ಮದುವೆಯ ಬಳಿಕ ಮಹಿಳೆ ತಾಯಿಯಾಗುವುದು ಸಾಮಾನ್ಯ. ಆದರೆ ಮದುವೆಯನ್ನೇ ಮರೆಮಾಚಿದ್ದ ಸಂಜನಾ ಗಲ್ರಾನಿ ಇದೀಗ ತಾಯಿಯಾಗುತ್ತಿರುವ ಬಗ್ಗೆ ಸ್ವತಃ ಮಾಹಿತಿ ನೀಡಿದ್ದಾರೆ.
ಗಂಡ ಹೆಂಡತಿ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಸಂಜನಾ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದ್ದು ಡ್ರಗ್ ಕೇಸ್ ಮೂಲಕ. ಜೈಲಿಗೂ ಹೋಗಿ ಬಂದ ಸಂಜನಾ ಅದಾಗಲೇ ಮದುವೆಯಾಗಿರುವುದು ಕೂಡ ಬೆಳಕಿಗೆ ಬಂದಿತ್ತು. ವೈದ್ಯರಾದ ಅಝೀಜ್ ಪಾಷಾ ಅವರನ್ನು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾಗಿ ಸಂಜನಾ ಗಲ್ರಾನಿ ಕೂಡ ಒಪ್ಪಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಮದುವೆ ಫೊಟೊ ಕೂಡ ಸಾಕತ್ತು ವೈರಲ್ ಆಗಿತ್ತು. ಇದೀಗ ಈ ಗಂಡಹೆಂಡತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕಳೆದ ವರ್ಷ ಕೊರೊನಾ ಕಾಲದಲ್ಲಿ ಸಾಕಷ್ಟು ಸಮಾಜ ಸೇವಾಕಾರ್ಯಗಳನ್ನು ಹಮ್ಮಿಕೊಂಡಿದ್ದ ಸಂಜನಾ ಮಾತ್ರ ಯಾವಾಗಲೂ ಕಾಂಟ್ರವರ್ಸಿಯಿಂದಲೇ ಸುದ್ದಿಯಾಗುತ್ತಿರುವುದು ಮಾತ್ರ ವಿಪರ್ಯಾಸ. ಆದರೆ ಸದ್ಯದ ಸುದ್ದಿ ನಿಜಕ್ಕೂ ಖುಷಿ ಪಡುವಂಥ ವಿಚಾರವೇ ಹೌದು. ಆದರೆ ಇದರಲ್ಲಿಯೂ ಕೆಲವರು ಕಾಂಟ್ರವರ್ಸಿ ಮಾಡಲು ಪ್ರಯತ್ನ ಮಾಡ್ತಿದ್ದಾರೆ. ಇಂಥ ಸಂದರ್ಭದಲ್ಲಿ ಆ ರೀತಿಯ ಸುದ್ದಿಗಳನ್ನು ಹಂಚಿಕೊಳ್ಳಲು ಕಷ್ಟವಾಗುತ್ತಿದೆ. ಅದನ್ನಾದರೂ ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ ಸಂಜನಾ. ಕೆಲವೇ ತಿಂಗಳಲ್ಲಿ ಬೇಬಿ ಬಂಪ್ ಪ್ರದರ್ಶನದ ಫೊಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಿರುವುದಾಗಿ ಸಂಜನಾ ಸಿನಿಕನ್ನಡದ ಜೊತೆಗೆ ಹೇಳಿದ್ದಾರೆ.