ಕಿಚ್ಚ ಸುದೀಪ್ ಕನಸಿನ ಕೂಸು KCC (ಕನ್ನಡ ಚಲನಚಿತ್ರ ಕಪ್) ತಂಡಗಳ ರಚನೆ ಮಾಡಲಾಗಿದೆ. 6 ಆಕರ್ಷಕ ತಂಡಗಳ ರಚನೆಯಾಗಿವೆ. ಫೆಬ್ರವರಿ 24 ಮತ್ತು 25ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾವಳಿ ನೆರವೇರಲಿದೆ.
ನಿರ್ದೇಶಕ ನಂದ ಕಿಶೋರ್ ಮೆಂಟರ್ ಆಗಿರುವ ತಂಡಕ್ಕೆ ‘ಹೊಯ್ಸಳ ಈಗಲ್ಸ್’ ಎಂದು ಹೆಸರಿಡಲಾಗಿದೆ. ಈ ತಂಡಕ್ಕೆ ಕೆಂಪು ಮತ್ತು ಕಪ್ಪು ಬಣ್ಣದ ಸಮವಸ್ತ್ರ ಇರುತ್ತದೆ. ಸುದೀಪ್ ಇದರ ಫೇಸ್ ಮತ್ತು ಕ್ಯಾಪ್ಟನ್ ಆಗಿರುತ್ತಾರೆ.
ವೇಲು ಮಾಲೀಕರು.
ಕ್ರಿಸ್ಗೇಲ್ ವಿದೇಶೀ ಆಟಗಾರರು.
ಸಾಗರ್ ಗೌಡ, ಅನೂಪ್ ಭಂಡಾರಿ,
ನಾಗಾರ್ಜುನ ಶರ್ಮ,
ಅರ್ಜುನ್ ಬಚ್ಚನ್ ಆಲ್ ರೌಂಡರ್ ಗಳು. ವಿಶ್ವ (ಬ್ಯಾಟ್ಸ್ಮನ್)
ಮಂಜು ಪಾವಗಡ (ಮೀಡಿಯಂ ಪೇಸ್ ಬೌಲರ್)
ತರುಣ್ ಸುಧೀರ್ (ಸ್ಪಿನ್ ಬೌಲರ್)
ಸುನೀಲ್ ಗೌಡ (ಮೀಡಿಯಂ ಪೇಸ್ ಬೌಲರ್) ಮತ್ತು ವಿಶೇಷ ವಿಭಾಗದಲ್ಲಿ ನಟರಂಗ
ರಾಜೇಶ್ ಮತ್ತು ರೋಹಿತ್ ಇದ್ದಾರೆ. ಸಿನಿಮೇತರ ವಿಭಾಗದಿಂದ
ರಾಜುಗೌಡ, ವಿಕೆಟ್ ಕೀಪರ್ ಆಗಿ
ರೋಹಿತ್ ಗೌಡ ಮತ್ತು
ರಿತೇಶ್ ಭಟ್ಕಳ್ ಹಾಗೂ ಗೇಮ್ ಚೇಂಜರ್ ಆಗಿ
ಅಭಿಷೇಕ್ ಇದ್ದಾರೆ.
ಕೆಆರ್ ಜಿ ಕಾರ್ತಿಕ್ ಗೌಡ ಮೆಂಟರ್ ಆಗಿರುವ ತಂಡ ಗಂಗಾ ವಾರಿಯರ್ಸ್. ಇವರ ಸಮವಸ್ತ್ರ ಹಸಿರು ಮತ್ತು ಕಪ್ಪು ಬಣ್ಣದ್ದಾಗಿದೆ. ಈ ತಂಡಕ್ಕೆ ಧನಂಜಯ್ ಇದರ ಫೇಸ್.
ಡಾರ್ಲಿಂಗ್ ಕೃಷ್ಣ ಇದರ ಕ್ಯಾಪ್ಟನ್.
ಸೈಯದ್ ಮಾಲೀಕರು.
