‘ಜನರಕ್ಷಕ’ ಪೋಸ್ಟರ್ ಲಾಂಚ್

ವಿ2 ಪ್ರೊಡಕ್ಷನ್ ಮೂಲಕ ‘ಜನರಕ್ಷಕ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ಗೌರಿ ಶ್ರೀಯವರು ಚಿತ್ರದ ಪೋಸ್ಟರ್ ಲಾಂಚ್ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಂಡಿದ್ದರು.

ಪೋಸ್ಟರ್ ಲಾಂಚ್ ಮತ್ತು ಸುದ್ದಿಗೋಷ್ಠಿಗೆ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪೋಷಕ ನಟ, ನಿರ್ಮಾಪಕ ಕರಿಸುಬ್ಬು ಅವರು ಮಾತನಾಡಿ, “ಗೌರಿಯವರು ನನಗೆ ನಾಲ್ಕು ವರ್ಷಗಳ ಪರಿಚಯ. ವಿಟು ಡಾನ್ಸ್ ಅಕಾಡೆಮಿಯ ಮೂಲಕ ಗುರುತಿಸಿಕೊಂಡವರು. ಇದೀಗ ತಮ್ಮದೇ ಹಣದಲ್ಲಿ ಚಿತ್ರವೊಂದರ ನಿರ್ಮಾಣಕ್ಕೆ ಮುಂದಾಗಿರುವುದು ಪ್ರಶಂಸಾರ್ಹ ವಿಚಾರ. ಛಾಯಾಗ್ರಾಹಕರಾಗಿ ಪಿಕೆ ಎಚ್ ದಾಸ್ ಅವರು ಚಿತ್ರದ ಶಕ್ತಿಯಾಗಲಿದ್ದಾರೆ ” ಎಂದರು. ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರು ಚಿತ್ರದ ಪೋಸ್ಟರ್ ಲಾಂಚ್ ಮಾಡಿ ನಿರ್ದೇಶಕಿ ಗೌರಿ ಶ್ರೀ ಮತ್ತು ಚಿತ್ರತಂಡಕ್ಕೆ ಶುಭಕೋರಿದರು.

“ಇದು ಪ್ರತಿಯೊಂದು ಮನೆಗೂ ರೀಚ್ ಆಗುವಂಥ ಕಾನ್ಸೆಪ್ಟ್. ಕುಡಿತ ಮನುಷ್ಯನ ಮೇಲೆ ಬೀರುವ ಪರಿಣಾಮ ಏನು? ಅತಿಯಾದರೆ ಅಮೃತವೂ ಹೇಗೆ ವಿಷವಾಗುತ್ತದೆ ಅನ್ನೋದೇ ಕತೆಯ ಮೂಲಕ ಹೇಳಹೊರಟ ಪ್ರಮುಖ ಅಂಶ” ಎಂದ ನಿರ್ದೇಶಕಿ ಗೌರಿ ಶ್ರೀ, “ಒಂದು ಕಡೆ ಜನ ರಕ್ಷಣೆಯ ಕೆಲಸವಾಗುತ್ತಲೇ ಇರುವಾಗ ಮತ್ತೊಂದೆಡೆ ಹೇಗೆ ಭಕ್ಷಣೆಯ ಕಾರ್ಯ‌ಕೂಡ ನಡೆಯುತ್ತದೆ ಅದನ್ನೇ ‘ನಾ ಭಕ್ಷಕ’ ಎಂದು ಉಪಶೀರ್ಷಿಕೆಯಾಗಿ ಸೇರಿಸಿದ್ದೇವೆ ಎಂದು ಗೌರಿ ಶ್ರೀ ಹೇಳಿದರು.

ಚಿತ್ರದಲ್ಲಿ ಒಂದು ತಾಯಿಗೆ ಇಬ್ಬರು ಮಕ್ಕಳಿರುತ್ತಾರೆ. ಒಬ್ಬಾತ ಒಳ್ಳೆಯವನು. ಮತ್ತೊಬ್ಬಾತ ಕೆಟ್ಟ ವ್ಯಕ್ತಿತ್ವದವನು.‌ ಒಳ್ಳೆಯವನ ಪಾತ್ರವನ್ನು ರಘು ನಿರ್ವಹಿಸಿದ್ದಾರೆ.

ಜನರಕ್ಷಕ ಚಿತ್ರದಲ್ಲೊಂದು ಪ್ರಧಾನ ಪಾತ್ರ ವಹಿಸಿರುವ ರತ್ನಮಾಲ ಮಾತನಾಡಿ “ಕೋವಿಡ್ ಓಡಿಸಿದ್ರೆ ಮತ್ತೆ ಮುಂದಿನಂತೆ ಆಗಬಹುದು. ಗೌರಿ ಇತರರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಪ್ರೊಡ್ಯೂಸರ್ ಚೆನ್ನಾಗಿದ್ದರೆ ಎಲ್ಲರೂ ಚೆನ್ನಾಗಿ ಇರುತ್ತಾರೆ ಎಂದರು ನಟಿ ರತ್ನಮಾಲ. ಚಿತ್ರದಲ್ಲಿ ಖಳನಟನಾಗಿ ನಟಿಸಿರುವ ನಟರಾಜ ಮಾತನಾಡಿ ಸಂತ ಸಿನಿಮಾದಲ್ಲಿ ತಾವು ಪ್ರಮುಖ ಖಳನಟನಾಗಿ ನಟಿಸಿದ್ದೇನೆ.‌ ಈಗ ನಿರ್ದೇಶಕಿ ಅವಕಾಶ ಕೊಟ್ಟಿದ್ದಾರೆ ಎಂದರು. ಸುದ್ದಿಗೋಷ್ಠಿಗೂ ಮೊದಲು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು.

Recommended For You

Leave a Reply

error: Content is protected !!