ಶಿವಣ್ಣನಿಂದ ‘ಮೊದಲ ಮಿಡಿತ’ದ ಟೀಸರ್

ಚಿತ್ರದ ಹೆಸರು ಮೊದಲ ಮಿಡಿತ. ಆದರೆ ಸಿನಿಮಾ ತಂಡ ಮಾತ್ರ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ವಿವಿಧ ವಿಭಾಗದಲ್ಲಿ ಪರಿಣತಿ ಪಡೆದವರೇ ಎನ್ನುವುದು ವಿಶೇಷ. ಹಾಗಾಗಿ ಸ್ವತಃ ಶಿವರಾಜ್ ಕುಮಾರ್ ಅವರು ಕೂಡ ಮೆಚ್ಚುವಂತೆ ಟೀಸರ್ ಮೂಡಿ ಬಂದಿದ್ದು ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

ಮೊದಲ ಮಿಡಿತ ಎನ್ನುವುದು ಒಂದು ಕೌಟುಂಬಿಕ ಚಿತ್ರವಾಗಿದ್ದು, ಒಂದು ನವಿರಾದ ಪ್ರೀತಿಯ ಎಳೆಯೊಂದಿಗೆ ಚಿತ್ರ ಸಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು 12 ವರ್ಷಗಳಿಂದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಹರಿಚೇತ್ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಅವರೊಂದಿಗೆ ನಿರ್ಮಾಣದಲ್ಲಿ ಕೃ಼ಷ್ಣಪ್ಪ ಜಿ ಎಚ್ ಹಾಗೂ ವಿಶ್ವನಾಥ್ ಮತ್ತಿಬ್ಬರು ಕೂಡ ಕೈ ಜೋಡಿಸಿದ್ದಾರೆ.

ಚಿತ್ರದಲ್ಲಿ ದೊಡ್ಡ ಅನುಭವಿ ಕಲಾವಿದರು ಮತ್ತು ತಂತ್ರಜ್ಞರ ದಂಡೇ ಇದೆ. ನಾಯಕನಾಗಿ ನಿಮಿಷ್, ನಾಯಕಿಯಾಗಿ ರಶ್ಮಿತಾ ರೋಜಾ ನಟಿಸಿದ್ದರೆ ಮುಖ್ಯ ಭೂಮಿಕೆಯಲ್ಲಿ ಟಿ ಎಸ್ ನಾಗಾಭರಣ ನೀರನಹಳ್ಳಿ ರಾಮಕೃಷ್ಣ, ತಬಲನಾಣಿ, ಸಂಗೀತ, ಅರವಿಂದ ರಾವ್, ಕಿಲ್ಲರ್ ವೆಂಕಟೇಶ್, ಶಂಕರ್ ಭಟ್, ಹಾಸ್ಯ ನಟರಾದ ಕೆಂಪೇಗೌಡ, ಹರೀಶ್ ಹೀಗೆ ಸುಮಾರು 25ಕ್ಕೂ ಅಧಿಕ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ.

ಅಗಲಿರುವ ಖ್ಯಾತ ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಅವರ ಗರಡಿಯಲ್ಲಿ ಪಳಗಿದ ರಮೇಶ್ ಚಿತ್ರದ ಛಾಯಾಗ್ರಹಣ ನಿಭಾಯಿಸಿದ್ದು ಈ ಚಿತ್ರದಲ್ಲಿ ಒಟ್ಟು 5ಸಾಹಸ ಸನ್ನಿವೇಶಗಳಿವೆ. ಸಾಹಸ ನಿರ್ದೇಶಕರಾಗಿ ಮೂರು ಮಂದಿ ಖ್ಯಾತ ಸಾಹಸ ನಿರ್ದೇಶಕರಿರುವುದು ಮತ್ತೊಂದು ವಿಶೇಷ. ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು, ಜಾಗ್ವಾರ್ ಸಣ್ಣಪ್ಪ ಹೊಡೆದಾಟಕ್ಕೆ ಜೀವ ತುಂಬಿದ್ದಾರೆ. ಕಲಾ ನಿರ್ದೇಶನವನ್ನು ಮುಂಗಾರುಮಳೆ ಖ್ಯಾತಿಯ ಕಲಾ ನಿರ್ದೇಶಕರಾದ ಕನಕರಾಜ್ ನಿರ್ವಹಿಸಿದ್ದಾರೆ. ಸ್ಟಾರ್ ನಾಗಿ ನೃತ್ಯ ನಿರ್ದೇಶಿಸಿದ್ದು ಚಿತ್ರ ಅಂತಿಮಹಂತದ ತಯಾರಿಯಲ್ಲಿದೆ.

Recommended For You

Leave a Reply

error: Content is protected !!