ಸುರೇಶ್ ರೈನಾ ಈ ತಂಡದಲ್ಲಿ ಆಡಲಿರುವ ವೃತ್ತಿಪರ ಕ್ರಿಕೆಟರ್. ಆಲ್ ರೌಂಡರ್ ವಿಭಾಗದಲ್ಲಿ
ಕರಣ್ ಆರ್ಯ,
ನವೀನ್ ರಘು,
ವೈಭವ್ ರಾಮ್ ಮತ್ತು
ಮಲ್ಲಿಕಾರ್ಜುನ್ ಇದ್ದಾರೆ. ಬ್ಯಾಟ್ಸ್ ಮ್ಯಾನ್ ಆಗಿ ಸುದರ್ಶನ್, ಮೀಡಿಯಂ ಪೇಸ್ ಬೌಲರ್ ಆಗಿ ಸುನೀಲ್ ರಾವ್, ಸ್ಪಿನ್ ಬೌಲರ್ ಆಗಿ ಪ್ರಸನ್ನ, ಮೀಡಿಯಂ ಪೇಸ್ ಬೌಲರ್ ಆಗಿ
ಸಿಂಪಲ್ ಸುನಿ ಇದ್ದಾರೆ. ವಿಶೇಷ ವಿಭಾಗದಲ್ಲಿ
ಚೇತನ್ ಕುಮಾರ್,
ರಂಜನ್ ಇದ್ದರೆ ಸಿನಿಮೇತರ ವಿಭಾಗದಿಂದ
ಸುನೀಲ್ ಇದ್ದಾರೆ. ಪ್ರವೀಣ್ ಮತ್ತು
ಶಿವಕುಮಾರ್ ಬಿಯು ವಿಕೆಟ್ ಕೀಪರ್ ಗಳು. ಗೇಮ್ ಚೇಂಜರ್ ಆಗಿ ಡಾರ್ಲಿಂಗ್ ಕೃಷ್ಣ ಇದ್ದಾರೆ.
ದಿನಕರ ತೂಗುದೀಪ ಮೆಂಟರ್ ಆಗಿರುವ ತಂಡ ‘ವಿಜಯನಗರ ಪೇಟ್ರಿಯಾಟ್ಸ್’. ರಾಯಲ್ ಬ್ಲೂ ಮತ್ತು ಬ್ಲಾಕ್ ಇವರ ಸಮವಸ್ತ್ರದ ಬಣ್ಣ. ರಿಯಲ್ ಸ್ಟಾರ್ ಉಪೇಂದ್ರ
ಇದರ ಫೇಸ್. ಪ್ರದೀಪ್ ತಂಡದ ಕ್ಯಾಪ್ಟನ್.
ಆನಂದ್ ಆಡಿಯೋ ಶ್ಯಾಮ್ ಇದರ ಮಾಲೀಕರು. ಹರ್ಷಲ್ ಗಿಬ್ಸ್ ಈ ತಂಡದಲ್ಲಿರುವ ವೃತ್ತಿಪರ ಆಟಗಾರರು. ಪ್ರದೀಪ್ ಗೇಮ್ ಚೇಂಜರ್.
ಆಲ್ ರೌಂಡರ್ ಆಗಿ ತ್ರಿವಿಕ್ರಮ್,
ಗರುಡ ರಾಮ್ ,
ವಿಕಾಸ್ ಮತ್ತು
ಧರ್ಮ ಕೀರ್ತಿರಾಜ್ ಇದ್ದಾರೆ.
ವಿಠಲ್ ಕಾಮತ್ ಬ್ಯಾಟ್ಸ್ಮನ್.
ಕಿರಣ್ ಮೀಡಿಯಂ ಪೇಸ್ ಬೌಲರ್. ಮಹೇಶ್ ಸ್ಪಿನ್ ಬೌಲರ್.
ಸಚಿನ್ ಮೀಡಿಯಂ ಪೇಸ್ ಬೌಲರ್. ವಿಶೇಷ ವಿಭಾಗದಲ್ಲಿ
ಮಯೂರ್ ಪಟೇಲ್ ಮತ್ತು
ನಾಗೇಂದ್ರ ಇದ್ದಾರೆ. ಸಿನಿಮೇತರ ವಿಭಾಗದಲ್ಲಿ
ಪ್ರಜ್ವಲ್, ವಿಕೆಟ್ ಕೀಪರ್ ಆಗಿ
ಆದರ್ಶ್ ಹಾಗೂ ಸ್ಪಿನ್ ಬೌಲರ್ ಆಲ್ ರೌಂಡರ್ ಆಗಿ
ರಜತ್ ಹೆಗ್ಡೆ ಇದ್ದಾರೆ.
ಪ್ರದೀಪ್ ಈ ತಂಡದ ಗೇಮ್ ಚೇಂಜರ್.
ರಾಕ್ಲೈನ್ ವೆಂಕಟೇಶ್ ಮೆಂಟರ್ ಆಗಿರುವ ತಂಡದ ಹೆಸರು ಕದಂಬ ಲಯನ್ಸ್. ಹಳದಿ ಮತ್ತು ಕಪ್ಪು ಇವರ ಸಮವಸ್ತ್ರ. ಗೋಲ್ಡನ್ ಸ್ಟಾರ್ ಗಣೇಶ್ ಇದರ ಫೇಸ್ ಮತ್ತು ನಾಯಕ.
ಯೋಗಿ ಇದರ ಮಾಲೀಕ.
ತಿಲಕರತ್ನೆ ದಿಲ್ಶನ್ ವೃತ್ತಿಪರ ಕ್ರಿಕೆಟಿಗ. ಆಲ್ ರೌಂಡರ್ ಆಗಿ
ರಣುಕ್ ,
ವ್ಯಾಸರಾಜ್,
ಲೋಕಿ ,
ಪ್ರತಾಪ್ ವಿ ಇದ್ದಾರೆ. ಬ್ಯಾಟ್ಸ್ ಮ್ಯಾನ್ ಆಗಿ
ಲೋಕಿ ಸಿಕೆ ಇದ್ದರೆ
ಲೂಸ್ ಮಾದ ಯೋಗಿ ಮೀಡಿಯಂ ಪೇಸ್ ಬೌಲರ್ ವಿಭಾಗದಲ್ಲಿದ್ದಾರೆ.
ಪ್ರೀತಮ್ ಗುಬ್ಬಿ ಸ್ಪಿನ್ ಬೌಲರ್,
ಪವನ್ ಒಡೆಯರ್ ಮೀಡಿಯಂ ಪೇಸ್ ಬೌಲರ್ ಹಾಗೂ ವಿಶೇಷ ವಿಭಾಗದಲ್ಲಿ
ಪವನ್ ಮತ್ತು
ಅಭಿಲಾಷ್ ಇದ್ದಾರೆ. ಸಿನಿಮೇತರ ವಿಭಾಗದಲ್ಲಿ
ಜಗದೀಶ್,
ರಕ್ಷಿತ್ ಇದ್ದಾರೆ.
ರಿಷಿ ಬೋಪಣ್ಣ ಸ್ಪಿನ್ ಆಲ್ ರೌಂಡರ್ ಮತ್ತು ಗೇಮ್ ಚೇಂಜರ್ ಆಗಿ ರಾಜೀವ್ ಇದ್ದಾರೆ.
ಸದಾಶಿವ ಶೆಣೈ ಮೆಂಟರ್ ಆಗಿರುವ ತಂಡದ ಹೆಸರು ರಾಷ್ಟ್ರಕೂಟ ಪ್ಯಾಂಥರ್ಸ್. ಪಿಂಕ್ ಆ್ಯಂಡ್ ಬ್ಲ್ಯಾಕ್ ಇವರ ಸಮವಸ್ತ್ರ.
ಧ್ರುವ ಸರ್ಜ ಇದರ ಫೇಸ್. ಕಾರ್ತಿಕ್ ಜಯರಾಮ್ ಇದರ ಕ್ಯಾಪ್ಟನ್. ಮಂಜು ತಂಡದ ಮಾಲೀಕರು.
ಬದ್ರಿನಾಥ್ ವೃತ್ತಿಪರ ಆಟಗಾರ. ಆಲ್ ರೌಂಡರ್ ವಿಭಾಗದಲ್ಲಿ
ವಿನೋದ್ ಕಿಣಿ,
ಚಂದನ್,
ಸಂಜಯ್,
ಪ್ರತಾಪ್ ನಾರಾಯಣ್ ಇದ್ದಾರೆ. ಬ್ಯಾಟ್ಸ್ ಮ್ಯಾನ್ ಆಗಿ
ಮನು ಅಯ್ಯಪ್ಪ
ಅಲಕ್ ಮೀಡಿಯಂ ಪೇಸ್ ಬೌಲರ್,
ಸಯ್ಯದ್ ಸ್ಪಿನ್ ಬೌಲರ್,
ಜಗದೀಶ್ ಮೀಡಿಯಂ ಪೇಸ್ ಬೌಲರ್ ಆಗಿದ್ದಾರೆ. ವಿಶೇಷ ವಿಭಾಗದಲ್ಲಿ
ಜಗಪ್ಪ ಮತ್ತು
ರಾಘವೇಂದ್ರ ಇದ್ದಾರೆ. ಸಿನಿಮೇತರ ವಿಭಾಗದಲ್ಲಿ
ಸತೀಶ್ ರೆಡ್ಡಿ, ವಿಕೆಟ್ ಕೀಪರ್ ಆಗಿ
ನಿಹಾಲ್ ಉಳ್ಳಾಲ್ ಮತ್ತು
ಅನೀಶ್ವರ್ ಗೌತಮ್ ಇದ್ದರೆ ಗೇಮ್ ಚೇಂಜರ್ ಆಗಿ ತಮನ್ ಇದ್ದಾರೆ.
ಕೆ ಪಿ ಶ್ರೀಕಾಂತ್ ಮೆಂಟರ್ ಆಗಿರುವ ತಂಡದ ಹೆಸರು ಒಡೆಯರ್ ಚಾರ್ಜರ್ಸ್. ಆಕಾಶ ನೀಲಿ ಮತ್ತು ಕಪ್ಪು ಮಿಶ್ರಿತ ಸಮವಸ್ತ್ರ ಇವರದು.
