ಆಪರೇಷನ್ ಡಿ ಎನ್ನುವ ವಿಭಿನ್ನ ಹೆಸರಿನ ಚಿತ್ರವನ್ನು ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿದ್ದು ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ.
ಚಿತ್ರದ ಮಾತಿನ ಭಾಗದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದ್ದು, ನಾಲ್ಕು ಹಾಡು ಹಾಗೂ ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ.
ಕಲಾವಿದರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತಿರುಮಲೇಶ್ ತಿರುಪತಿ, ಬಣ್ಣಬಣ್ಣದ ಲೋಕ, ಮಸ್ತಿ, ಬೀರಬಲ್, ಭಗವಾನ್ ಶ್ರೀ ರಾಮನುಜ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆಯಿಟ್ಟರುವ ತಿರುಮಲೇಶ್ ಈ ಚಿತ್ರದ ಸಾರಥ್ಯ ವಹಿಸಿದ್ದಾರೆ.
ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.
ರಾಜಶಂಕರ್, ತಿರುಮಲೇಶ್, ಸಿದ್ದರಾಜು, ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ವೇದಿಕ ಹಾಗೂ ದ್ವೈಪಾಯನ ಸೇರಿಕೊಂಡು ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕೆಂಪಗಿರಿ ಹಾಗೂ ವೇದಿಕ ಹಾಡುಗಳನ್ನು ರಚಿಸಿದ್ದಾರೆ.
ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಹಾಗೂ ಜೆ.ಹರಿಪ್ರಸಾದ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಿನೋದ್ ದೇವ್, ಸುಹಾಸ್ ಆತ್ರೇಯ, ರುದ್ರೇಶ್ ಬೂದನೂರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯರಾಗಿ ಸ್ನೇಹಾ ಭಟ್, ಇಂಚರಾ ಇದ್ದಾರೆ. ಶಿವಮಂಜು, ವೆಂಕಟಾಚಲ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.