‘ಪುರುಷೋತ್ತಮ’ನ ಆಕರ್ಷಕ ಟ್ರೇಲರ್

ಜಿಮ್ ರವಿ ನಿರ್ಮಿಸಿ ನಾಯಕರಾಗಿ ನಟಿಸುತ್ತಿರುವ ‘ಪುರುಷೋತ್ತಮ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣ ನಿರ್ದೇಶಕ ಅಮರನಾಥ್ ಅವರು ಟ್ರೇಲರ್ ನಲ್ಲಿಯೇ ಮೂಡಿಸಿರುವ ಕುತೂಹಲ ಎಂದೇ ಹೇಳಬಹುದು.

ಒಂದು ಮಗುವಿನ ಮೂಲಕ ನಾಯಕನ ಕುಟುಂಬದ ಪರಿಚಯ ಮಾಡಿಸಲಾಗಿದೆ. ಮಗುವಿನ ತಂದೆಯೇ’ ಚಿತ್ರದ ನಾಯಕ ಪುರುಷೋತ್ತಮ, ಜಿಮ್ ರವಿ ಪುರುಷೋತ್ತಮ ಎನ್ನುವ ಶೀರ್ಷಿಕೆಗೆ ಹೊಂದುವಂತೆ ಜಂಟ್ ಮನ್ ಲುಕ್ಕಲ್ಲಿ ಗಮನ ಸೆಳೆಯುತ್ತಿದ್ದಾರೆ, ಮಗುವಿನ ತಾಯಿ ವಾಸುಕಿಯಾಗಿ ಅಪೂರ್ವ ನಟಿಸಿದ್ದಾರೆ. ಅಪೂರ್ವ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ನೀಡಿರುವ ಅಪೂರ್ವ ಇಲ್ಲಿ ಅಪರೂಪದ ಪಾತ್ರವನ್ನು ನಿಭಾಯಿಸಿರುವುದು ಟ್ರೇಲರ್ ನಲ್ಲೇ ವೇದ್ಯವಾಗುತ್ತದೆ. ಯಕ್ಷಗಾನ ಕಲಾವಿದೆಯೂ ಆಗಿರುವ ವಾಸುಕಿಯ ಬಾಳಿನಲ್ಲಿ ನಡೆಯುವ ಪುಮುಖ ಘಟನೆ ಚಿತ್ರದ ಪುಮುಖ ಘಟ್ಟ ಎನ್ನುವ ಸೂಚನೆ ದೊರಕಿದೆ.

ನಾಯಕ ಪುರುಷೋತ್ತಮ ಚಿತ್ರದಲ್ಲಿ ವಕೀಲ. ಆದರೆ ಗುಣದಲ್ಲಿ ಪುರುಷೋತ್ತಮನಾದ ಕಾರಣ, ವಿಚ್ಛೇದನಕ್ಕಿಂತ ಜೋಡಿಗಳನ್ನು ಬೆಸೆಯುವುದರಲ್ಲೇ ಆಸಕ್ತಿ, ಅದು ಟ್ರೇಲರ್ ಸಂಭಾಷಣೆಯಲ್ಲೇ ವೇದ್ಯವಾಗುತ್ತದೆ. ಆದರೆ ಇಂಥ ಪುರುಷೋತ್ತಮನ ಪತ್ನಿ ಹೇಗಿರುತ್ತಾಳ? ಪತ್ನಿಯ ಸಮಸ್ಯೆಯೇ? ಅಥವಾ ಪುರುಷೋತ್ತಮನೇ ಸಮಸ್ಯೆಯೇ? ಹಾಗಾದರೆ ಪುರುಷೋತ್ತಮ ಹೇಗ ಆಗುತ್ತಾನ? “ಗಂಡ ಹೆಂಡತಿ ಒಬ್ಬರ ಮೇಲೆ ಸಂಶಯ ಪಡುವುದರಿಂದಲೇ ಎಷ್ಟೋ ಸಂಸಾರಗಳು ಮುರಿದು ಬೀಳುತ್ತವೆ” ಎನ್ನುವ ನಾಯಕನ ಮಾತು “ಅಮ್ಮಂಗೆ ಯಾವುದಾದರೂ ಕನೆಕ್ಷನ್ ಇದೆಯಾ ?” ಎನ್ನುವ ಮಗಳ ಮಾತು ನಾಯಕಿಯ ಬಗ್ಗೆ ಇಲ್ಲದ ಸಂದೇಹಗಳನ್ನು ಸೃಷ್ಟಿಸುವಂತಿದೆ. ಇಲ್ಲಿನ ನಾಯಕನೂ ಕೂಡ ಮರ್ಯಾದಾ ಪುರುಷೋತ್ತಮನ ಹಾಗೆ ಅಗಸನ ಮಾತು ಕೇಳಿ ಪತ್ನಿಯನ್ನೇ ಕಾಡಿಗಟ್ಟಿದಂಥ ತೀರ್ಮಾನ ಮಾಡುತ್ತಾನ ಎನ್ನುವುದಕ್ಕೆ ಸಿನಿಮಾದಲ್ಲೇ ಉತ್ತರ ಹುಡುಕಬೇಕಿದೆ.

Recommended For You

Leave a Reply

error: Content is protected !!
%d bloggers like this: