ಮೂವಿ ಕ್ಯಾಮೆರಾ ಮತ್ತು ಸ್ಟಡಿಕ್ಯಾಮ್

ಮೂವಿ ಕ್ಯಾಮೆರಾ ಮತ್ತು ಸ್ಟಡಿ ಕ್ಯಾಮ್ ಎನ್ನುವ ಬಿಡಿ ಭಾಗಗಳ ಬಗ್ಗೆ ಎರಡು ಮಾತು..

ಮಣ್ಣಿನ ರಸ್ತೆಯಲ್ಲಿ ಚಲಿಸುತ್ತಿರುವ ಎತ್ತಿನ ಗಾಡಿಯಲ್ಲಿ ಕ್ಯಾಮೆರಾ ಇಟ್ಟು ಚಿತ್ರೀಕರಿಸಿದರೆ ಅಥವಾ..
ಕಥಾ ಪಾತ್ರಗಳು ಅತೀ ವೇಗವಾಗಿ ಜಾಗಿಂಗ್ ಮಾಡುತ್ತಿರುವುದನ್ನು ಹಿಂಬಾಲಿಸಿ ಚಿತ್ರೀಕರಿಸುವ ಸಂದರ್ಭದಲ್ಲಿ ಇಲ್ಲವೇ..

ಅತ್ಯಂತ ವೇಗವಾಗಿ ಚಲಿಸುತ್ತಿರುವ ವಾಹನದಲ್ಲಿ ಕಥಾ ಪಾತ್ರಗಳು ಕುಳಿತಿರುವುದನ್ನು ಸಮನಾಂತರ ಕೋನದಲ್ಲಿ (ಟ್ರ್ಯಾಕಿಂಗ್ ಶಾಟ್ ನ್ನು) ಎಷ್ಟೇ ಜಾಗರೂಕತೆಯಿಂದ ಚಿತ್ರೀಕರಿಸಿದ್ದರೂ……
ಮುಂದೆ……
ರಶ್ ಪ್ರಿಂಟ್ ನ್ನು ವೀಕ್ಷಿಸುವಾಗ ಅಂತಹಾ ಶಾಟ್ಸ್ ಜರ್ಕ್ ಆಗಿರುವುದು ಕೂಡ ಸಾಮಾನ್ಯವಾಗಿರುತ್ತಿತ್ತು!

ಇಂತಹಾ ಅಭಾಸಗಳನ್ನು ಸರಿದೂಗಿಸಲು ಬೆಳಕಿಗೆ ಬಂದದ್ದೇ ಕ್ಯಾಮೆರಾಗೆ ಜೋಡಿಸಬಹುದಾಗಿದ್ದ “ಸ್ಟಡಿಕ್ಯಾಮ್” ಎಂಬ ಬಿಡಿ ಭಾಗಗಳ ಗುಚ್ಛ.

1980ರ ನಂತರ ವಿಶ್ವದಾದ್ಯಂತ ಸಿನಿಮಾ ಚಿತ್ರೀಕರಣದಲ್ಲಿ ವಿಶೇಷವಾದ ಅಥವಾ ಬಹು ಮುಖ್ಯವಾದ ದೃಶ್ಯಗಳನ್ನು ಚಿತ್ರೀಕರಿಸಲು ಬಳಸುತ್ತಿದ್ದ
ಈ ಸ್ಟಡಿಕ್ಯಾಮ್ ನ್ನು ಆಪರೇಟ್ ಮಾಡಲು ಪ್ರತ್ಯೇಕ ಅನುಭವೀ ತಂತ್ರಜ್ಞರನ್ನು ನೇಮಿಸಿಕೊಳ್ಳಬೇಕಾಗಿತ್ತು.

ಇದರ ಬಾಡಿಗೆ ಮತ್ತು ನಿರ್ವಹಣಾ ವೆಚ್ಚವು ದುಬಾರಿಯಾಗಿದ್ದ ಕಾರಣ
ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಮತ್ತು ನಿರ್ದೇಶಕರ ಚಿತ್ರಗಳಲ್ಲಿ ಮಾತ್ರ ಬಳಸಲ್ಪಡುತ್ತಿತ್ತು.

Recommended For You

Leave a Reply

error: Content is protected !!
%d bloggers like this: