ಇಂದ್ರಜಿತ್ ಲಂಕೇಶ್ ದಿಢೀರ್ ಸುದ್ದಿಗೋಷ್ಠಿ

ಮಾದಕ ವಸ್ತುವಿನ ಬಳಕೆ ಕನ್ನಡ ಚಿತ್ರರಂಗದಲ್ಲಿ ಇದೆ ಎನ್ನುವ ಬಗ್ಗೆ ಆರೋಪಿಸಿ ಮಾಧ್ಯಮಗೋಷ್ಠಿ ಕರೆದು ಸುದ್ದಿ ಮಾಡಿದ್ದರು ಪತ್ರಕರ್ತ ಇಂದ್ರಜಿತ್ ಲಂಕೇಶ್. ಇದೀಗ ಅಂಥದೇ ಮತ್ತೊಂದು ವಿಚಾರದ ಬಗ್ಗೆ ಸರ್ಕಾರದ ಗಮನ ಸೆಳೆಯಲು ದಿಢೀರ್ ಪತ್ರಿಕಾಗೋಷ್ಠಿ ಆಯೋಜಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂದೆ ಇಂದು ಬೆಳಿಗ್ಗೆ 9 ಗಂಟೆಗೆ ಮಾಧ್ಯಮಗೋಷ್ಠಿ ಆಯೋಜಿಸಿರುವ ಇಂದ್ರಜಿತ್ ಅದರಲ್ಲಿ ಇತ್ತೀಚೆಗಷ್ಟೇ ದರ್ಶನ್ ಮತ್ತು ನಿರ್ಮಾಪಕ ಉಮಾಪತಿಯವರು ಕಾಂಪ್ರಮೈಸ್ ಮಾಡಿಕೊಂಡ ವಿವಾದದ ವಿಚಾರವನ್ನು ಸೇರಿಸಿ ಒಂದಷ್ಟು ಸ್ಪೋಟಕ ಸಂಗತಿಗಳನ್ನು ಹೊರಗಿಡಲಿರುವುದಾಗಿ ತಿಳಿದು ಬಂದಿದೆ.

ಮಾಧ್ಯಮ ಗೋಷ್ಠಿಗೂ ಮೊದಲು ದರ್ಶನ್ ಗೃಹಸಚಿವರಿಗೆ ಒಂದು ಮನವಿ ನೀಡುತ್ತಿದ್ದು, ಅದರಲ್ಲಿರುವ ಒಂದಷ್ಟು ವಿಚಾರಗಳನ್ನು ಹೀಗೆ ಹಂಚಿಕೊಂಡಿದ್ದಾರೆ‌. “ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಿದೆ. ಮಾದಕ ವಸ್ತುಗಳ ಮಾರಾಟ ಜಾಲ ತನ್ನ ಕಬಂಧ ಬಾಹುವನ್ನು ಜಿಲ್ಲೆಯಾ ವಿಸ್ತರಿಸಿದೆ. ಯುವಕ ಯುವತಿಯರು ಈ ಮಾದಕ ಜಾಲದ ಸುಳಿಗೆ ಸಿಲುಕಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನೀವು ಗಮನಹರಿಸಿ; ಪತ್ರಿಕಾಗೋಷ್ಠಿ ನಡೆಸಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ.

ಆದರೆ, ಪ್ರಭಾವಿಗಳು ; ಉದ್ಯಮಿಗಳು; ಸೆಲೆಬ್ರಿಟಿಗಳ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ. ಪ್ರಭಾವಿಗಳ ಎದುರು ಸಾಮಾನ್ಯರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಸಿಡಿ ಲೇಡಿಯ ವಿಚಾರದಲ್ಲೂ ಇಡೀ ವ್ಯವಸ್ಥೆ ಆಕೆಯ ಮೇಲೆಯೇ ಒತ್ತಡ ಹೇರಿತ್ತು; ಅರುಣಾಕುಮಾರಿಯ ವಿಚಾರದಲ್ಲೂ ಇದು ಮುಂದುವರಿದಿದೆ. ಹೀಗೇ ಆದರೆ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆ ಹೋಗುತ್ತದೆ. ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಿ: ಕಠಿಣ ಕ್ರಮ ಕೈಗೊಂಡು ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಮೈಸೂರು ಜಿಲ್ಲಾ ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿರುವುದು; ಸಾಕ್ಷಿಗಳಿದಗದರೂ ಯಾರೊಬ್ಬರ ಮೇಲೂ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಮೈಸೂರು ಜಿಲ್ಲಾ ಪೊಲೀಸ್ ವ್ಯವಸ್ಥೆ ಯೇ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಈ ಕೂಡಲೇ ಎಲ್ಲ ವಿಚಾರಗಳ ಬಗ್ಗೆ ಗಮನಹರಿಸಿ ಜಡಗಟ್ಟಿರುವ ಮೈಸೂರು ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕಾಗಿದೆ. ಭ್ರಷ್ಟರನ್ನು ಅಮಾನತುಗೊಳಿಸಿ ಸಮರ್ಥ ಅಧಿಕಾರಿಗಳನ್ನು ನೇಮಿಸಬೇಕಿದೆ. ಯಾರೇ ತಪ್ಪು ಮಾಡಿದರೂ ಅವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ಮೇಲೆ ತುರ್ತು ಕ್ರಮ ಕೈಗೊಳ್ಳುವ ಮೂಲಕ ದಲಿತರ, ಬಡವರ ಮತ್ತು ಶೋಷಿತರ ರಕ್ಷಣೆ ಮಾಡಬೇಕು” ಎಂದು ಮನವಿ ಮಾಡಿದ್ದಾರೆ ಇಂದ್ರಜಿತ್.

ಈ ಮನವಿ ಪತ್ರವನ್ನು ಸಚಿವರಿಗೆ ನೀಡಿದ ಬಳಿಕ ಮೈಸೂರಿನ ಸ್ಟಾರ್ ಹೋಟೆಲ್ ನಲ್ಲಿ ನಡೆದಿರುವ ದಲಿತನ ಮೇಲಿನ ಹಲ್ಲೆ , ಲೋನ್ ಹಗರಣ ಮತ್ತು ಪೊಲೀಸ್ ಇಲಾಖೆಯ ನೈತಿಕ ಅಧಪತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದ್ರಜಿತ್ ಮಾಧ್ಯಮಗಳ‌ ಮುಂದೆ ಇಡಲಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸಹಜವಾಗಿ ಇಂದ್ರಜಿತ್ ಅವರು ಕಲಾವಿದರ ಮೇಲೆ ಕೂಡ ಆಪಾದನೆ ಮಾಡುವ ಸಂದರ್ಭ ಬರಬಹುದು. ಆದರೆ ಅದಕ್ಕಾಗಿ ಈ ಬಾರಿ ಕೂಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಇಂದ್ರಜಿತ್ ಅವರಿಗೆ ಬಾರದಿರಲಿ ಎಂದು ಆಶಿಸೋಣ.

Recommended For You

Leave a Reply

error: Content is protected !!
%d bloggers like this: