
1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಹಾ ಸಂಗ್ರಾಮವೇ ನಡೆದಿತ್ತು. ಪಾಕಿಸ್ತಾನ ನಡೆಸಿದ ಆಪೇರಷನ್ ಚೆಂಗಿಝ್ ಖಾನ್ ನಿಂದ ಆರಂಭವಾದ ಯುದ್ಧ ಮುಂದೆ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶವು ಸಂಪೂರ್ಣ ಸ್ವತಂತ್ರಗೊಳ್ಳಲು ನಾಂದಿಯಾಯಿತು. ಆ ಸಮಯದಲ್ಲಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಲು ಹಲವಾರು ರೀತಿಯ ತಂತ್ರಗಳನ್ನು ಹೂಡಿತ್ತು. ಅದೆಲ್ಲದರಿಂದ ಪಾರಾಗಿ ಹೆಮ್ಮೆಯಿಂದ ಎದ್ದು ನಿಂತ್ತಿದ್ದ ಕೀರ್ತಿ ನಮ್ಮ ದೇಶಕ್ಕೆ. ಅಂಥದೊಂದು ಘಟನೆಯನ್ನು ಚಿತ್ರವನ್ನಾಗಿ ಮಾಡಿ ನಮ್ಮ ಮುಂದೆ ಪ್ರಸ್ತುತ ಪಡಿಸಲಾಗಿದೆ. ಅದೇ ಭುಜ್:ದಿ ಪ್ರೈಡ್ ಆಫ್ ಇಂಡಿಯಾ.

ಡಿಸ್ನಿ ಹಾಟ್ ಸ್ಟಾರ್ ಅಲ್ಲಿ ಬಿಡುಗಡೆಯಾದ ಅಭಿಷೇಕ್ ದುಧೈಯ ನಿರ್ದೇಶಿಸಿರುವ ಈ ಅಪರೂದ ಕಥೆಯ ಸಿನಮಾವನ್ನು ಪ್ರತಿಯೊಬ್ಬ ಬಾರತೀಯ ನೋಡಲೇಬೇಕಾದ ಸಿನಿಮಾ. ಹಲವಾರು ಧಾರಾವಾಹಿಗಳನ್ನು ನಿರ್ದೇಶಿಸಿರುವ ಅಭಿಷೇಕ್, ಭುಜ್ ಸಿನಿಮಾದೊಂದಿಗೆ ಮೊದಲಬಾರಿಗೆ ಚಲನಚಿತ್ರನದ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ಅವರ ಪ್ರಯತ್ನ ನಿಜವಾಗಲು ಶ್ಲಾಘನೀಯ. 1971ರಲ್ಲಿ ನೆಡೆದ ಯುದ್ಧದ ಕುರಿತು, ಹಲವಾರು ಚಿತ್ರಗಳು ತೆರೆಯಮೇಲೆ ಕಂಡಿದ್ದೇವೆ ಆದರೆ ಈ ಕಥೆ ಇನ್ನೂ ಅಪರಿಚಿತ. ನಿಜವಾದ ಕಥೆಯಿಂದ ಪ್ರೇರಿತವಾದ ಕಾಲ್ಪನಿಕ ಸಿನಿಮಾ ಇದು ಎಂದು ಚಿತ್ರದ ನಿರ್ದೇಶಕರು ಮೊದಲೇ ಸೂಚನೆಯನ್ನು ನಿಡಿದ್ದಾರೆ.
ಪಾಕಿಸ್ತಾನವು ಭಾರತದ ಪಶ್ಚಿಮ ಭಾಗದ ಮೇಲೆ ಆಕ್ರಮಣ ಮಾಡಿ, ನಂತರ ಭಾರತದ ಇನ್ನಷ್ಟು ಜಾಗವನ್ನು ಕಬಳಿಸುವ ಸಂಚು ಮಾಡಲಾಗಿತ್ತು. ಅದಕ್ಕಾಗಿ ಮಾಡಿದ ಒಂದು ಮಾಸ್ಟರ್ ಪ್ಲಾನ್ ಎಂದರೆ ಭಾರತದ ಏರ್ ಬೇಸ್ ಆದ ಭುಜ್ ಮೇಲೆ ದಾಳಿ ಮಾಡಿ ವಿಘಕೋಟ್ ಮೂಲಕ ಭಾರತಕ್ಕೆ ಪ್ರವೇಶಿಸುವುದು. ತಮ್ಮ ಸಂಚಿನಂತೆ ಅವರು ಭುಜ್ ಏರ್ ಬೇಸ್ ಮೇಲೆ ದಾಳಿ ಮಾಡಿದರು. ಭುಜ್ ನ ಕಮಾಂಡಿಂಗ್ ಆಫೀಸರ್ ಆದ ವಿಜಯ್ ಕಾರ್ನಿಕ್ ತಮ್ಮ ಧೀರತನದಿಂದ ಪಾಕಿಸ್ತಾನವನ್ನು ಎದುರಿಸದರು. ಪಾಕಿಸ್ತಾನದ ಆಕ್ರಮಣದಿಂದ ಭುಜ್ ಏರ್ ಬೇಸ್ ನ ರನ್ ವೇ ಸಂಪೂರ್ಣ ದುಸ್ಥಿತಿಗೆ ತಲುಪಿರುತ್ತದೆ. ಯಾವುದೇ ವಿಮಾನ ಸಂಚರಿಸಲು ಅಸಾಧ್ಯವಾಗಿತ್ತು. ಹಾಗಾಗಿ ಅಲ್ಲಿಗೆ ಭಾರತದ ಇತರೆ ಭಾಗಗಳಿಂದ ಯಾವುದೇ ಸಹಕಾರ ನೀಡಲು ಸಾಧ್ಯವಾಗಿರುವುದಿಲ್ಲ.
ಭಾರತಕ್ಕಿದ್ದ ಒಂದೇ ಒಂದು ದಾರಿ ಎಂದರೆ ಅದು ಭುಜ್ ಏರ್ ಬೇಸ್ ನ ರನ್ ವೇ ದುರಸ್ತಿ ಮಾಡುವಂಥದ್ದು. ಅದಕ್ಕೆ ಬೇಕಾದ ಸಾಮಗ್ರಿ, ಶಕ್ತಿಗಳ ಕೊರತೆ ಇರುತ್ತದೆ. ಆ ಸಮಯದಲ್ಲಿ ಅಲ್ಲಿಯ 3೦೦ ಜನ ಸ್ತ್ರೀಯರ ಸಹಯಾದಿಂದ ರನ್ ವೇ ಮತ್ತೆ ಕಟ್ಟುತ್ತಾರೆ ವಿಜಯ್ ಕಾರ್ನಿಕ್. ಅವರ ಸಾಹಸದ ಕಥೆ ಈ ಸಿನಿಮಾ.
ಸ್ತ್ರೀ ಶಕ್ತಿಯ ಒಂದು ದೃಷ್ಟಾಂತವನ್ನು ಕೂಡ ಚಿತ್ರದಲ್ಲಿ ಕಾಣಬಹುದು.
ಒಂದು ಧಮಾಕದೊಂದಿಗೆ ಶುರುವಾಗುವ ಈ ಸಿನಿಮಾ, ಮೊದಲ ಅರ್ಧ ಭಾಗದಲ್ಲಿ ಹಲವಾರು ಭಾವಭರಿತವಾದ ಪಾತ್ರಗಳನ್ನು ತೋರಿಸಲಾಗಿದೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಸಂಜಯ್ ದತ್ತ್ ಹಾಗು ನೋರ ಫತೇಹಿ, ಇಬ್ಬರೂ ಮನಮುಟ್ಟುವಂತೆ ತಮ್ಮ ಪಾತ್ರಗಳನ್ನು ದೃಢೀಕರಿಸಿದ್ದಾರೆ. ವಿಜಯ್ ಕಾರ್ನಿಕ್ ಪಾತ್ರದಲ್ಲಿ ಅಜಯ್ ದೇವಗನ್ ಮತ್ತು 300 ಜನ ಸ್ತ್ರೀಯರ ಮುಂದಾಳತ್ವ ವಹಿಸಿದ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಆಕರ್ಷಿಸಿದ್ದಾರೆ. ಸೂಕ್ತವಾದ ಹಿನ್ನೆಲೆ ಸಂಗೀತ ಈ ಚಿತ್ರವನ್ನು ನೋಡುವಾಗ ರೋಮಾಂಚನಗೊಳಿಸುತ್ತದೆ. ಗ್ರಾಫಿಕ್ಸ ಮತ್ತು ಸಿನಿಮಾಟೋಗ್ರಾಫಿ ಕೂಡ ಮುಖ್ಯವಾದ ಕಾರ್ಯ ನಿರ್ವಹಿಸಿದೆ.
ಚಿತ್ರದ ಅಂತ್ಯದಲ್ಲಿ ತೋರಿಸುವ ಅಂದಿನ ನಿಜವಾದ ಧೀರರ ಚಿತ್ರ ಹಾಗು ಮಾಹಿತಿಗಳಿಂದ ಈ ಸಿನಿಮಾ ಮತ್ತೊಂದು ಎತ್ತರದ ಘಟ್ಟಕ್ಕೆ ಏರಿ ನಿಲ್ಲುತ್ತದೆ. ಛೆ! ಇಷ್ಟು ಬೇಗ ಮುಗಿದುಹೋಯಿತಾ ಈ ಸಿನಿಮಾ? ಎಂಬ ಭಾವ ಪ್ರೇಕ್ಷಕರ ಮನದಲ್ಲಿ ಮೂಡಿಸಲು ಚಿತ್ರತಂಡ ಯಶಸ್ವಿಯಾಗಿದೆ.