ಬಾಲಿವುಡ್ ಗೆ ಕಾಲಿಟ್ಟ ಅಭಿನವ ಕಿರಣ್

ಕನ್ನಡದ ಪ್ರತಿಭೆಗಳು ಬಾಲಿವುಡ್ ಗೆ ಹೋಗುವುದು ಹೊಸತೇನಲ್ಲ. ಆದರೆ ಹಾಸನದ ಅಭಿನವ ಕಿರಣ್ ಅವಕಾಶ ಪಡೆದ ರೀತಿಯೇ ವಿಶೇಷ.

ಅಭಿನವ ಕಿರಣ್ ಮೂಲತಃ ಹಾಸನದವರು. ಬಿ.ಕಾಮ್ ಮುಗಿಸಿ, ಬಿಎಡ್ ಮಾಡಿದ್ದಾರೆ.
ಆದರೆ ಆಯ್ಕೆ ಮಾಡಿರುವ ಕ್ಷೇತ್ರವೇ ಬೇರೆ. ಶಾಲಾ ಕಾಲೇಜಿನಲ್ಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ಅಭಿನವ ಕಿರಣ್ ಕನ್ನಡ ಕಿರುತೆರೆಯಲ್ಲಿ ಈಗಾಗಲೇ
ನಟನಾಗಿ ಹೆಸರಾದವರು.

ಇವರು ನಟಿಸಿದ ಧಾರಾವಾಹಿಗಳನ್ನು ಪಟ್ಟಿ ಮಾಡಿದರೆ ‘ಸಪ್ತಪದಿ’, ‘ಪಂಚಕಜ್ಜಾಯ’, ‘ಶ್ರೀಮಾನ್ ಶ್ರೀಮತಿ’, ‘ಮಿಥುನ ರಾಶಿ’ ಹೀಗೆ ಸಾಲು ಸಾಲು ಸೀರಿಯಲ್ ಗಳು ಸಿಗುತ್ತವೆ.

ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ‘ದೇವರ ಮನುಷ್ಯ’, ‘ವೆನಿಲ್ಲಾ’ , ‘ಭೂತಕಾಲ’ ಮೊದಲಾದ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇನ್ನು ಬಿಡುಗಡೆಯಾಗಬೇಕಾದ ‘ಕಿರಾತಕ-೨’, ‘ಜಿಗರ್’, ‘ಭುವನಂ ಗಗನಂ’, ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ಒಂದು ಹೆಜ್ಜೆ ಮುಂದೆಯಿಟ್ಟು ಹಿಂದಿ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ‘Y’ ಹಿಂದಿ ಸಿನಿಮಾದಲ್ಲಿ ನಟಿಸಿರುವ ಇವರಿಗೆ ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಿನಿಮಾ ಈಗಾಗಲೇ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ‘Y’ ಸಿನಿಮಾದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ತಮ್ಮ ನಟನೆಯನ್ನು ಮೆಚ್ಚಿ ಹಿಂದಿ ಪ್ರೊಡಕ್ಷನ್ ಹೌಸ್ ನಿಂದ ಕರೆಗಳು ಬರುತ್ತಿರುವುದು ಖುಷಿ ತಂದಿದೆ ಎನ್ನುತ್ತಾರೆ ಅಭಿನವ ಕಿರಣ್.

ಕನ್ನಡದ ಯುವ ನಟ ಹಿಂದಿ ಸಿನಿಮಾದಲ್ಲೂ ತಮ್ಮ ಛಾಪು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ. ಇನ್ನು ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ಅಭಿನಯಿಸುವ ಕನಸು ಕಟ್ಟಿಕೊಂಡಿರುವ ಇವರ ಕನಸುಗಳು ಅದಷ್ಟು ಬೇಗ ನನಸಾಗಲಿ.

ಉಷಾ ಉಡುಪಿ

Recommended For You

Leave a Reply

error: Content is protected !!