ಕರಿ ಹೈದ ಕರಿ ಅಜ್ಜ ಚಿತ್ರದಲ್ಲಿ ಹಿರಿಯ ನಟಿ ಭವ್ಯಾ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲಿ ಅವರು ಮಂಗಳೂರು ಕರಾವಳಿಯ ಪಂಜ ಎನ್ನುವಲ್ಲಿಗೆ ರಾಣಿಯಾಗಿ ಕಾಣಿಸಿದ್ದಾರೆ. ಪಂಜದ ತಾಯಿ ಎನ್ನುವ ಕಾರಣದಿಂದ ಪಂಜಂತಾಯಿ ಎಂದು ಕರೆಸಿಕೊಳ್ಳುವ ರಾಣಿ. ಈ ಪಾತ್ರವಾಗಿ ನಟಿಸುವಾಗ ಭವ್ಯಾ ಅವರಿಗೆ ಕೆಲವೊಂದು ವಿಶೇಷ ಅನುಭವಗಳು ಆಗಿವೆ.
‘‘ಈ ಸಿನಿಮಾಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ಜೊತೆಗೆ ನನಗೆ ಕೆಲವು ದೃಶ್ಯಗಳಿವೆ. ಒಂದು ದೃಶ್ಯದಲ್ಲಿ ಅವರು ನನ್ನಲ್ಲಿ ಕ್ಷಮೆ ಕೇಳುವ ಸನ್ನಿವೇಶ ಇದೆ. ನಾವು ಆ ದೃಶ್ಯಕ್ಕೆ ಅಷ್ಟೇನೂ ತಯಾರಿ ಮಾಡಿಕೊಂಡಿರಲಿಲ್ಲ. ಆದರೆ ಏನೇನೂ ತಯಾರಿ ಇಲ್ಲದೆ ಮಾಡಿದ್ದರೂ ಕಣ್ಣೀರೇ ಬಂದಿತ್ತು. ನನಗೇನೇ ಆಶ್ಚರ್ಯ ಆಯ್ತು. ಇಲ್ಲಿ ಇಷ್ಟು ಕಣ್ಣೀರು ಅಗತ್ಯವೇ ಎಂದು ನಾನು ನಿರ್ದೇಶಕರಲ್ಲಿ ವಿಚಾರಿಸಿದೆ. ಅವರು ಇದು ಪರ್ಫೆಕ್ಟ್ ಆಗಿದೆ ಎಂದರು. ನನಗೇನೇ ಅರಿವಿಲ್ಲದಂತೆ ದೈವ ನನ್ನಿಂದ ಅಭಿನಯ ತೆಗೆಸಿದೆ ಎನ್ನುವ ಭಾವನೆ ನನಗೆ ಬಂತು’’ ಎಂದರು ಭವ್ಯಾ. ಅವರು ಕರಿ ಹೈದ ಕರಿ ಅಜ್ಜ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನದಿ ಹತ್ತಿರ ಶೂಟಿಂಗ್ ಆಗುತ್ತಿರಬೇಕಾದರೆ, ನದಿಯ ಮತ್ತೊಂದು ಮಗ್ಗುಲಲ್ಲಿ ಪೊಲಿಟಿಕಲ್ ಪಾರ್ಟಿ ಒಂದರ ಜೋರಾದ ಭಾಷಣ, ಅವರ ಫ಼ೋಕಸ್ ಲೈಟ್, ಚಿತ್ರೀಕರಣಕ್ಕೆ ಬೇಕಾದ ಕಪ್ಪು ದೋಣಿಗಾಗಿ ಹುಡುಕಾಟ ಎಲ್ಲಾ ಅಡೆತಡೆಗಳ ನಡುವೆ ಶೂಟಿಂಗ್ ಆಗುವುದೇ ದುಸ್ತರ ಎನಿಸಿತ್ತು. ಸೀನ್ ನಲ್ಲಿ ನದಿ ನೀರಿನ ಪ್ರತಿಬಿಂಬದ ಶಾಟ್ ಬೇಕಾಗಿತ್ತು ಆದ್ರೆ ನದಿಯಲ್ಲಿ ಏಳುತ್ತಿದ್ದ ತೀವ್ರ ವಾದ ಅಲೆಗಳಿಂದ ಪ್ರತಿಬಿಂಬ ದೊರೆಯುವುದು ಅಸಾಧ್ಯವೆನಿಸಿತ್ತು. ಆದರೆ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದ ಹಾಗೆ ಇವೆಲ್ಲ ತೊಂದರೆಗಳು ಕೂಡ ಒಮ್ಮೆಲೆ ಮಾಯವಾಯಿತು. ಟೇಕ್ ತೆಗೆದುಕೊಳ್ಳುವ ವೇಳೆಗೆ ರಾಜಕೀಯ ವ್ಯಕ್ತಿಗಳ ಭಾಷಣ ನಿಂತಿತು, ಅವರ ಫ಼ೋಕಸ್ ಲೈಟ್ ಆಫ್ ಆಯ್ತು, ನಿರ್ದೇಶಕರು ಬಯಸುತ್ತಿದ್ದ ಕಪ್ಪು ಬಣ್ಣದ ಹಳೇ ದೋಣಿಯಲ್ಲಿ ಒಬ್ಬಾತ ಚಿತ್ರೀಕರಣ ನೋಡಲು ಬಂದರು. ಅದೇ ದೋಣಿಯನ್ನು ಸೀನ್ ನಲ್ಲಿ ಬಳಸಿಕೊಳ್ಳಲಾಯಿತು. ಟೇಕ್ ತೆಗೆದುಕೊಳ್ಳಬೇಕೆಂದಾಗ ನದಿಯಲ್ಲಿ ಅಲೆಗಳೂ ನಿಂತು ಅದ್ಭುತವಾದ ಪ್ರತಿಬಿಂಬದ ಶಾಟ್ ಕೂಡಾ ದೊರೆಯಿತು. ಒಮ್ಮಿಂದೊಮ್ಮೆಲೆ ಇಷ್ಟೆಲ್ಲ ಸಂಗತಿ ಕೂಡಿಕೊಂಡು ಬರುವುದನ್ನು ನಾನು ಮೊದಲ ಬಾರಿಗೆ ಕಂಡೆ. ಹಾಗಾಗಿ ಇದನ್ನು ನಾನು ಕೊರಗಜ್ಜನ ಪವಾಡ ಎಂದೇ ನಂಬುತ್ತೇನೆ ಎಂದು ಭವ್ಯಾ.