ಶಿವರಾಜ್ ಕುಮಾರ್ ಈ ತಂಡದ ಫೇಸ್ ಮತ್ತು ಕ್ಯಾಪ್ಟನ್.
ಬ್ರಿಯಾನ್ ಲಾರ ವೃತ್ತಿಪರ ಆಟಗಾರ.
ರಮೇಶ್ ರೆಡ್ಡಿ ಇದರ ಮಾಲೀಕರು.
ಧನಂಜಯ್,
ಅರ್ಜುನ್ ಯೋಗಿ,
ನಿರೂಪ್ ಭಂಡಾರಿ
ಸಿ ಎಂ ಹರ್ಷ
ರಾಮ್ ಪವನ್ ಈ ತಂಡದಲ್ಲಿರುವ ಆಲ್ ರೌಂಡರ್ ಗಳು.
ನರೇಶ್ ಗಾಂಧಿ ಬ್ಯಾಟ್ಸ್ಮನ್.
ವಿಜಯ್ ಮೀಡಿಯಂ ಪೇಸ್ ಬೌಲರ್.
ಮಧು ಸ್ಪಿನ್ ಬೌಲರ್.
ಗಣೇಶ್ ರಾಜ್ ಮೀಡಿಯಂ ಪೇಸ್ ಬೌಲರ್. ವಿಶೇಷ ವಿಭಾಗದಲ್ಲಿ
ರವಿಶಂಕರ್ ಗೌಡ ಮತ್ತು
ಆರ್ಯನ್ ಇದ್ದಾರೆ.
ಮೋಹಿತ್ ಬಿ ಎ ವಿಕೆಟ್ ಕೀಪರ್.
ಸಿನಿನೇತರ ವಿಭಾಗದಿಂದ ಶಶಿಕಿರಣ್. ಗೇಮ್ ಚೇಂಜರ್ ಆಗಿ
ರಾಹುಲ್ ಪ್ರಸನ್ನ ಇದ್ದಾರೆ.
======================
ಗ್ರೂಪ್ A
1ಕದಂಬ ಲಯನ್ಸ್
2 ರಾಷ್ಟ್ರಕೂಟ ಪ್ಯಾಂಥರ್ಸ್
3 ವಿಜಯನಗರ ಪೇಟ್ರಿಯಾಟ್ಸ್
ಗ್ರೂಪ್ ಬಿ
1 ಗಂಗಾ ವಾರಿಯರ್ಸ್
2 ಹೊಯ್ಸಳ ಈಗಲ್ಸ್
3 ಒಡೆಯರ್ ಚಾರ್ಜರ್ಸ್
ಮೊದಲ ದಿನದ ಮ್ಯಾಚ್ ಮೊದಲ ಮ್ಯಾಚ್
ಗಂಗಾ ವಾರಿಯರ್ಸ್ ಮತ್ತು ಹೊಯ್ಸಳ ಈಗಲ್ಸ್ ನಡುವೆ ನಡೆಯತ್ತದೆ.
ಎರಡನೇ ಮ್ಯಾಚ್
ಹೊಯ್ಸಳ ಈಗಲ್ಸ್ – ಒಡೆಯರ್ ಚಾರ್ಜರ್ಸ್ ಮಧ್ಯೆ ನಡೆಯುತ್ತದೆ.
ಮೂರನೇ ಮ್ಯಾಚ್
ಕದಂಬ ಲಯನ್ಸ್ ಮತ್ತು ರಾಷ್ಟ್ರಕೂಟ ಪ್ಯಾಂಥರ್ಸ್ ನಡುವೆ ನಡೆಯಲಿದೆ.
ಎರಡನೇ ದಿನ ಮೊದಲ ಮ್ಯಾಚ್
ವಿಜಯನಗರ ಪೇಟ್ರಿಯಾಟ್ಸ್ ವರ್ಸಸ್ – ಕದಂಬ ಲಯನ್ಸ್ ನಡುವೆ ನಡೆಯಲಿದೆ.
ಎರಡನೇ ಮ್ಯಾಚ್
ಗಂಗಾ ವಾರಿಯರ್ -ವರ್ಸಸ್ ಒಡೆಯರ್ ಚಾರ್ಜರ್ಸ್ ಮಧ್ಯೆ ನಡೆಯುತ್ತದೆ.
ಮೂರನೇ ಮ್ಯಾಚ್
ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು ವಿಜಯ ನಗರ ಪೇಟ್ರಿಯಾಟ್ಸ್ ನಡುವೆ ನಡೆಯಲಿದೆ.
ಎರಡೂ ಗ್ರೂಪ್ಗಳ ಟಾಪ್ 2 ಫಿನಾಲೆಯಲ್ಲಿ ಆಡಲಿದೆ.