
ಫ್ಯಾಷನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಲೇ, ಆ ಜಗತ್ತಿಗೆ ಪ್ರತಿಭಾವಂತರನ್ನು ಕೊಡಮಾಡಿರುವ ಸಂಸ್ಥೆ ‘ಕ್ರೀಮ್ ಕಲರ್ಸ್’ ಸ್ಟುಡಿಯೋಸ್. ಸಂಸ್ಥೆಯು ಇದೀಗ ಈ ನೆಲದ ನೈಜ ಘಮವನ್ನು ಫ್ಯಾಶನ್ ಜಗತ್ತಿಗೆ ಪರಿಚಯಿಸುವ ಕ್ರಿಯೆಗೆ ಚಾಲನೆ ನೀಡಿದೆ.
ದೇಸೀ ಕುಶಲಕರ್ಮಿಗಳಿಂದ ನಮ್ಮ ಸೊಗಡಿನ ಕಾಸ್ಟ್ಯೂಮ್‌ಗಳೊಂದಿಗೆ ವಿಶಿಷ್ಟವಾದೊಂದು ಫ್ಯಾಶನ್ ಶೋ ನೆರವೇರಿದೆ. ಈ ಮೂಲಕ ಕುಶಲಕರ್ಮಿಗಳ ವಿನ್ಯಾಸಗಳನ್ನು ಪರಿಚಯಿಸುವುದರೊಂದಿಗೆ ಅವುಗಳಿಗೊಂದು ಮಾರುಕಟ್ಟೆ ಕಲ್ಪಿಸಿ, ಆ ಮೂಲಕ ಪ್ರತಿಭಾವಂತರನ್ನು ಫ್ಯಾಷನ್ ಲೋಕಕ್ಕೆ ಪರಿಚಯಿಸುವ ಉದ್ದೇಶ ಕ್ರೀಮ್ ಕಲರ್ಸ್ ಸ್ಟೂಡಿಯೋ ಸಂಸ್ಥಾಪಕರದ್ದಾಗಿದೆ.
ತುಂಬಾ ಸೂಕ್ಷ್ಮವಾದ, ಇಕೋ ಫೆಂಡ್ಲಿ ವಿನ್ಯಾಸಗಳು ಈ ಫ್ಯಾಶನ್ ಶೋನಲ್ಲಿ ಪ್ರದರ್ಶನಗೊಂಡಿವೆ. ಈ ಮೂಲಕ ಉದ್ಘಾಟನೆಗೊಂಡಿರುವ ಈ ಸ್ಟುಡಿಯೋ ನಮ್ಮ ನಾಡಿನ ಮಟ್ಟಿಗೆ ಬಲು ಅಪರೂಪದ್ದಾಗಿದೆ. ಇಲ್ಲಿ ಎಲ್ಲವೂ ಸುಸಜ್ಜಿತವಾಗಿದ್ದು, ಫೋಟೋಗ್ರಫಿ, ವಿಡಿಯೋಗ್ರಫಿ ಮುಂತಾದವುಗಳಿಗಾಗಿ ಸ್ಟುಡಿಯೋವನ್ನು ಬಾಡಿಗೆಗೆ ಕೊಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಟಾಪ್ ಟು ಬಾಟಮ್ ಫ್ಯಾಶನ್, ಸ್ಟೈಲಿಂಗ್ ಸೇರಿದಂತೆ ಈ ಸ್ಟುಡಿಯೋ ಸರ್ವ ರೀತಿಯಲ್ಲಿಯೂ ಸುಸಜ್ಜಿತವಾಗಿದೆ. ಫ್ಯಾಷನ್ ಜಗತ್ತಿನತ್ತ ನಿಜವಾದ ಆಸಕ್ತಿ ಹೊಂದಿರುವವರನ್ನು ಈ ಸ್ಟುಡಿಯೋ ಮೂಲಕವೇ ತಯಾರು ಮಾಡಿ ಸಜ್ಜುಗೊಳಿಸುವ ಮಹತ್ವಾಕಾಂಕ್ಷೆಯೂ ಆಯೋಜಕರಲ್ಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಅನಿಲ್ ಆನಂದ್, ನಂದಕಿಶೋರ್, ಸಿಂಧು ಲೋಕನಾಥ್, ಸಂಗೀತ ರಾಜೀವ್, ಅರು ಗೌಡ, ಮನೋಹರ್ ಜೋಷಿ ಮುಂತಾದವರು ಭಾಗವಹಿಸಿದ್ದರು. ಹಾಗೇನೇ ಸಂಜೆ ಬೆಂಗಳೂರಿನ ಹೆಸರಾಂತ ಹೋಟೆಲ್ ಒಂದರಲ್ಲಿ ದೊಡ್ದ ಮಟ್ಟದ ಫ್ಯಾಷನ್ ಶೋ ಸಹ ನಡೆದಿದ್ದು, ಮಾಡೆಲ್ಸ್ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಸಂಜೆಯ ಕಾರ್ಯಕ್ರಮದಲ್ಲಿ ನಟಿಯರಾದ ಸೋನು ಗೌಡ, ಭಾವನ ರಾವ್ ಮೊದಲಾದವರು ಪಾಲ್ಗೊಂಡಿದ್ದರು.
