ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ದಶಕವಾಗಿದೆ. ಆದರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಅವರ ಮೇಲಿರುವ ಅಭಿಮಾನ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.
ಈ ಫೊಟೊದಲ್ಲಿರುವುದು
ಒರಿಸ್ಸಾದ ಸಮುದ್ರ ತೀರ. ಇಲ್ಲಿ ಕಾಣಿಸುತ್ತಿರುವುದು ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!
ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ. ವಿಷ್ಣುವರ್ಧನ್ ಅವರು ನಮ್ಮೊಡನಿದ್ದಿದ್ದರೆ ಇದೇ ಸೆಪ್ಟೆಂಬರ್ 18ರಂದು ಅವರ 71ನೇ ಜನ್ಮದಿನ ಆಚರಿಸಲಾಗುತ್ತಿತ್ತು. ಆದರೆ ಅಭಿಮಾನಿಗಳು ತಮ್ಮ ನೆನಪಲ್ಲಿ ಅವರನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಮರಳುಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಈ ಮರಳು ಶಿಲ್ಪ ಅದಕ್ಕೊಂದು ಉದಾಹರಣೆ.
ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವಿಷ್ಣುಸೇನೆಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.