಶ್ರೀಲಂಕಾದಲ್ಲಿ ಪಾರ್ಟಿ ಮಾಡ್ತಿದ್ವಿ, ನನ್ನ ಮೇಲೆ ಕೇಸ್ ಹಾಕೋದಾದ್ರೆ ಅವರನ್ನು ಹೇಗೆ ಬಿಡ್ತೀರಿ ಎಂದು ನಟಿಯೊಬ್ಬರು ಕೇಳಿದರೂ ಆ ಬ್ರಾಹ್ಮಣ ಖ್ಯಾತ ನಟನ ಹೆಸರು ಯಾವ ಮಾಧ್ಯಮಗಳಲ್ಲೂ ಬರಲ್ಲ.
“ಯೋಗರಾಜ ಭಟ್ಟರಂತ ನಿರ್ದೇಶಕರೇ ಹೈಪ್ ಕೊಟ್ಟರೂ ರಕ್ಷಿತ್ ಶೆಟ್ಟಿಗೆ ಬೆಳೆಯೋಕೆ ಆಗಿಲ್ಲ” ಎಂದು ಹೇಳುವಾಗ ಯೋಗರಾಜ ಭಟ್ಟರ ವೈಫಲ್ಯ ಎಂದು ಅನ್ನಿಸುವುದಿಲ್ಲ ಯಾಕೆ ?
ಸಿನೇಮಾ ಗೆಲುವಿಗೆ ರಕ್ಷಿತ್ ಜೊತೆ ಸಹನಟರಾಗಿದ್ದ ಅನಂತ್ ನಾಗ್ ನಟನೆ ಕಾರಣವಂತೆ..!
ಈಗ ರಕ್ಷಿತ್ ಶೆಟ್ಟಿಗೆ ಬ್ರಾಹ್ಮಣ್ಯದ ಅರ್ಥ ಆಗಿದೆಯೆಂದು ಭಾವಿಸುತ್ತೇನೆ.
ಬ್ರಾಹ್ಮಣ್ಯದ ಬಗ್ಗೆ ಮಾತನಾಡಿದ ನಟ ಚೇತನ್ ರನ್ನು ಬೆಂಬಲಿಸಿ ನನ್ನ ಗೆಳೆಯ ಸುದೀಪ್ತೋ ಮೊಂಡಲ್ ಟ್ವೀಟ್ ಮಾಡಿದ್ದ. ಟ್ವೀಟ್ ನಲ್ಲಿ ಕನ್ನಡ ಚಿತ್ರರಂಗದಲ್ಲಿರುವ ಬ್ರಾಹ್ಮಣ್ಯವನ್ನೂ ಸುದೀಪ್ತೋ ಉಲ್ಲೇಖಿಸಿದ್ದ. ಆಗ ಕನ್ನಡ ಸಿನಿಮಾ ಲೋಕದ ಬ್ರಾಹ್ಮಣರಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಟ್ವೀಟರ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು ಶೂದ್ರ ರಕ್ಷಿತ್ ಶೆಟ್ಟಿ. ಇವತ್ತು ರಕ್ಷಿತ್ ಶೆಟ್ಟಿ, ತನ್ನ ಬುಡಕ್ಕೆ ಬಂದಾಗ ಸಿಡಿದೆದ್ದಿದ್ದಾರೆ.
ರಕ್ಷಿತ್ ಶೆಟ್ಟಿ ಹೆಸರು ಡ್ರಗ್ಸ್ ಕೇಸಲ್ಲಿ ಕೇಳಿ ಬಂದಿಲ್ಲ, ರಕ್ಷಿತ್ ಶೆಟ್ಟಿ ವಿರುದ್ದ ಚಿತ್ರರಂಗದೊಳಗೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪಗಳಿಲ್ಲ. ಆದರೂ ರಕ್ಷಿತ್ ಶೆಟ್ಟಿಯೇ ಟಾರ್ಗೆಟ್ ಯಾಕಾದರು ?