
ಸಪ್ತಗಿರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಆರ್.ಶಶಿಕುಮಾರ್ ನಿರ್ಮಿಸುತ್ತಿರುವ ‘ಮೃಗ’ ಚಿತ್ರಕ್ಕೆ ಯಲಚೇನಹಳ್ಳಿಯ ಗ್ರೀನ್ ವ್ಯಾಲಿ ಶಾಲೆ ಆವರಣದಲ್ಲಿ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸಲಾಯಿತು.
ನಾಯಕ ವಿಜಯ್ ಮಹೇಶ್ ಹಾಗೂ ಹದಿನೈದಕ್ಕೂ ಹೆಚ್ಚು ಸಾಹಸ ಕಲಾವಿದರು ಈ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ದೃಶ್ಯವು ನರಸಿಂಹ ಮೂರ್ತಿ ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿದೆ. ಸಾಹಸ ನಿರ್ದೇಶಕ ಮಾಸ್ ಮಾದ ಅವರ ಬಳಿ ಸಹಾಯಕರಾಗಿದ್ದ ನರಸಿಂಹ ಮೂರ್ತಿ ಈ ಚಿತ್ರದ ಮೂಲಕ ಸ್ವತಂತ್ರ ಸಾಹಸ ನಿರ್ದೇಶನ ಮಾಡಿದ್ದಾರೆ.
ಹೆಚ್ ಎಂ ಮಾರುತಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದಲ್ಲಿ ಈ ಹಿಂದೆ ‘ನಾನೊಬ್ನೇ ಒಳ್ಳೇವ್ನು’ ಸಿನಿಮಾದಲ್ಲಿ ನಾಯಕರಾಗಿದ್ದ ವಿಜಯ್ ಮಹೇಶ್ ಅಭಿನಯಿಸುತ್ತಿದ್ದಾರೆ. ಟೆಲಿನ್ ಮಹಿಮಾ ಈ ಚಿತ್ರದ ನಾಯಕಿ. ಕ್ರೈಂ ಥ್ರಿಲ್ಲರ್ ಕಥಾಹಂದರವುಳ್ಳ ಈ ಚಿತ್ರದ 40% ಚಿತ್ರೀಕರಣ ಮುಗಿದಿರುವುದಾಗಿ ಚಿತ್ರತಂಡ ತಿಳಿಸಿದೆ. ಭರತ್ ಈ ಚಿತ್ರದ ಛಾಯಾಗ್ರಹಕರು.
